ಚಳ್ಳಕೆರೆ : ಬಯಲು ಸೀಮೆಗೆ ಬಹು ದಿನಗಳ ಕನಸಾದ ಅಪ್ಪರ ಭದ್ರಾ ಯೋಜನೆಯ ಕಾಮಗಾರಿ ಸ್ಥಳ ಪರೀಶಿಲನೆ ನಡೆಸಿದ ನೂತನ ಸರಕಾರದ ಸಚಿವರು ಶಾಸಕರಗಳು ತಂಡೋಪ ತಂಡವಾಗಿ ಆಗಮಿಸಿ ಭದ್ರಾ ಮೇಲ್ದೇಡೆ ಯೋಜನೆ ಕಾಮಗಾರಿಯ ನೀಲಿ ನಕ್ಷೆ ಮೂಲಕ ಮಾಹಿತಿ ಪಡೆದರು.
ಇನ್ನೂ ನೀಲಿ ನಕ್ಷೆ ಮೂಲಕ ಭದ್ರ ಯೋಜನೆಯ ಯಾವ ಮಾರ್ಗದಿಂದ ಸಾಗುತ್ತದೆ ಎಂಬುದನ್ನು ಸ್ಥಳದಲ್ಲಿದ್ದ ಇಂಜಿನಿಯಾರ್ ಗಳಿಂದ ಮಾಹಿತಿ ಪಡೆದರು.
ಇನ್ನೂ ನೂತನ ಸರಕಾರ ಅಧಿಕಾರಿಕ್ಕೆ ಬಂದ ನಂತರ ಬಯಲು ಸೀಮೆಗೆ ನೀರುಣಿಸುವ ಕಾರ್ಯಕ್ಕೆ ಕಲ್ಲಿನ ಕೋಟೆಯ ಎಲ್ಲಾ ಶಾಸಕರು ಸಾಥ್ ನೀಡಿದ್ದಾರೆ.
ಅದರಂತೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರರವರ ಅಧ್ಯಕ್ಷತೆಯಲ್ಲಿ ಅಜ್ಜಂಪೂರದಲ್ಲಿ ನಡೆದ ಭದ್ರಾ ಮೇಲ್ದಂಡೆ ಯೋಜನೆಯ ನಿಲಿನಕ್ಷೆಯನ್ನು ವೀಕ್ಷಿಸಿ ಕಾಮಗಾರಿ ಬಗ್ಗೆ ಚರ್ಚೆ ನಡೆಸಿದರು.
ಈದೇ ಸಂದರ್ಭದಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣ, ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಶಾಸಕ ವೀರೇಂದ್ರ(ಪಪ್ಪಿ), ಹೊಸದುರ್ಗ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ಜಿ.ಗೋವಿಂದಪ್ಪ, ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವರಾದ ಹೆಚ್.ಆಂಜನೇಯ, ಹಾಗೂ ಭದ್ರಾ ಮೇಲ್ದಂಡೆ ಅಧಿಕಾರಿಗಳು ಉಸ್ಥಿತರಿದ್ದರು.