ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೂಕಿನ ಕೆ. ಆರ್. ಹಳ್ಳಿ ಗೇಟ್ ಬಳಿ ಭೀಕರ ಅಪಘಾತದ ಸಂಭವಿಸಿದೆ.
ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಇಚ್ಚರ್ ಲಾರಿ ಅಪಘಾತಕ್ಕೆ ಒಳಗಾಗಿದೆ. ಇನ್ನೂ ಈ ಲಾರಿಯು ಮಹಾರಾಷ್ಟ್ರದಿಂದ ಕೋಲಾರದ ಕಡೆಗೆ , ದನಗಳನ್ನು ತುಂಬಿಕೊಂಡು ಹೋಗುವಾಗ , ಮತ್ತೊಂದು ಲಾರಿ ಎದುರಿಗೆ ಬಂದು ಡಿಕ್ಕಿ ಹೊಡೆದ ಪರಿಣಾಮವಾಗಿ, ಲಾರಿಯಲ್ಲಿದ್ದ 10 ದನಗಳ ಪೈಕಿ 7 ದನಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೂ 2 ದನಗಳಿಗೆ ಗಂಭೀರ ಗಾಯವಾಗಿದೆ. ಉಳಿದ 1 ದನ ಮಾತ್ರ ಕ್ಷೇಮವಾಗಿದೆ ಎಂದು ತಿಳಿದು ಬಂದಿದೆ.
ಎರಡು ಲಾರಿಗಳು ಅಪಘಾತವಾದ ರಭಸಕ್ಕೆ ಲಾರಿಯಲ್ಲಿದ್ದ ದನಗಳು ಚೆಲ್ಲಾಪಿಲ್ಲಿಯಾಗಿ ರೋಡಿಗೆ ಬಿದ್ದಿವೆ.
ಡ್ರೈವರ್ ಸ್ಥಿತಿ ಗಂಭೀರವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.