ಚಳ್ಳಕೆರೆ : ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ನೂತನ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ರವರ ಜನ್ಮದಿನವು ಇದೇ ತಿಂಗಳ ಜೂನ್ 30 ರಂದು ಇರುವ ಬೆನ್ನಲೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪ್ಲೆಕ್ಸ್ ಬ್ಯಾನರ್ ಕಟ್ಟುವುದರ ಮೂಲಕ ನೆಚ್ಚಿನ ಶಾಸಕರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಲು ಸಜ್ಜಾಗಿದ್ದಾರೆ.
ಅದರಂತೆ ಚಳ್ಳಕೆರೆ ನಗರದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ರವರ ಸ್ವಗೃಹದಲ್ಲಿ ಚಿತ್ರದುರ್ಗದ ಮಾಜಿ ನಗರಸಭೆ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಡಿ.ಮಲ್ಲಿಕಾರ್ಜುನ ರವರು ಇಂದು ಕೆ ಸಿ ನಾಗರಾಜ್ ರವರ ಉಪಸ್ಥಿತಿಯಲ್ಲಿ”ಹುಟ್ಟುಹಬ್ಬದ ಪೋಸ್ಟ್ ರ್” ಬಿಡುಗಡೆ ಮಾಡಿದರು.
ಈದೇ ಸಂಧರ್ಭದಲ್ಲಿ
ನಗರಸಭಾ ಸದಸ್ಯರಾದ ಡಿ. ಮಲ್ಲಿಕಾರ್ಜುನ್ ಹಾಗೂ ಅವರ ಸ್ನೇಹಿತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.