ಚಳ್ಳಕೆರೆ : ಬಯಲು ಸೀಮೆಯಲ್ಲಿ ಗೋವುಗಳ ರಕ್ಷಣೆ ಒಂದು ಸವಾಲಾಗಿ ಪರಿಣಮಿಸಿದೆ ಹೌದು ಸಕಾಲಕ್ಕೆ ಮಳೆ ಇಲ್ಲದೆ ದನಕರುಗಳಿಗೆ ಮೇವಿಲ್ಲದೆ ರೈತರು ಹೈರಾಣಗಿದ್ದಾರೆ ಇನ್ನೂ ದೇವರ ಗೋವುಗಳ ಕಷ್ಟವಂತೂ ಆ ದೇವರೆ ಬಲ್ಲ ಇನ್ನೂ ಕಳೆದ ಹಲವು ವರ್ಷಗಳಿಂದ ದೇವರ ಎತ್ತುಗಳ ರಕ್ಷಣೆಗೆ ಸುಧಾ ಮೂರ್ತಿ ರವರ ನೇತೃತ್ವದಲ್ಲಿ ಪಾವಗಡದ ಶ್ರೀ ರಾಮಮಕೃಷ್ಣ ಸೇವಾ ಆಶ್ರಮದಿಂದ ದೇವರ ಗೋವುಗಳಿಗೆ ಮೇವು ಕೊಡುವುದರಿಂದ ಇನ್ನೂ ಇಲ್ಲಿನ ಬುಡಕಟ್ಟು ಸಂಪ್ರಾದಯಗಳಿಗೆ ಮರು ಜೀವ ಬಂದAತಾಗಿದೆ ಇನ್ನೂ ಸರಕಾರಗಳ ಏರುಪೇರುಗಳಿಂದ ಬಯಲು ಸೀಮೆಯ ಜನರ ಹಾಗೂ ಗೋವುಗಳ ಸಂಕಷ್ಟಕ್ಕೆ ಮರಗದೆ ಆಳುವ ಸರಕಾರಗಳು ಇರುವುದು ಗೋಷರಿಸುತ್ತಿದೆ.ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಪೂಜ್ಯಸ್ವಾಮಿ ಜಪಾನಂದಜಿರವರ ಈ ಕುರಿತು ಮಾತನಾಡಿ ಅವರು ಕರ್ನಾಟಕದ ಅನೇಕ ಭಾಗಗಳಲ್ಲಿ ಅಲ್ಪಸ್ವಲ್ಪ ಮಳೆಯಾಗುತ್ತಿದ್ದು ಮುಂಗಾರು ಚಳ್ಳಕೆರೆ ಸುತ್ತಮುತ್ತ ಭಾಗಗಳಲ್ಲಿ ಇನ್ನೂ ಕಣ್ಣುಮುಚ್ಚಾಲೆ ಆಡುತ್ತಿದೆ ಎನ್ನಬಹುದು. ಈ ಪ್ರದೇಶಗಳಲ್ಲಿನ ಸ್ಥಿತಿಯನ್ನು ಅರಿಯಲು ಅನೇಕ ದೇವರ ಎತ್ತುಗಳ ಹಟ್ಟಿಗಳಿಗೆ ಭೇಟಿ ನೀಡಿ ಗೋಪಾಲಕರ ಕಷ್ಟನಷ್ಟಗಳನ್ನು ಅರಿತು, ಮಳೆ ಪೂರ್ಣ ಪ್ರಮಾಣದಲ್ಲಿ ಬರುವವರೆಗೆ ಸುಧಾಮೂರ್ತಿ ರವರ ಪ್ರಾಯೋಜಕತ್ವದಲ್ಲಿ ಮೇವು ವಿತರಣಾ ಯೋಜನೆಯನ್ನು ಮುಂದುವರಿಸಲಾಗುವುದು ಎಂದು ಭರವಸೆ ನೀಡಿದರು.ಪೂಜ್ಯ ಸ್ವಾಮಿ ಜಪಾನಂದಜೀ ರವರು ಸರ್ಕಾರಕ್ಕೆ ಎಲ್ಲ ವಿಚಾರಗಳನ್ನು ಸಮರ್ಪಕವಾಗಿ ತಿಳಿಸಿ ಸಹಸ್ರಾರು ಗೋವುಗಳ ಜೀವವನ್ನು ಉಳಿಸುವಂತೆ ಮೂಲಕ ಗೋ ಸಂಪತ್ತು ಬೆಳೆಸಬೇಕು ಎಂದರು.ಇದೇ ಸಂದರ್ಭದಲ್ಲಿ ದೂರದ ಆಂಧ್ರ ರಾಜ್ಯದಿಂದ ಖರೀದಿಸಲ್ಪಟ್ಟ ಮೇವುಗಳನ್ನು ವಿತರಿಸಲಾಯಿತು. ಕಳೆದ ಏಪ್ರಿಲ್ ತಿಂಗಳಿನಿAದ ನಿರಂತರವಾಗಿ ಚಳ್ಳಕೆರೆ, ನಾಯಕನಹಟ್ಟಿ, ಮೊಣಕಾಲ್ಮೂರು, ಅಜ್ಜನಗುಡಿ, ಮುತ್ತಿಗಾನಹಳ್ಳಿ, ಸೂರಮ್ಮನಹಳ್ಳಿ, ನೇರಲಕುಂಟೆ ಪ್ರದೇಶಗಳಲ್ಲಿ ಸರಿಸುಮಾರು 50ಕ್ಕೂ ಮಿಗಿಲಾದ ದೇವರ ಹಸುಗಳ ಹಟ್ಟಿಗಳಿಗೆ ವಿತರಿಸಲಾಗುತ್ತಿದೆ. ಕಳೆದ ಮೂರು ತಿಂಗಳ ಹಿಂದೆ ಚುನಾವಣೆಯ ನೆಪದಿಂದ ಸಂಬAಧಪಟ್ಟ ಅಧಿಕಾರಿಗಳು ನೀತಿ ಸಂಹಿತೆಯ ನೆಪವೊಡ್ಡಿ ಮೇವನ್ನು ವಿತರಿಸಲಾಗಲಿಲ್ಲ, ಈಗ ನೂತನ ಸರ್ಕಾರ ರಚಿತವಾಗಿದ್ದರೂ, ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಯೋಜನೆಗಳನ್ನು ಕೈಗೆತ್ತಿಕೊಂಡಿಲ್ಲ. ಆದ್ದರಿಂದ ಬಡ ಮೂಕ ಪ್ರಾಣಿಗಳು ಮೇವಿಲ್ಲದೆ ಸೊರಗಿ ಇದ್ದ ಬದ್ದ ಗಿಡಗುಂಟೆಗಳು, ಕಡ್ಡಿ ಕಸಗಳನ್ನು ತಿನ್ನುತ್ತಾ ಬದುಕುತ್ತಿರುವುದನ್ನು ಕಾಣಬಹುದಾಗಿದೆ. ಇಲ್ಲಿ ಸರಿಯಾದ ರೀತಿಯಲ್ಲಿ ಸಂಬAಧಪಟ್ಟ ಅಧಿಕಾರಿಗಳು ಮೂಕ ಪ್ರಾಣಿಗಳ ರಕ್ಷಣೆಗೆ ಬಂದಿದ್ದೆ ಆದಲ್ಲಿ ಖಂಡಿತವಾಗಿ ಈ ಸಾವಿರಾರು ದೇವರ ಹಸುಗಳು, ಎತ್ತುಗಳು, ಕರುಗಳು ಮೇವನ್ನು ಪಡೆದು ನೆಮ್ಮದಿಯ ಜೀವನವನ್ನು ನಡೆಸಬಹುದಾಗಿತ್ತು. ಆದರೆ ದೂರದ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಪೂಜ್ಯಸ್ವಾಮಿ ಜಪಾನಂದಜಿರವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಏಪ್ರಿಲ್ ತಿಂಗಳಿನಿAದ ಏಕಪ್ರಕಾರವಾಗಿ ನಡೆದುಕೊಂಡು ಬರುತ್ತಿರುವುದು ನಿಜಕ್ಕೂ ಆಶ್ಚರ್ಯವಾಗುತ್ತದೆ ಎಂದು ಬುಡಕಟ್ಟು ಸಮುದಾಯ ಸ್ವಯಂ ಸೇವಕ ಮಹೇಶ್ ಹೇಳುತ್ತಾರೆ.ಈಗಲಾದರೂ ಅಧಿಕಾರಿಗಳು ಎಚ್ಚೆತ್ತಿಕೊಂಡು ಸಾವಿರಾರು ಸಂಖ್ಯೆಯ ಮೂಕ ಪ್ರಾಣಿಗಳಿಗೆ ನೆರವು ನೀಡಬೇಕೆಂದು ಈ ಮೂಲಕ ಬುಡುಕಟ್ಟು ಸಮುದಾಯ ಕಿಲಾರಿಗಳು ಕೋರಿಕೊಳ್ಳುತ್ತಿದ್ದಾರೆ. ಮಳೆ ಇನ್ನೂ ಬಾರದೇ ಇರುವುದರಿಂದ ಶ್ರೀರಾಮಕೃಷ್ಣ ಸೇವಾಶ್ರಮ, ಪಾವಗಡದ ವತಿಯಿಂದ ಕಾರ್ಯಕ್ರಮ ಮುಂದುವರಿಯುತ್ತದೆ ಎನ್ನಲಾಗಿದೆ ಎಂದು ಕಿಲಾರಿಗಳಾದ ಪಾಲಯ್ಯ, ಚಿನ್ನಯ್ಯ, ಪಾಪಯ್ಯ ಹಾಗು ಈ ಯೋಜನೆಯ ಸಂಯೋಜಕರಾದ ಮಹೇಶ್ ಹಾಗೂ ಸಿದ್ದೇಶ್ ತಿಳಿಸಿದ್ದಾರೆ.

About The Author

Namma Challakere Local News
error: Content is protected !!