ಚಳ್ಳಕೆರೆ : ಗ್ರಾಮೀಣ ಪ್ರದೇಶದಿಂದ ನಗರದ ಸಾರ್ವಜನಿಕರ ಆಸ್ವತ್ರೆಗೆ ತುಂಬು ಗರ್ಭಿಣಿ ಮಹಿಳೆಯೊಬ್ಬರನ್ನು ಆಂಬುಲೇನ್ಸ್ ನಲ್ಲಿ ಕರೆತರುವ ಸಂಧರ್ಭದಲ್ಲಿ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿರುವಂತ ಘಟನೆ ತಾಲ್ಲೂಕಿನ ದಾಸರಹಳ್ಳಿಯಲ್ಲಿ ನಡೆದಿದೆ.
ತಾಲ್ಲೂಕಿನ ತಳಕು ಹೋಬಳಿಯ ದಾಸರಹಳ್ಳಿ ಗ್ರಾಮದ ಗರ್ಭಿಣಿ ಶಿವಮ್ಮ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಚಿಕಿತ್ಸೆಗಾಗಿ ಆಂಬುಲೆನ್ಸ್ ನಲ್ಲಿ ದಾಸರಹಳ್ಳಿ ಗ್ರಾಮದಿಂದ ತಾಲ್ಲೂಕು ಸಾರ್ವಜನಿಕ ಆಸ್ಪತ್ರಗೆ ಬರುವಾಗ ಮಹಿಳೆ ಶಿವಮ್ಮ ಹೆರಿಗೆ ನೋವು ಹೆಚ್ಚಾಗಿದ್ದು ಮಾರ್ಗ ಮಧ್ಯದಲ್ಲಿ ಆರೋಗ್ಯ ಸಹಾಯಕರಾದ ರಾಜನಾಯಕ್ ಅವರು ಆಂಬ್ಯುಲೆನ್ಸ್ ನಲ್ಲಿ ಹೆರೆಗೆ ಮಾಡಿಸಿದ್ದಾರೆ. ಇನ್ನು ತಾಯಿ ಮಗುವು ಆರೋಗ್ಯವಾಗಿದ್ದಾರೆ.

About The Author

Namma Challakere Local News
error: Content is protected !!