ಚಿತ್ರದುರ್ಗ : ಕಾಲೇಜು ಶಿಕ್ಷಣ ಇಲಾಖೆ, ರಾಷ್ಟಿçÃಯ ಸೇವಾ ಯೋಜನೆ, ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ನಡೆದ ಔಪಚಾರಿಕ ಶಿಕ್ಷಣ ಹಾಗೂ ನಿಯಮಿತ ಉದ್ಯೋಗದಲ್ಲಿಲ್ಲದ ಯುವಕ/ಯುವತಿಯರ ಸಮೀಕ್ಷೆ ಕುರಿತು ಚಿತ್ರದುರ್ಗ ಜಿಲ್ಲೆಯ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಿಗೆ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ದಾವಣಗೆರೆ ವಿಶ್ವವಿದ್ಯಾನಿಲಯದ ರಾಷ್ಟಿçÃಯ ಸೇವಾ ಯೋಜನಾ ಸಂಯೋಜಕನಾಧಿಕಾರಿಗಳಾದ ಡಾ. ಅಶೋಕಕುಮಾರ್ ವಿ. ಪಾಳೇದ, ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಇದೊಂದು ಸೇವಾ ಮನೋಭಾವ ಇಟ್ಟು ನಡೆಯುವ ಕಾರ್ಯಕ್ರಮ ಎಂದು ಹೇಳಿದರಲ್ಲದೆ ನಾವುಗಳು ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್. ಶಿಬಿರಗಳನ್ನು ಏರ್ಪಡಿಸಬೇಕು. ವಿದ್ಯಾರ್ಥಿಗಳಿಗೆ ಕಾಯಕದ/ಶ್ರಮದಾನದ ಮಹತ್ವವನ್ನು ಪರಿಚಯಿಸಬೇಕು. ನಮ್ಮಲ್ಲಿ ಇಚ್ಛಾಶಕ್ತಿಯ ಕೊರತೆಯಾಗಬಾರದು. ಶಿಬಿರಗಳನ್ನು ಮಾಡಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಜಗತ್ತಿನಲ್ಲಿ ಯಾವುದಾದರೂ ಉತ್ತಮ ಸಂಘಟನೆ ಎಂದರೆ ಎನ್.ಎಸ್.ಎಸ್. ಸಂಘಟನೆ, ವಿದ್ಯಾರ್ಥಿಗಳಲ್ಲಿ ಸಂಘಟನಾ ಶಕ್ತಿ ತುಂಬಬೇಕು. ಅವರಲ್ಲಿ ಆಶಾಭಾವನೆ ಮೂಡಿಸಬೇಕು. ನಾನು ಬದುಕಬಲ್ಲೆ ಎಂಬ ವಿಶ್ವಾಸ ಮೂಡಿಸಬೇಕು ಎಂದರು.
ಶ್ರೀ ಅಣ್ಣೇಶ್:- ಎನ್.ಎಸ್.ಎಸ್.ಸಂಯೋಜನಾಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಲಾಗಿ ಮಾತನಾಡಿದ ಅವರು ಔಪಚಾರಿಕ ಶಿಕ್ಷಣ ಹಾಗೂ ನಿಯಮಿತ ಉದ್ಯೋಗದಲ್ಲಿಲ್ಲದ ಯುವಕರ ಸಮೀಕ್ಷೆ ಹೇಗೆ ಮೂಡಬೇಕೆಂಬುದರ ಬಗ್ಗೆ ವಿವರಣೆ ನೀಡಿದರು.
ಡಾ. ಲೋಕೇಶ್ ನಾಯಕ್:- ರಾಷ್ಟಿçÃಯ ಸೇವಾ ಯೋಜನಾ ನೋಡಲ್ ಅಧಿಕಾರಿಗಳು ಹಾಗೂ ಮಾಜಿ ಎನ್.ಎಸ್.ಎಸ್. ಅಧಿಕಾರಿಗಳಾದ ಪ್ರೊ. ಪರಶುರಾಮ ಕಟಾವಕರ ಇವರು ಎನ್.ಎಸ್.ಎಸ್. ಶ್ರಮದಾನದ ಬಗ್ಗೆ ಮಾತನಾಡಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲ್. ಈಶ್ವರಪ್ಪ ಅವರು ಸಮಾಜದ ಸೇವೆಗೆ ನಮ್ಮನ್ನು ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಹೆಚ್ಚು ಪಾಲ್ಗೊಳ್ಳುವಂತೆ ಪ್ರೇರಣೆ ನೀಡಬೇಕು. ಪಠ್ಯಕ್ರಮದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಮಾತನಾಡಿದರು.
ಕು. ಬನಶ್ರೀ ಮತ್ತು ಕು. ಚಂದನ ಪ್ರಾರ್ಥಿಸಿದರು. ಗ್ರಂಥಾಧಿಕಾರಿಗಳು ಹಾಗೂ ಐಕ್ಯೂಎಸಿ ಸಂಚಾಲಕರಾದ ಶ್ರೀ ಎನ್. ಚಲುವರಾಜು ಸ್ವಾಗತಿಸಿದರು. ಶ್ರೀ ಜಿ.ಎಸ್. ನಾಗರಾಜ ವಂದಿಸಿದರು. ಶ್ರೀ ಎಲ್. ರಾಜಾನಾಯ್ಕ ನಿರೂಪಿಸಿದರು.

Namma Challakere Local News
error: Content is protected !!