ಪರಶುರಾಮಪುರ : ಸರ್ಕಾರಿ ಶಾಲಾ ಮಕ್ಕಳಿಗೆ ಸಮುದಾಯದವರಿಂದ ಸೂಕ್ತ ಪ್ರೋತ್ಸಾಹ ನೆರವು, ವೈಜ್ಞಾನಿಕ ತಳಹದಿಯ ಗುಣಮಟ್ಟದ ಶಿಕ್ಷಣ ಲಭಿಸಿದರೆ ಅವರು ಅಪರಿಮಿತ ಸಾಧನೆಗೈಯುವರು ಎಂದು ಚಿತ್ರದುರ್ಗ ಜಿಪಂ ಮಾಜಿ ಅಧ್ಯಕ್ಷೆ ಸಣ್ಣತಿಮ್ಮಕ್ಕ ಆರ್ ರಂಗಸ್ವಾಮಿ ಹೇಳಿದರು
ಗ್ರಾಮದ ಹೊರವಲಯದ ಕರೇಕಲ್‌ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ, ಶ್ರೀ ಗೊಲ್ಲಾಳ್ಳೇಶ್ವರಿದೇವಿ ಸ್ವ ಸಹಾಯ ಮಹಿಳಾ ಸಂಘ, ಶಾಲಾ ಸಮಿತಿ ಹಾಗೂ ಪಿಆರ್‌ಪುರದ ಅಭಿರುಚಿ ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆಯ ಸಹಯೋಗದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷೆ ಸಣ್ಣತಿಮ್ಮಕ್ಕ ಆರ್ ರಂಗಸ್ವಾಮಿ,
ಉಳ್ಳವರು ಆಯಾ ವ್ಯಾಪ್ತಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕಲಿಕೆಗೆ ಪ್ರೋತ್ಸಾಹಿಸಲು ಅಗತ್ಯ ಪರಿಕರಗಳು ಲೇಖನಿ ಸಾಮಗ್ರಿಗಳೂ ಸೇರಿದಂತೆ ಮಕ್ಕಳ ಪಠ್ಯ ಸಹಪಠ್ಯ ಚಟುವಟಿಕೆಗಳಿಗೆ ಸಹಕಾರಿಯಾಗುವ ಪರಿಕರಗಳನ್ನು ನೀಡುವುದರಿಂದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದರು
ಗ್ರಾಪA ಸದಸ್ಯ ಕರೇಕಲ್‌ಹಟ್ಟಿರಾಮಣ್ಣ ಪ್ರಾಸ್ತಾವಿಕ ಮಾತನಾಡಿ ಸಮುದಾಯದ ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳ ಸಮಗ್ರ ಅಭಿವೃಧ್ದಿಗೆ ಕೈಜೋಡಿಸಬೇಕು ಪಿಆರ್‌ಪುರ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃಧ್ದಿಗೆ ಗ್ರಾಪಂ ಸೂಕ್ತ ಯೋಜನೆ ಸಿದ್ದಪಡಿಸಲು ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು
ಶ್ರೀ ಗೊಲ್ಲಾಳ್ಳೇಶ್ವರಿದೇವಿ ಸ್ವ ಸಹಾಯ ಮಹಿಳಾ ಸಂಘದ ಗೌರವಾಧ್ಯಕ್ಷೆ ಸಣ್ಣೀರಮ್ಮ ಲೇಖನಿ ಸಾಮಗ್ರಿಗಳ ಉಚಿತ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ವತಿಯಿಂದ ಮಕ್ಕಳ ಕಲಿಕೆಯನ್ನು ಉತ್ತಮಪಡಿಸಲು ಮೊದಲ ಹಂತದಲ್ಲಿ ಲೇಖನಿ ಸಾಮಗ್ರಿಗಳನ್ನು ನೀಡಲಾಗುತ್ತಿದೆ ಮುಂದಿನ ದಿನಮಾನಗಳಲ್ಲಿ ಮಕ್ಕಳ ಅಗತ್ಯತೆಗಳನ್ನು ಸಂಘದ ಹಣದಿಂದ ಪೂರೈಸಲು ಸಂಘದ ನಿರ್ದೇಶಕರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು
ಶಾಲಾ ಮುಖ್ಯಶಿಕ್ಷಕ ಜೀವನಾಥ, ಅಭಿರುಚಿ ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಚಿತ್ತಯ್ಯ ಮಾತನಾಡಿದರು ಸಂದರ್ಭದಲ್ಲಿ ಗ್ರಾಪಂ ಸದಸ್ಯ ರಾಮಣ್ಣ, ಗ್ರಾಮಸ್ಥರಾದ ಸಣ್ಣತಿಮ್ಮಣ್ಣ, ಕರಿಯಣ್ಣ, ನರಸಪ್ಪ ಚಿತ್ತಪ್ಪ, ಶಿಕ್ಷಕ ನಾಗರಾಜು, ಅಡುಗೆ ಸಿಬ್ಬಂದಿ ಸುರೇಶ, ಶೈಲಮ್ಮ ಶಾಲಾ ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು
ಪೋಟೋ (ಪಿಆರ್‌ಪುರ ವಿತರಣೆ 8 )
ಪರಶುರಾಮಪುರ ಸಮೀಪದ ಗ್ರಾಮದ ಹೊರವಲಯದ ಕರೇಕಲ್‌ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ, ಶ್ರೀ ಗೊಲ್ಲಾಳ್ಳೇಶ್ವರಿದೇವಿ ಸ್ವ ಸಹಾಯ ಮಹಿಳಾ ಸಂಘ, ಶಾಲಾ ಸಮಿತಿ ಹಾಗೂ ಪಿಆರ್‌ಪುರದ ಅಭಿರುಚಿ ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆಯ ಸಹಯೋಗದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಲೇಖನಿ ಸಾಮಗ್ರಿಗಳನ್ನು ಜಿಪಂ ಮಾಜಿ ಅಧ್ಯಕ್ಷೆ ಸಣ್ಣತಿಮ್ಮಕ್ಕ ಆರ್ ರಂಗಸ್ವಾಮಿ ವಿತರಿಸಿದರು ಶಾಲಾ ಮುಖ್ಯಶಿಕ್ಷಕ ಜೀವನಾಥ, ಅಭಿರುಚಿ ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಚಿತ್ತಯ್ಯ ಮಾತನಾಡಿದರು ಸಂದರ್ಭದಲ್ಲಿ ಗ್ರಾಪಂ ಸದಸ್ಯ ರಾಮಣ್ಣ, ಗ್ರಾಮಸ್ಥರಾದ ಸಣ್ಣತಿಮ್ಮಣ್ಣ, ಕರಿಯಣ್ಣ, ನರಸಪ್ಪ ಚಿತ್ತಪ್ಪ, ಶಿಕ್ಷಕ ನಾಗರಾಜು, ಅಡುಗೆ ಸಿಬ್ಬಂದಿ ಸುರೇಶ, ಶೈಲಮ್ಮ ಶಾಲಾ ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು

Namma Challakere Local News
error: Content is protected !!