ಚಳ್ಳಕೆರೆ : ಚಳ್ಳಕೆರೆ ನಗರದ ತಾಲ್ಲೂಕು ಕಛೇರಿಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ ಪೋರ್ಸ್ ಸಭೆಯಲ್ಲಿ ತಹಶಿಲ್ದಾರ್ ರೇಹಾನ್ ಪಾಷ ಮಾತನಾಡಿ, ನಿಮ್ಮ ವ್ಯಾಪ್ತಿಯಲ್ಲಿ ಬರುವ ಹಲವು ಯೋಜನೆಗಳನ್ನು ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ತಲುಪಿಸಬೇಕು,
ಅದರಂತೆ ಕೇವಲ ನೆಪ ಮಾತ್ರಕ್ಕೆ ಕರ್ತವ್ಯ ನಿರ್ವಹಿಸದೆ ಗ್ರಾಮಿಣ ಪ್ರದೇಶದ ಕಟ್ಟ ಕಡೆಯ ವ್ಯಕ್ತಿಗೆ ಸರಕಾರ ಯೋಜನೆಗಳನ್ನು ನಾವು ನೀವು ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸನ್ನದರಾಗಬೇಕು ಎಂದು ಹೇಳಿದರು.
ಇನ್ನೂ ಸಭೆಯಲ್ಲಿ ಮಕ್ಕಳ ಹಲ್ಲುಗಳ ಮೇಲೆ ಬೀರುವ ಪರಿಣಾಮವನ್ನು ತಡೆಗಟ್ಟಲು ಹಾಗೂ ಅವರು ಸೇವಿಸುವ ಆಹಾರದ ಕ್ರಮವನ್ನು ಪರಿಶೀಲಿಸಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಾಗೂ ಹಾಸ್ಟೆಲ್‌ಗಳಲ್ಲಿ ವಾಸ ಮಾಡುವ ವಿದ್ಯಾರ್ಥಿಗಳ ಇತ ದೃಷ್ಠಿಯಿಂದ ಪ್ಲೋರೈಡ್ ಯುಕ್ತ ನೀರು ಸೇವನೆ ಹಾಗು ಇತರೆ ಪೋಷ್ಠಿಕಾಂಶ ಇಲ್ಲದೆ ಇರುವು ಆಹಾರ ಸೇವೆನೆ ಇದಕ್ಕೆ ಕಾರಣವಾಗಿದೆ, ಇನ್ನೂ ಮೂಳೆ ಹಾಗೂ ದಂತ ಗಟ್ಟಿಯಿಲ್ಲದೆ ಇರುವುದು ಕಂಡು ಬಂದಿದೆ. ಆದ್ದರಿಂದ ಕ್ಯಾಲ್ಸಿಯಂ ಕಡಿಮೆ ಪ್ರಮಾಣ ಇರುವ ಮಕ್ಕಳಿಗೆ ಮಾತ್ರೆಗಳನ್ನು ನೀಡಲಾಗುವುದು, ಹಾಗೂ ಕನಿಜ ಅಂಶ ಇರುವ ಪೋಷ್ಠಿಕಾಂಶ ಆಹಾರ ಹಾಗು ಮಾತ್ರೆಗಳ ಮೂಲಕ ಪ್ಲೋರೈಡ್ ಕಡಿಮೆ ಮಾಡಬಹುದು.
ಇನ್ನೂ ಇದು ತಾಲ್ಲೂಕು ವ್ಯಾಪ್ತಿಯ ಸಮುದಾಯದಲ್ಲಿ ಅತೀ ಹೆಚ್ಚಿನದಾಗಿ ಕಾಣಸಿಗುತ್ತದೆ ಎಂಬುದು ಗಮನಿಸಿ ಅಂತಹ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತದೆ.
ಪ್ರತಿ ಶಾಲೆಯಲ್ಲಿ ವಾರಕ್ಕೊಮ್ಮೆ ವಿಟಮಿನ್ ಮಾತ್ರೆ ಮಕ್ಕಳಿಗೆ ಬಾಲ್ಯ ಸ್ಯಾಸ್ಥಾ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ. ಇನ್ನೂ ಸರಿಯಾದ ರೀತಿಯಲ್ಲಿ ವಿಪ್ಸ್ ಮಾತ್ರೆ ಮಕ್ಕಳಿಗೆ ವಿತರಣೆ ಯಾಗುತ್ತಿಲ್ಲ, ಈ ಮಾತ್ರೆಯನ್ನು ಒಂದನೇ ತರಗತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದರು

ಶಾಲೆಯಲ್ಲಿ ಪ್ರಥಮ ಚಿಕಿತ್ಸೆ ಕಿಟ್ ಇಲ್ಲ :

ಪ್ರತಿ ಶಾಲೆಯಲ್ಲಿ ಪ್ರಾಥಮಿಕ ಆರೋಗ್ಯ ತಪಾಸಣೆ ಕಿಟ್ಟ ಇರಲೇ ಬೇಕು ಆದರೆ ಕಳೆದ ಎರಡು ವರ್ಷಗಳ ಹಿಂದೆ ಆರೋಗ್ಯ ಇಲಾಖೆಯಿಂದ ರವಾನೆ ಮಾಡುತ್ತಿದ್ದರು ಆದರೆ ಈಗ ಅದು ನಿಲ್ಲಿಸಿದ್ದರಿಂದ ಶಾಲೆಯ ಮಕ್ಕಳಿಗೆ ಪ್ರಾಥಮಿಕ ಕಿಟ್ ಇಲ್ಲದೆ ಹಾಗಿದೆ ಎಂದು ಸಭೆಯಲ್ಲಿ ಗಮನಕ್ಕೆ ತಂದರು.

ಈದೇ ಸಂಧರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ಆರೋಗ್ಯ ಇಲಾಖೆಯ ಡಾ.ಕಾಶಿ, ಸಹಾಯಕ ಅಧಿಕಾರಿ ತಿಪ್ಪೇಸ್ವಾಮಿ, ಕ್ಷೇತ್ರಶಿಕ್ಷಣಾಧಿಕಾರಿ ಕೆಎಸ್.ಸುರೇಶ್, ನಗರಸಭೆ ಪರಿಸರ ಇಂಜಿನಿಯರ್ ನರೇಂದ್ರ ಬಾಬು, ಗಣೇಶ್, ಸಿಡಿಪಿಓ ಸಿಬ್ಬಂದಿ ರಾಮಾಂಜನೇಯ, ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್ ಮುಕ್ಕಣ್ಣಪ್ಪ, ಇತರ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Namma Challakere Local News
error: Content is protected !!