ಚಳ್ಳಕೆರೆ : ಇದು ನನ್ನ ಜೀವನದ ಕೊನೆಯ ರಾಜಾಕೀಯ ಆದ್ದರಿಂದ ಮತದಾರರ ಋಣ ತೀರಿಸುವ ಕೆಲಸವಾಗಬೇಕಿದೆ, ಅದರಂತೆ ನಾನು ಯಾರಿಗೂ ಎದರುವವನಲ್ಲ ಅದರಂತೆ ತಪ್ಪು ಕಂಡರೆ ಸುಮನ್ನಿರುವವನಲ್ಲ ಆದ್ದರಿಂದ ನಿಮ್ಮ ಅಧಿಕಾರಿ ವ್ಯಾಪ್ತಿಯಲ್ಲಿ ಕರ್ತ್ಯವ್ಯ ನಿರ್ವಹಿಸಿ ನಾನು ನಿಮ್ಮನ್ನು ಎಲ್ಲಿಗೂ ವರ್ಗಾವಣೆ ಮಾಡುವುದಿಲ್ಲ ಎಂದು ಮೊಳಕಾಲ್ಮೂರ ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣ ಅಧಿಕಾರಿಗಳಿಗೆ ಖಡಕ್ ಹಾಗಿ ಹೇಳಿದರು.
ಇನ್ನೂ ಚಳ್ಳಕೆರೆ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ ಹಾಗೂ ತಳಕು ಹೋಬಳಿಗಳÀ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಆಯೋಜಿಸಿದ್ದ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮ ಪಂಚಾಯಿಗಳು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಯಾವುದೇ ಸಮಸ್ಯೆ ಬರುವುದಿಲ್ಲ ಈಡೀ ದೇಶ ಅಭಿವೃದ್ಧಿ ಹೊಂದುತ್ತದೆ ಕಾಮಗಾರಿಗಳ ಹೆಸರಿನಲ್ಲಿ ಬೋಗಸ್ ಬಿಲ್ ಮಾಡಿಸಿಕೊಳ್ಳುವ ಪ್ರಕರಣ ಹೆಚ್ಚಾಗಿವೆ, ಒಂದು ವೇಳೆ ಬೋಗಸ್ ಬಿಲ್ ಮಾಡುವುದು ಕಂಡು ಬಂದರೆ ಸುಮ್ಮನೆ ಇರುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು
ಇನ್ನೂ ಗ್ರಾಮೀಣ ಭಾಗದಲ್ಲಿ ನಿರ್ಮಿಸಿರುವ ರಸ್ತೆಗಳನ್ನು ಜಲಜೀವನ್ ಮಿಷನ್ ಯೋಜನೆಯಡಿ ಮನೆ-ಮನೆಗೆ ಸಂಪರ್ಕ ಕಲ್ಪಿಸಲು ಬಗೆದು ಹಾಳು ಮಾಡಿದ್ದು ನಾಳೆಯಿಂದಲೇ ದುರಸ್ಥಿ ಪಡಿಸುವಂತೆ ಶಾಸಕ ಎನ್,ವೈ.ಜಿ ಅಧಿಕಾರಿಗೆ ತಾಕಿತು ಮಾಡಿದರು.
ನರೇಗಾ ಹಾಗೂ ಜಲಜೀವನ ಮಿಷನ್ ಯೋಜನೆಗಳು ಗ್ರಾಮೀಣ ಅಭಿವೃದ್ಧಿಗೆ ಕಣ್ಣುಗಳಿದ್ದಂತೆ ಆದರೆ ಇವು ವ್ಯಾಪಾರೀಕರಣವಾಗಿವೆ. ಜಲಜೀವನ್ ಮಿಷನ್ ಯೋಜನೆ ಐದು ವರ್ಷಗಳು ಕಳೆದರೂ ಇನ್ನುಪೈಪ್ ಲೈನ್ ಕಾಮಗಾರಿ ಪೂರ್ಣಗೊಳಿಸಿಲ್ಲ ಗ್ರಾಮೀಣ ರಸ್ತೆಗಳನ್ನು ಕಿತ್ತು ಹಾಕಿದ್ದು ಇದರಿಂದ ವೃದ್ದರು ಮಕ್ಕಳು ಬಿಳುವ ಪರಿಸ್ಥಿತಿ ಇದೆ ಇತ್ತ ಕುಡಿಯುವ ನೀರು ಇಲ್ಲ ಇತ್ತ ರಸ್ತೆಗಳು ಹಾಳಾಗಿವೆ ಗುತ್ತಿಗೆದಾರರು ಗುಂಡಿ ತೆಗೆದ ತಕ್ಷಣ ಮುಚ್ಚುವ ಕೆಲಸ ಹಾಗಬೇಕು ಎಂದು ಕುಡಿಯುವ ನೀರು ಸರಬರಾಜು ಎಇಇ ದಯಾನಂದಸ್ವಾಮಿಗೆ ತಾಕೀತು ಮಾಡಿದರು.

ನರೇಗಾ ಯೋಜನಡೆಯಲ್ಲಿ ಶಾಲಾ ಅಂಗನವಾಡಿ, ಗ್ರಾಮೀಣ ರಸ್ತೆ ಚರಂಡಿ, ಸಿಸಿ ರಸ್ತೆಗಳಿಗೆ ಆಧ್ಯತೆ ನೀಡಬೇಕು ಅದು ಬಿಟ್ಟು ಹೂಳೆತ್ತುವ ಕಾಮಗಾರಿಗಳಲ್ಲಿ ಬೆಳಗ್ಗೆ ಕೂಲಿ ಕಾರ್ಮಿರನ್ನು ಪೋಟೊ ತೆಗೆಸಲು ಕರೆದುಕೊಂಡು ಹೋಗಿ ಅರ್ಧ ಗಂಟೆಗೆ ಮನೆಗೆ ಬರುತ್ತಾರೆ ನಂತರ ಜೆಸಿಬಿ ಯಂತ್ರಗಳಿAದ ಕೆಲಸ ಮಾಡಿಸುತ್ತಾರೆ ನರೇಗಾ ಕಾಮಗಾರಿ ಕೆಲಸ ಮಾಡುವವರು ಹೊಲ ಮನೆ ಕೆÀಲಸ ಬಿಟ್ಟು ಹೈಟೆಕ್ ಗರಿ ಗರಿ ಬಟ್ಟೆ ಹಾಕಿಕೊಂಡು ಕಾರಿನಲ್ಲಿ ಓಡಾಡುತ್ತಾರೆ ಬಿಲ್ ಮಾಡಿಸಿಕೊಳ್ಳಲ್ಲು ಪಿಆರ್‌ಡಿ ಹಾಗೂ ತಾಲೂಕು ಪಂಚಾಯಿ ಕಚೇರಿ ಆವರಣದಲ್ಲಿ ಸಂತೆಯಲ್ಲಿ ಜನಸೇರಿದಂತೆ ಸೇರುತ್ತಾರೆ ಅಕ್ರಮಗಳಿಗೆ ಕಡಿವಾಣ ಹಾಕಿ ಅಭಿವೃದ್ಧಿ ಕೆಲಸಗಳಿಗೆ ಆಧ್ಯತೆ ನೀಡಬೇಕು.

ಬಿಇಒ ಬಿಇ ಕೆ.ಎಸ್. ಸುರೇಶ್ ಸಭೆಗೆ ಮಾಹಿತಿ ನೀಡುತ್ತಾ 128 ಶಾಲಾ ಕೊಠಡಿಗಳ ಕೊರತೆ, ಗಡಿ ಭಾಗದಲ್ಲಿ ಶೂನ್ಯ ಶಿಕ್ಷಕರ ಕೊರತೆ ಇರುವ ಕಡೆ ಅತಿಥಿ ಶಿಕ್ಷಕರÀನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶಾಸಕ ಎನ್,ವೈ,ಗೋಪಾಲಕೃಷ್ಣ ಬಯಲು ಸೀಮೆ ಅಭಿವೃದ್ಧಿ ಮಂಡಳಿಯಲ್ಲಿ ರಸ್ತೆ, ಚರಂಡಿಗಳನ್ನು ಬಿಟ್ಟು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು, ಅತಿಥಿ ಶಿಕ್ಷಕರನ್ನು ಯಾರ ಒತ್ತಡಕ್ಕೆ ಮಣಿದು ನೇಮಕ ಮಾಡಿಕೊಳ್ಳಬಾರದು ವಿಷಯವಾರು ಪಾಠ್ಯ ಬೋದನೆ ಮಾಡುವಂತೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಉಪ್ಪು ಖಾರ ಇಲ್ಲದೆ ಇರುವ ಊಟ :
ನಂತರ ಮಾತನಾಡಿ ಶಾಸಕ ಎನ್.ವೈ.ಗೋಪಾಲಕೃಷ್ಣ ನಾನು ಕೆಲವು ಶಾಲೆಗಳಿಗೆ ಭೇಟಿ ನೀಡಿ ಅಲ್ಲಿ ಮಧ್ಯಾಹ್ನದ ಬಿಸಿಯೂಟ ರುಚಿಯನ್ನು ನೋಡಿದೆ. ಅದಕ್ಕೆ ಉಪ್ಪು, ಖಾರ ಎನ್ನುವುದು ಇರಲಿಲ್ಲ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು. ಇಲ್ಲದಿದ್ದರೆ ಮಕ್ಕಳ ಆರೋಗ್ಯ ಹಾಳಾಗುತ್ತದೆ. ಇನ್ನು ಅಡುಗೆ ಸಿಬ್ಬಂದಿಗಳು ತರಕಾರಿ, ಸೊಪ್ಪು ಸಂಬಾರಿಗೆ ಹಾಕುವಾಗ ಸರಿಯಾಗಿ ಹಾಕದೆ ಉಳಿಸಿಕೊಂಡು ತರಿಕಾರಿ ಪದಾರ್ಥಗಳನ್ನು ಮನೆಗೆವೊಯ್ಯುತ್ತಾರೆ ಎನ್ನುವ ದೂರುಗಳು ಕೇಳಿ ಬರುತ್ತೀವಿ ಇದರ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚನೆ ನೀಡದರು.
ಪಂಚಾಯತ್ ರಾಜ್ ಇಲಾಖೆ ಎಇಇ ಕಾವ್ಯ ಮಾತನಾಡಿ ನಾಯಕನಹಟ್ಟಿ ಮತ್ತು ತಳಕು ಹೋಬಳಿಗಳ ರಸ್ತೆಗಳ ಅಭಿವೃದ್ಧಿಗೆ 40 ಲಕ್ಷ ಮಂಜೂರಾಗಿದೆ. 48ಮೀಟರ್ ಓಳಗಿರುವ ಕೆರೆಗಳ ಅಭಿವೃದ್ಧಿಗೆ 12 ಲಕ್ಷ ರೂ. ಮಂಜೂರಾಗಿದೆ ಎಂದು ಸಭೆಗೆ ಗಮನ ಸೆಳೆದರು.
ಮಹಾರಾಜರ ಕಾಲದ ಕೆರೆ :
ಎನ್.ವೈ.ಗೋಪಾಲಕೃಷ್ಣ ಪ್ರತಿಕ್ರಿಯಿಸಿ ಮಹಾರಾಜರ ಕಾಲದಲ್ಲಿ ಕಟ್ಟಿಸಿದ ಕೆರೆಗಳಿಗೆ ನೀರು ಬರದಂತಾಗಿವೆ ಅವುಗಳ ಒತ್ತುವರಿಯಾಗಿವೆ ಹಂಚಿಕೆ ಮಾಡುವ ಬದಲು ಅಗತ್ಯವಾದ ಒಂದೇ ಕೆರೆಯ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಿ ಎಂದು ತಿಳಿಸಿದರು. ನಾನು ದಡ್ಡನಾಗಿ ರಾಜಕೀಯಕ್ಕೆ ಬಂದಿದ್ದೇನೆ ನೀವು ಹೆಚ್ಚು ಓದಿಕೊಂಡು ಬುದ್ದಿವಂತರಾಗಿ ನೌಕರಿಗೆ ಬಂದಿದ್ದೀರಿ ನೌಕರಿಯ ಋಣ ತೀರಿಸಲು ಸರಕಾರದಿಂದ ಬಂದ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸೇವೆ ಮಾಡಿ. ನಿಮ್ಮ ಇಲಾಖೆಗೆ ಅನುದಾನ ಎಷ್ಟು ಅನುದಾನ ಬಂದಿದೆ. ಅಷ್ಟಕ್ಕೆ ಮಾತ್ರ ಕ್ರಿಯಾ ಯೋಜನೆ ರೂಪಸಿ ಅನುದಾನ ಇಲ್ಲದೆ ಜನರಿಗೆ ಸುಳ್ಳು ಹೇಳಿದಂತಾಗುತ್ತದೆ ಕ್ರಿಯಾ ಯೋಜನೆ ರೂಪಿಸುವಾಗ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಿ ಯಾರ ಒತ್ತಡಕ್ಕೆ ಮಣಿದು ಹೆಚ್ಚುವರಿ ಮಾಡುವ ಕೆಲಸ ಮಾಡ ಬೇಡಿ ನಾನು ಯಾರನ್ನೂ ಅಮಾನತು ಹಾಗೂ ವರ್ಗಾವಣೆ ಮಾಡುವುದಿಲ್ಲ ಜನಸಾಮಾನ್ಯರನ್ನು ಕಚೇರಿಗೆ ಅಲೆದಾಡಿಸದೆ ಕೆಲಸ ಮಾಡಿ ಎಂದು ಅಭಯ ನೀಡಿದರು.
ಸಭೆಯಲ್ಲಿ ತಾಪಂ ಇಒ ಹೊನ್ನಯ್ಯ, ತಹಶೀಲ್ದಾರ್ ರೆಹಾನ್ ಪಾಷ, ಸಹಾಯಕ ಕೃಷಿನಿರ್ದೇಕ ಅಶೋಕ್, ನರೇಗಾ ಸಹಾಯಕ ನಿರ್ದೇಕ ಸಂತೋಷ್, ಬಿಸಿಎಂ ಅಧಿಕಾರಿ ದೀವಾಕರ್, ಸೃರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಪ್ರಾರಂಭದಲ್ಲಿ ಅಧಿಕಾರಿಗಳನ್ನು ಪರಿಚಯ ಮಾಡಿಕೊಳ್ಳುವಾಗ ಕಾರ್ಮಿಕರ ನಿರೀಕ್ಷೆಯ ಬದಲಾಗಿ ಸಹಾಕಿ ಎಂದು ಪರಿಚಯ ಮಾಡಿಕೊಳ್ಳುವಾಗಿ ಶಿಶು ಅಭಿವೃದ್ಧಿ ಅಧಿಕಾರಿ ಎಲ್ಲಿಗೆ ಹೋಗಿದ್ದಾರೆ ಎಂದು ಕೇಳಿದ ಶಾಸಕರಿಗೆ ಉತ್ತರ ನೀಡಿದ ಸಹಾಯಕಿ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಸಭಗೆ ಹೋಗಿದ್ದಾರೆ ಎಂದು ಉತ್ತರಿಸಿದ್ದಕ್ಕೆ ಗರಂ ಆದ ಶಾಸಕ ಸರಕಾರ ರಚನೆ ಯಾಗಿದೆ ಇದು ಪ್ರಥಮ ಸಭೆ ಮಾಹಿತಿ ನೀಡುವವರು ಯಾರು ಅವರು ಜಿಲ್ಲಾಧಿಕಾರಿಗೆ ಹೇಳಿ ಇಲ್ಲಿನ ಪ್ರಗತಿ ಪರಿಶೀಲನಾ ಸಭೆಗೆ ಬರಬೇಕಿತ್ತೆ ಮತ್ತೆ ಸಭೆ ಕರೆದಾಗ ಅಧಿಕಾರಿಗಳೇ ಬರಬೇಕು ಬದಲಾಗಿ ಸಹಾಯಕರು ಬಂದರೆ ಸುಮ್ನನೆ ಇರೊಲ್ಲ ಎಂದು ಹೇಳಿದರು.

ಚಳ್ಳಕೆರೆ ನಗರದ ತಾಲೂಕು ಪಂಚಾಯಿತ್ ಸಭಾಂಗಣದಲ್ಲಿ ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಯ ತಳಕು ಹಾಗೂ ನಾಯನಹಟ್ಟಿ ಹೋಬಳಿಯ ಸಿಡಿಲಿನಿಂದ ಗೋಸಯ್ಯ ಮೃತ ಮಟ್ಟ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರದ ಚೆಕ್ಕನ್ನು ವಿತರಿಸಿದರು.

Namma Challakere Local News
error: Content is protected !!