ಚಳ್ಳಕೆರೆ ; ದಿನೆ ದಿನೇ ಹೆಚ್ಚುತ್ತಿರುವ ಬಯಲು ಸೀಮೆಯ ಬಿಸಿಲನ್ನು ನೀಗಿಸಲು ಸಾರ್ವಜನಿಕರು ಈ ಪ್ರದೇಶಕ್ಕೆ ಗಿಡ ಮರಗಳನು ಎತೆಚ್ಚವಾಗಿ ಬೆಳೆಸಿ ಹಸಿರುಕರಣ ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಳ್ಳಕೆರೆ ನಗರದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ನಗರದ ಕೆಎಸ್‌ಆರ್‌ಟಿಸಿ ಡಿಪೋ ಆವರಣದಲ್ಲಿ ಪ್ರಾದೇಶಕ ವಲಯ ಅರಣ್ಯ ಇಲಾಖೆ ಹಾಗೂ ಸಾಮಾಜಿಕ ವಲಯ ಅರಣ್ಯ ಇಲಾಖೆ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಶಾಸಕ ಟಿ.ರಘುಮೂರ್ತಿ ಗಿಡಕ್ಕೆ ನೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಸರಕಾರಿ ಬಂಜರು ಭೂಮಿ, ರಸ್ತೆ ಬದಿ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಸುಮ್ಮನಾಗದೆ ಅವುಗಳನ್ನು ಪಾಲನೆ ಪೋಷಣೆ ಮಾಡಿ ಬೆಳೆಸಿ ಬರವನ್ನು ಹೋಗಲಾಡಿಸಲು ಹೆಚ್ಚು ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಮುಂದಾಗುವAತೆ ತಿಳಿಸಿದರು.
ನಗರದಲ್ಲಿ ಬಿಸಿಲಿನ ಜಳ ಹೆಚ್ಚಾಗಿದೆ ಆದರೆ ವಿಶಾಲವಾದ ರಸ್ತೆಯ ಜೋತೆಗೆ ಹಸಿರುಕರಣ ಮಾಡಲು ಸಾರ್ವಜನಿಕರು ಮುಂದಾಗಬೇಕು ಎಂದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಬಾಬು ಮಾತನಾಡಿ ಬಯಲು ಸೇಮೆ ಎಂಬ ಹಣೆ ಪಟ್ಟಿಯ ಜತೆಗೆ ಬರಪೀಡಿತ ಪ್ರದೇಶ ಎಂಬ ಹೆಸರನ್ನು ಹೋಗಲಾಡಿಸಲು ಹೆಚ್ಚಾಗಿ ಮರಗಿಡಗಳನ್ನು ಬೆಳೆಸಿದರೆ ಅವುಗಳು ಮೋಡಗಳ ಅಕರ್ಷಣೆ ಮಾಡಿಕೊಂಡು ಮಳೆ ಸುರಿಸುತ್ತವೆ ಇಂಜಿನಿಯAಗ್ ಕಾಲೇಜ್ ಆವರಣದಲ್ಲಿ ಕಳೆದ ಸಾಲಿನಲ್ಲಿ ಹಾಕಿದ ಬೇವು ಇತರೆ ಸಸಿಗಳು ಎತ್ತರಕ್ಕೆ ಬೆಳೆದಿದ್ದಾವೆ, ಸಾರಿಗೆ ಬಸ್ ಡಿಪೊ, ವಿದ್ಯಾರ್ಥಿನಿಲಯ, ಸರಕಾರಿ ಕಚೇರಿಗಳ ಆವರಣ ಹಾಗೂ ರೈತರು ತಮ್ಮ ಜಮೀನುಗಳ ಬದುಗಳಲ್ಲಿ ಹಾಕಿಕೊಳ್ಳಲು ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾದೆಶಿಕ ವಲಯ ಅರಣ್ಯಧಿಕಾರಿ ಬಹುಗುಣ, ನಗರಸಭೆ ಮಾಜಿ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಕೆ.ಟಿ.ವೀರಭದ್ರಪ್ಪ, ವಿ.ವೈ.ಪ್ರಕಾಶ್, ರಾಘವೇಂದ್ರ, ಮುಖಂಡ ಆರ್.ಪ್ರಸನ್ನಕುಮಾರ್, ಕೃಷ್ಣಮೂರ್ತಿ, ಇತರರಿದ್ದರು.

ಫೋಟೊ, ಚಳ್ಳಕೆರೆ ನಗರದ ಸರಕಾರಿ ಸಾರಿಗೆ ಬಸ್ ನಿಲ್ದಾಣ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಲಯ ಅರಣ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಶಾಸಕ ಟಿ.ರಘುಮೂರ್ತಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

Namma Challakere Local News
error: Content is protected !!