ಚಳ್ಳಕೆರೆ : ಕಾವ್ಯಕ್ಕೆ ಮನಸ್ಸನ್ನು ಮುದಗೊಳಿಸುವ ಶಕ್ತಿ ಇದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ರವೀಂದ್ರನಾಥ್ ಹೇಳಿದರು.
ನಗರದ ಎಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಶುಕ್ರವಾರ ಕನ್ನಡ ವಿಭಾಗ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಪ್ರೊ.ಎ.ಎಂ.ಜಗದೀಶ್ವರಿ ಅವರ “ಮಾತಾಡುವ ಮನಸ್ಸುಗಳು” ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮನುಷ್ಯನು ಆಧುನಿಕ ಯುಗದಲ್ಲಿ ಹಲವು ಸಂಕಷ್ಟಗಳ ಮೂಲಕ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದರೂ ಕಾವ್ಯ ವಾಚನದಿಂದ ಮನಸ್ಸು ಶಾಂತಸ್ಥಿತಿಗೆ ಬರುತ್ತದೆ. ನಂತರ ರಸಾನುಭವದಿಂದ ಮನಸ್ಸು ಮುದಗೊಳ್ಳುತ್ತದೆ. ಕಾವ್ಯ ಮನಸ್ಸನ್ನು ಪರಿಷ್ಕರಣೆಗೊಳಿಸಿ ಭಾಷೆ ಮತ್ತು ಭಾವನೆಗಳನ್ನು ಇತರರಿಗೆ ಹಂಚುತ್ತದೆ. ಕನ್ನಡ ಸಾಹಿತ್ಯದಲ್ಲಿ ವಿಜ್ಞಾನದ ಎಲ್ಲ ಜ್ಞಾನ ಶಾಖೆಗಳು ಅಡಕವಾಗಿವೆ. ಪ್ರಸ್ತುತ ಕವನ ಸಂಕಲನದಲ್ಲಿ ಪ್ರತಿ ಕವನದಲ್ಲಿ ಕಾವ್ಯದ ಓಘ ಅಮೋಘವಾಗಿದೆ. ಕಾವ್ಯ ಓದುವಿಕೆಯಿಂದ ಮನುಷ್ಯರ ಬದುಕು ಯಾಂತ್ರಿಕತೆಯಿAದ ವಿಮುಕ್ತಿ ಹೊಂದಲು ಸಹಕಾರಿಯಾಗುತ್ತದೆ ಎಂದರು.
ಪ್ರೊ.ಡಿ.ಅAಜನಪ್ಪ, ಕವನಸಂಕನ ಕುರಿತು ವಿಶೇಷ ಉಪನ್ಯಾಸ ನೀಡಿತ್ತಾ “ ಕವಿತೆ ಬುದ್ದಿಗಮ್ಯವಲ್ಲದೆ ಭಾವಗಮ್ಯವಾಗಿ ಮನುಷ್ಯ ಬದುಕಿನ ನಿಜಸ್ಥಿತಿಯನ್ನು ಕುರಿತು ಮಾತನಾಡುತ್ತದೆ. ಬದುಕಿನಲ್ಲಿ ಹಲವು ಸಂಕಷ್ಟಗಳಿರುತ್ತವೆ. ಆ ಎಲ್ಲ ಸಂಕಷ್ಟಗಳಿAದ ಮುಕ್ತಿ ಹೊಂದಬೇಕಾದರೆ ಬದುಕನ್ನು ಕ್ರಿಯಾಶೀಲತೆಯಿಂದ ರೂಪಿಸಿಕೊಳ್ಳಬೇಕು. “ಮಾತಾಡುವ ಮನಸ್ಸುಗಳು” ಕವನ ಸಂಕಲನದಲ್ಲಿ ಹೆಣ್ಣು ಲೋಕದ ಒಳ ಧ್ವನಿಗಳನ್ನು ತೆರೆಯುತ್ತದೆ. ಸಮಾಜವನ್ನು ನೋಡುವ ಪರಿಯನ್ನು ಹೇಳುತ್ತದೆ. ವ್ಯಾವಹಾರಿಕ ಸಂಬAಧಗಳÀ ಆಚೆ ಮಾನವೀಯ ಸಂಬAಧಗಳ ನಿಲುವುಗಳನ್ನು ಸ್ಪಷ್ಟಪಡಿಸುತ್ತವೆ. ಒಟ್ಟಾರೆಯಾಗಿ ಕವನದ ಕೇಂದ್ರಬಿAದು ಮನಸ್ಸು ಆಗಿದ್ದು, ಹೆಣ್ಣಿನ ಭಾವನೆಗಳನ್ನು ತೆರೆದಿಡುತ್ತದೆ” ಎಂದರು.
ಎ.ಎA.ಜಗದೀಶ್ವರಿ ಅವರು ಮೂಲತಃ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ. ಅವರು ಬರೆದಿರುವ ಮಾತಾಡುವ ಮನಸುಗಳು ಕವನ ಸಂಕಲನವು ಸಾಹಿತ್ಯ ಮತ್ತು ವಿಜ್ಞಾನಗಳು ಅವಿನಾಭಾವ ಸಂಬAಧವನ್ನು ಸೂಚಿಸುತ್ತದೆ. ಈ ಸಂಕಲನವು ವೈಚಾರಿಕತೆಯ ಭಾವದಿಂದ ತುಂಬಿದೆ. ಜತೆಗೆ ತಾಳ್ಮೆಯ ಓದುಗರರನ್ನು ನಿರೀಕ್ಷಿಸುತ್ತದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಆರ್.ರಂಗಪ್ಪ ಹೇಳಿದರು.
ಕನ್ನಡ ಜೀವದ ಭಾಷೆಯಾಗಿದೆ. ಕನ್ನಡಕ್ಕೆ ಬಹುದೊಡ್ಡ ಇತಿಹಾಸವಿದ್ದು, ಕನ್ನಡ ಸೂಕ್ಷ್ಮ ಮತ್ತು ಸಂಕೀರ್ಣವಾದ ಭಾಷೆಯಾಗಿದೆ. ನಿತ್ಯ ತಂತ್ರಜ್ಞಾನದ ಮೂಲಕ ಕನ್ನಡವನ್ನು ಬಳಸೋಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾನಿಲಯದ ಡಾ.ಗೋವಿಂದ ಮಾತನಾಡಿದರು.
ಇದೇವೇಳೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಪ್ರಾಧ್ಯಾಪಕರಾದ ಬಿ.ಯು.ನರಸಿಂಹಮೂರ್ತಿ, ಪ್ರೊ.ಎನ್.ಜಗನ್ನಾಥ್, ಪ್ರೊ.ರಮೇಶ್‌ಭಟ್, ಪ್ರೊ.ಡಿ.ಎನ್.ರಘುನಾಥ್, ಪ್ರೊ.ಜೆ.ಮಾನಸ, ಡಾ.ಪಾಪಣ್ಣ ಇದ್ದರು. ಪ್ರೊ. ಎ.ಎಸ್.ಸತೀಶ್ ನಿರೂಪಿಸಿದರು. ಡಾ.ಜಿ.ವಿ.ರಾಜಣ್ಣ ಸ್ವಾಗತಿಸಿದರು, ಡಾ.ಕೆ.ಚಿತ್ತಯ್ಯ ವಂದಿಸಿದರು.

Namma Challakere Local News
error: Content is protected !!