ಚಳ್ಳಕೆರೆ : ಚಳ್ಳಕೆರೆ ನಗರದ ಜನತಾ ಕಾಲೋನಿ, ಅಂಬೇಡ್ಕರ್ ನಗರ ಈಗೇ ಹಲವು ವಾರ್ಡಗಳಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಕುರಿತು ಹಮ್ಮಿಕೊಂಡಿದ್ದ ಜಾಥ ಕಾರ್ಯದಲ್ಲಿ ಆರೋಗ್ಯ ಇಲಾಖೆ ನಗರದ ಪ್ರಮುಖ ಬೀದಿಗಳಲ್ಲಿ ಜಾಥ ನಡೆಸುವ ಮೂಲಕ ವಿಶ್ವ ತಂಬಾಕು ರಹಿತ ದಿನಾಚರಣೆ ಆಚರಣೆ ಮಾಡಲಾಯಿತು.
ಇನ್ನೂ ಜಿಲ್ಲಾ ತಂಬಾಕು ಮೇಲ್ವೀಚಾರಕ ಪ್ರಭುದೇವ್ ಮಾತನಾಡಿ, ಇಂದಿನ ಯುವ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಂಬಾಕು ಸೇವನೆಗೆ ಬಲಿಯಾಗುತ್ತಿರುವುದು ಅಭಿವೃದ್ಧಿಗೆ ಮಾರಕ ವಾಗುತ್ತದೆ, ಯುವ ಜನರು ನಮ್ಮ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯ ರಾಷ್ಟçಗಳನ್ನು ಅನುಸರಿಸುವ ಭರದಲ್ಲಿ ಮಾದಕ ಸೇವನೆಗಳಗೆ ಮಾರು ಹೋಗುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.
ಇನ್ನೂ ತಾಲೂಕು ಆರೋಗ್ಯ ಅಧಿಕಾರಿ ಡಾ.ಕಾಶಿ ಮಾತನಾಡಿ, ತನ್ನ ವ್ಯಸನಕ್ಕೆ ಈಡಾದ ವ್ಯಕ್ತಿ ಯಾವುದೇ ಅಪಾಯವನ್ನು ಲೆಕ್ಕಿಸುವುದೇ ಇಲ್ಲ. ಈ ವ್ಯಸನದ ದಾಸನಾದನ್ನು ಬದುಕಿ ಉಳಿಯುವುದೇ ಕಷ್ಟಕರ ಅದ್ದರಿಂದ ಪ್ರತಿಯೊಬ್ಬರೂ ಸಹ ಇಂತಹ ಚಟಗಳಿಂದ ದೂರವಿರಲು ಪ್ರಯತ್ನಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ, ವಿಶ್ವ ತಂಬಾಕು ರಹಿತ ದಿನಾಚರಣೆ ಅರ್ಥಗರ್ಭಿತವಾಗಿ ಆಚರಿಸಬೇಕು. ಕೇವಲ ಇದು ಆಚರಣೆಗೆ ಸೀಮಿತವಾಗರಬಾರದು ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಆರೋಗ್ಯ ಇಲಾಖೆಯ ಕುದಾಪುರ ತಿಪ್ಪೆಸ್ವಾಮಿ, ಸಿಡಿಪಿಓ ಕಛೇರಿ ಸಿಬ್ಬಂದಿ ರಾಮಾಂಜನೇಯ, ಅಮೃತ್‌ರಾಜು, ಬಿಹೆಚ್.ರಾಜು, ಬ್ಲಾಕ್ ಪ್ರೋಗಾಂ ಅಧಿಕಾರಿ ಪ್ರದೀಪ್, ಆರ್ಯುವೇದ ಆಸ್ವತ್ರೆಯ ಡಾ.ಉದಯ್, ಬಾಗ್ಯಮ್ಮ, ಸೌಭಾಗಮ್ಮ, ಸುಶೀಲಾ, ಆಶಾ ಕಾರ್ಯಕರ್ತೆಯರು, ಶಾರದ ಪ್ರೌಡ ಶಾಲೆಯ ಮಕ್ಕಳು ಭಾಗವಹಿಸಿದ್ದರು.

Namma Challakere Local News
error: Content is protected !!