ಚಳ್ಳಕೆರೆ : 2023-24 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಈಡೀ ರಾಜ್ಯಾದ್ಯಂತ ಅದ್ದೂರಿಯಾಗಿ ಸಂಭ್ರಮದಿAದ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಮಾಡುತ್ತಿದ್ದಾರೆ
ಅದರಂತೆ ಚಳ್ಳಕೆರೆ ತಾಲೂಕಿನ ನನ್ನಿವಾಳ ಕ್ಲಸ್ಟರ್ ವ್ಯಾಪ್ತಿಯ ಬಂಡೆಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಸಹ ಇಲ್ಲಿನ ನೂತನ ವರ್ಷಾರಂಭಕ್ಕೆ ಶಾಲೆಗೆ ತಳಿರು ತೋರಣ ಕಟ್ಟಿ ಮಕ್ಕಳಿಗೆ ಸಿಹಿ ನೀಡುವುದರ ಮೂಲಕ ಶಾಲೆಗೆ ಮಕ್ಕಳನ್ನು ಬರಮಾಡಿಕೊಂಡರು.
ಇನ್ನೂ ಶಾಲೆಯ ಸಹ ಶಿಕ್ಷಕ ಹೆಚ್.ಹನುಮಂತಪ್ಪ ಮಾಧ್ಯಮದೊಂದಿಗೆ ಮಾತನಾಡಿ, ಪ್ರತಿವರ್ಷ ದಂತೆ ಈ ವರ್ಷವೂ ಕೂಡ ಮಕ್ಕಳಿಗೆ ಸಿಹಿ ಊಟ ನೀಡಿ, ಶಾಲೆಗೆ ಆಗಮನದ ದಿನವೇ ಮಕ್ಕಳುಗೆ ಹೊಸ ಬಟ್ಟೆಗಳನ್ನು ಕೊಟ್ಟು, ರಜೆಯ ದಿನಗಳಲ್ಲಿ ಕಾಲ ಕಳೆದ ಮಕ್ಕಳನ್ನು ಪಠ್ಯದತ್ತ ಗಮನ ಸೇಳೆಯಲು ಆಕರ್ಷಕವಾಗಿ ಪ್ರಾರಂಭವೋತ್ಸವ ಮಾಡಿದ್ದೆವೆ ಎನ್ನುತ್ತಾರೆ.

ಇನ್ನೂ ಮೊದಲ ದಿನವೇ ಆಗಮಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕ ವೃಂಧ ಹಾಗೂ ಅಡುಗೆ ಸಿಬ್ಬಂದಿ
ಶಾಲಾ ಮಕ್ಕಳಿಗೆ ಸಿಹಿ ಊಟವನ್ನು ಬಡಿಸುವುದರ ಮೂಲಕ ಹಾಗೂ ಎಲ್ಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಜಿ ತಿಪ್ಪೇಸ್ವಾಮಿ, ಗೀತಾ ಪಾಪಯ್ಯ, ಮತ್ತು ಮುಖ್ಯೋಪಾಧ್ಯಾಯರಾದ ಆರ್ .ನಾಗರಾಜ, ಸಹ ಶಿಕ್ಷಕರಾದ ಎಚ್ .ಹನುಮಂತಪ್ಪ, ಎಸ್ ಡಿ ಎಮ್ ಸಿ ಅಧ್ಯಕ್ಷ ಗೋವಿಂದರಾಜು, ಅಂಗನವಾಡಿ ಕಾರ್ಯಕರ್ತೆಯಾದ ಗಿರಿಜಾ ಲ, ತಿಪ್ಪೇಸ್ವಾಮಿ, ಪೋಷಕರ ಸಮ್ಮುಖದಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಬಹಳ ವಿಜೃಂಭಣೆಯಿAದ ಆಚರಿಸಿದರು.

About The Author

Namma Challakere Local News
error: Content is protected !!