ಚಿತ್ರದುರ್ಗ : 2022-23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಜಗದ್ಗುರು ಮುರುಘಾ ರಾಜೇಂದ್ರ ಕಲಾ & ವಾಣಿಜ್ಯ ಮಹಾವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಎನ್.ಎಸ್.ಎಸ್. ಘಟಕ -01 & 02 ರ ವಾರ್ಷಿಕ ವಿಶೇಷ ಶಿಬಿರವನ್ನು ಸೀಬಾರ ಗ್ರಾಮದಲ್ಲಿ ಆಯೋಜಿಸಲಾಗಿದ್ದು,
ಈ ಶಿಬಿರದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ ಮಠದ ಕುರುಬರಹಟ್ಟಿ ಹಾಗೂ ವೇದಿಕೆಯ ಮೇಲಿದ್ದ ಗಣ್ಯರಿಂದ ಗಿಡಕ್ಕೆ ನೀರೆರೆಯುವುದರ ಮೂಲಕ ಶಿಬಿರ ಉದ್ಘಾಟನೆಯೊಂದಿಗೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರೊ. ಪರುಶುರಾಂ ಕಟಾವಕರ, ಇವರು ನಮ್ಮ ಭಾರತ ವಿಶೇಷ ಭಾರತ, ನಮ್ಮದು ಮುಖ್ಯವಾಗಿ ಶ್ರಮ ಸಂಸ್ಕೃತಿ ಎಂದು ಮಾತನಾಡಿದರು.
ಇನ್ನೂ ಮುಖ್ಯ ಅತಿಥಿ ಶ್ರೀ ತಿಪ್ಪೇಸ್ವಾಮಿಯವರು ಶಿಬಿರವನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯವಾಗಿದ್ದು, ಇಂತಹ ಶಿಬಿರಗಳ ಮೂಲಕ ಶಿಬಿರಾರ್ಥಿಗಳು ಶ್ರಮದಾನ ಮಾಡಿ ತಮ್ಮ ಹಳ್ಳಿಯ ಬದುಕನ್ನು ಕಲಿಯಲು ಹೆಚ್ಚು ಹೆಚ್ಚು ಆಸಕ್ತಿ ತೋರುವ ಮೂಲಕ ವಿದ್ಯಾರ್ಥಿಗಳು ತಮ್ಮನ್ನು ತಾವು ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಆ ಮೂಲಕ ಏಕಾಗ್ರತೆ ಬೆಳಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಬೆಳಿಸಿಕೊಳ್ಳುವ ಮೂಲಕ ಉತ್ತಮ ಜೀವನ ಅನುಭವ ಇಂತಹ ಶಿಬಿರಗಳ ಮೂಲಕ ಸಾರ್ಥಕವಾಗುವುದು ಎಂದರು.
ಐಕ್ಯೂಎಸಿ ಸಂಚಾಲಕರಾದ ಶ್ರೀ ಎನ್. ಚಲುವರಾಜು, ಶಿಬಿರವನ್ನು ಉದ್ದೇಶಿಸಿ ಗುಣಮಟ್ಟದ ಬದುಕು ಸಿಗಬೇಕು. ಇಂತಹ ಕಾರ್ಯಕ್ರಮಗಳು ನವೀನ ಅನುಭವಗಳನ್ನು ನೀಡುತ್ತವೆ. ಪ್ರತಿಯೊಬ್ಬರಲ್ಲಿ ಹೊಂದಾಣಿಕೆಯ ಮನೋಭಾವ ಮುಖ್ಯ. ಜ್ಞಾನಕ್ಕೆ ಮಿಗಿಲಾದುದು ಯಾವುದು ಇಲ್ಲ. ದೇಶ ಸೇವೆಗಾಗಿ ನಮಗೆ ಸಿಕ್ಕ ಅವಕಾಶ ಎಂದು ಭಾವಿಸಿ ವಿದ್ಯಾರ್ಥಿಗಳು ಇಂತಹ ಶಿಬಿರಗಳ ಮೂಲಕ ಸುಸಂಸ್ಕೃತ ನಾಗರೀಕರಾಗಿ ವಿದ್ಯಾರ್ಥಿ ದೆಸೆಯಲ್ಲಿ ಇದೊಂದು ಸುವರ್ಣ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಶಿಬಿರಾರ್ಥಿಗಳಿಗೆ ತಿಳಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಇತಿಹಾಸ ವಿಭಾಗದ ಮುಖ್ಯಸ್ಥರು ಆದ ಪ್ರೊ. ಸಿ. ಬಸವರಾಜಪ್ಪ ಶಿಬಿರಾರ್ಥಿಗಳನ್ನುದ್ದೇಶಿಸಿ ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳು ನಿಸ್ವಾರ್ಥ ಸೇವಾ ಮನೋಭಾವನೆ ಬೆಳಿಸಿಕೊಳ್ಳಬೇಕು. ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೇ ಮಾಡುವ ಸೇವೆ ದೇಶಸೇವೆಯಾಗಿದ್ದು, ಶಿಬಿರಾರ್ಥಿಗಳು ಇಂತಹ ಶಿಬಿರಗಳ ಮೂಲಕ ತಮ್ಮ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲ್. ಈಶ್ವರಪ್ಪ, ಇವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಸೀಬಾರ ಗ್ರಾಮದ ಗ್ರಾಮಸ್ಥರು ನಮ್ಮ ಶಿಬಿರಾರ್ಥಿಗಳನ್ನು ತುಂಬ ಪ್ರೀತಿಪೂರ್ವಕವಾಗಿ ಸ್ವಾಗತಿಸಿದ್ದು, ಪುಟ್ಟ ಗ್ರಾಮದಲ್ಲಿ ಜಾಗೃತಿ ಅಭಿಯಾನ ಮಾಡಿ ಆ ಮೂಲಕ ಶಿಬಿರ ಯಶಸ್ವಿಯಾಗಲು ಶಿಬಿರಾರ್ಥಿಗಳು ಸ್ವಚ್ಛತೆ ಅರಿವನ್ನು ಮೂಡಿಸಿದ್ದಾರೆ. ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಗ್ರಾಮ ಸ್ವಚ್ಛವಾಗಿರುತ್ತದೆ. ಅಲ್ಲದೇ ಪ್ರತಿಯೊಬ್ಬ ಶಿಬಿರಾರ್ಥಿಯು ಪರಿಸರ ಸ್ವಚ್ಛತೆಗೆ ಹೆಚ್ಚು ಒತ್ತನ್ನು ಕೊಟ್ಟು ಸಾಮಾಜಿಕ ಕಳಕಳಿಯನ್ನು ಸಾರಬೇಕೆಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಿಬಿರದಲ್ಲಿ ಶಿಬಿರಾಧಿಕಾರಿಗಳಾಗಿ ಡಾ. ಸಿ.ಟಿ. ಜಯಣ್ಣ, ಶ್ರೀ ಜಿ.ಎಸ್. ನಾಗರಾಜ, ಸಹ ಶಿಬಿರಾಧಿಕಾರಿಗಳಾದ ಶ್ರೀಮತಿ ಬಿ.ವೈ. ಶ್ವೇತ, ಶ್ರೀ ಶಿವಕುಮಾರ್ ಕೆ.ಹೆಚ್. ಉಪಸ್ಥಿತರಿದ್ದರು.
ಪ್ರಾಥನೆ: ಕು. ಪೂರ್ಣಿಮ ವಡವಿ, ಸ್ವಾಗತ: ಕು. ಚಂದನ, ನಿರೂಪಣೆ: ಕು. ಉಷಾ