ನೌಕರಿ ಸಂತಾನ ಭಾಗ್ಯ ಆರ್ಥಿಕ ಆರೋಗ್ಯ ಸಂಪತ್ತು ಕರುಣಿಸುವಂತೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಬೆಳ್ಳಿ ಒಡವೆ ಸೇರಿದಂತೆ ಹುಂಡಿಗೆ ಭಕ್ತರು ಹಾಕಿದ್ದರು….
ನಾಯಕನಹಟ್ಟಿ::
ಕಾಯಕಯೋಗಿ ಮಧ್ಯ ಕರ್ನಾಟಕದ ಆರಾಧ್ಯ ದೈವ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಹೂರಮಠ ಮತ್ತು ಒಳ ಮಠ ದೇವಾಲಯಗಳಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ತಹಶೀಲ್ದಾರ್ ರೇಹಾನ್ ಪಾಷಾ ಹಾಗೂ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಕಾರ್ಯನಿರ್ವಣ ಅಧಿಕಾರಿ ಎಚ್ ಗಂಗಾಧರಪ್ಪ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯವು ನಡೆಯಿತು.
ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಎಚ್ ಗಂಗಾಧರಪ್ಪ ರವರು ವರಮಠ ಮತ್ತು ಒಳ ಮಠದ ಹುಂಡಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಜಿಲ್ಲಾಧಿಕಾರಿಗಳ ಹಾಗೂ ತಹಶೀಲ್ದಾರ್ ಅವರ ಆದೇಶದಂತೆ ಹೊರ ಮಟದ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಬೆಳಿಗ್ಗೆ 9:30 ರಿಂದ ಪ್ರಾರಂಭಿಸಲಾಗಿದೆ ಪ್ರತಿ ಆರು ತಿಂಗಳಿಗೊಮ್ಮೆ ಒಂಟಿ ಏರಿಕೆ ಕಾರ್ಯ ನಡೆಸಲಾಗುತ್ತದೆ.
ಹುಂಡಿ ಎಣಿಕೆ ಕಾರ್ಯವು ಪೊಲೀಸ್ ಇಲಾಖೆ ಕಂದಾಯ ಇಲಾಖೆ ಕೆನರಾ ಬ್ಯಾಂಕ್ ಸಿಬ್ಬಂದಿಗಳ ಜೊತೆಗೂಡಿ ವಿಡಿಯೋ ಚಿತ್ರೀಕರಣ ಮೂಲಕ ಎಂದು ಎಚ್ ಗಂಗಾಧರಪ್ಪ ತಿಳಿಸಿದರು.
ಹೊರಮಠದ ದೇವಸ್ಥಾನದಲ್ಲಿ ಇದ್ದ ಎಲ್ಲಾ ಹುಂಡಿಗಳನ್ನು ತೆರವು ಮಾಡಿ ಹುಂಡಿಗಳ ಎಣಿಕೆ ಕಾರ್ಯ ಮಾಡಲಾಯಿತು. ಬುಧವಾರ ದೇವಸ್ಥಾನದ ವಿಶೇಷ ಸಿ ಸಿ ಕ್ಯಾಮೆರಾ ಹಾಗೂ ವಿಡಿಯೋ ಚಿತ್ರೀಕರಣ ಮೂಲಕ ಹುಂಡಿ ತೆರೆಯಲಾಯಿತು.
ಹೊರಮಠ ಮೊತ್ತ 18,86,667 ರೂಪಾಯಿಗಳು ಮತ್ತು ಒಳಮಠದ ಮೊತ್ತ 53 ಲಕ್ಷದ 67.395
ರೂಪಾಯಿಗಳು ಮತ್ತು ದಾಸೋಹ ಹುಂಡಿಯಲ್ಲಿ 5,81,825 ರೂಪಾಯಿಗಳು ಹೊರಮಠ ಮತ್ತು ಒಳ ಮಠ ಒಟ್ಟು ಮೊತ್ತ 78,35,887 ರೂಪಾಯಿಗಳು ಎಂದು ಕಾರ್ಯನಿರ್ವಹಣಾ ಅಧಿಕಾರಿ ಎಚ್ ಗಂಗಾಧರಪ್ಪ ತಿಳಿಸಿದ್ದಾರೆ.
ನಾಯಕನಹಟ್ಟಿ ಜಾತ್ರೆ ಇಂದ ಇಲ್ಲಿಯವರೆಗೆ ಪೊಲೀಸ್ ಬಂದ ಬಸ್ತ್ ಏರ್ಪಡಿಸಲಾಯಿತು.
ಕಾಣಿಕೆ ಹುಂಡಿಗಳಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪತ್ರಗಳು ಬರೆದ ಹಾಕಿ ಇದರ ಜೊತೆಗೆ ಬೆಳ್ಳಿಯ ಪಾದುಕೆ ತೊಟ್ಟಿಲು ಇತರೆ ಬೆಳ್ಳಿ ವಸ್ತುಗಳನ್ನ ಹುಂಡಿ ಒಳಗೆ ಹಾಕಿದ್ದರು.
ಪಾಪಿಯಿಂದ ಪಾಮರರ ಜೀವನ ಪಾವನಗೊಳಿಸು ತಿಪ್ಪೆರುದ್ರೇಶ ಇಷ್ಟಾರ್ಥಗಳನ್ನು ಈಡೇರಿಸುವಂತಹ ಮಹಾದೈವ ಹಾಗೂ ಮಾಡಿದಷ್ಟು ನೀಡು ಭಿಕ್ಷೆ ನೀಡುವಂತಹ ಕರುಣಾಮಯಿ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ತಮ್ಮ ಇಷ್ಟಾರ್ಥಗಳನ್ನ ಕೊಟ್ಟಂತಹ ಅನೇಕ ಪತ್ರಗಳ ಮೂಲಕ ಸಂತಾನ ಭಾಗ್ಯ ನೌಕರಿ ಆರ್ಥಿಕ ಆರೋಗ್ಯ ಸಂಪತ್ತು ಕರುಣಿಸುವಂತೆ ಕಾಣಿಕೆ ಹುಂಡಿಯಲ್ಲಿ ಹಾಕಿದ್ದರು.
ಇವರೆಲ್ಲರ ಇಷ್ಟಾರ್ಥಗಳನ್ನು ಈ ಪವಾಡ ಪುರುಷ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಈಡೇರಿಸಲಿ ಎಂದು ಕಾರ್ಯನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ರೆಹಾನ್ ಪಾಷಾ, ಶಿರಸ್ತೇದಾರ ಎಂ ಎಂ ಸದಾಶಿವಯ್ಯ, ನಾಡಕಚೇರಿಯ ಉಪತಾಶಿಲ್ದಾರ್ ಶಕುಂತಲಾ, ರಾಜಶ್ವ ನಿರೀಕ್ಷಕ ಚೇತನ್ ಕುಮಾರ್, ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ವ್ಯವಸ್ಥಾಪನ ಕಮಿಟಿ ಸದಸ್ಯರಾದ ತಿಪ್ಪೆರುದ್ರಪ್ಪ, ಗಂಗಣ್ಣ, ಕಾಂತರಾಜ್, ಮಲ್ಲಮ್ಮ, ಬಂಗಾರಮ್ಮ, ಜೀವಿತ್ ಕುಮಾರ್, ದೇವಸ್ಥಾನ ಸಿಬ್ಬಂದಿಗಳಾದ ಎಸ್ ಸತೀಶ್, ಮನು, ಪ್ರಕಾಶ್, ಶಿವಣ್ಣ, ಶಿವರಾಜ್ ಮಹದೇವ ಶಂಕರ್, ರುದ್ರಮುನಿ, ಬಿ ತಿಪ್ಪೇಸ್ವಾಮಿ ನಾಯಕ,
ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳಾದ ಜಗದೀಶ್, ಪುಷ್ಪಲತಾ ,ಶರಣಬಸಪ್ಪ, ಶಂಕರ್, ಸಿಬ್ಬಂದಿಗಳಾದ ಚನ್ನಬಸಪ್ಪ, ಗ್ರಾಮ ಸಹಾಯಕ ಓಬಣ್ಣ ಕುದಾಪುರ, ಹರೀಶ್ ತಿಮ್ಮಪ್ಪಯ್ಯನಹಳ್ಳಿ, ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ರಾಮ್ ಮೋಹನ್, ಸಿಬ್ಬಂದಿಗಳಾದ ವಿರುಪಾಕ್ಷ, ನಲಗೇತನಹಟ್ಟಿ ಎಂ ಬಿ ಮಹಾಸ್ವಾಮಿ, ವೆಂಕಟೇಶ್, ಕೆ ಬಿ ಪುರಂದರ, ಸೇರಿದಂತೆ ಮುಂತಾದವರು ಇದ್ದರು