ಚಳ್ಳಕೆರೆ : ರೈತರಿಗೆ ಸೇರಬೇಕಾದ ಬೆಳೆ ಪರಿಹಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೊಪದ ಹಿನ್ನಲೆಯಲ್ಲಿ ಚಳ್ಳಕೆರೆ ತಾಲೂಕಿನ ಪರುಶುರಾಂಪುರ ಹೋಬಳಿ ಜಾಜೂರು ಕಂದಾಯ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಮುಮ್ತಾಜ್ ಉನ್ನಿಸಾ ಹಾಗು ತಳಕು ಹೋಬಳಿ ಕಾಲುವೆಹಳ್ಳಿ ಕಂದಾಯ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಸಿರಾಜ್ ಉಲ್ ಹುಸೇನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತುಗೋಳಿಸಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಆದೇಶ ಹೊರಡಿಸಿದ್ದಾರೆ.
ಜಾಜೂರು ಕಂದಾಯ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಮುಮ್ತಾಜ್ ಉನ್ನಿಸಾ, ಕಂದಾಯ ವೃತ್ತದ ಬೆಳೆ ಪರಿಹಾರದ ಲಾಗಿನ್ ಐಡಿ ಹೋಂದಿದ್ದು ಇದರಲ್ಲಿ ಜಾಜೂರು ಮಜಿರೆ ಕಾಮಸಮುದ್ರ ಗ್ರಾಮದ ವಾಸಿಯಾದ ಸಂಜೀವಮೂರ್ತಿ ಬಿನ್. ಮಲ್ಲೇಶಪ್ಪ ಇವರ ಈ ಹಿಂದೆ ಬೆಳೆ ಸಮೀಕ್ಷೆ ಕಾರ್ಯದಲ್ಲಿ ಪಿಆರ್‌ಆಗಿ ಕಾರ್ಯನಿವಾಸುತ್ತಿದ್ದ ಇವರದೆ ಮೊಬೈಲ್‌ನಲ್ಲಿ ಆಪ್ ಲೋಟ್ ಮಾಡಿರುವುದು ಎಂಬ ಮಾಹಿತಿ ಗ್ರಾಮ ಸಹಾಯಕ ಮಗ ತಿಳಿಸಿರುತ್ತಾರೆ.
ಪ್ರಾಥಮಿಕ ವರದಿಯಂತೆ ಬೆಳೆ ಪರಿಹಾರದ ಮೊತ್ತವನ್ನು ಫಲಾನುಭವಿಗಳಿಗೆ ನಮೂದಿಸದೇ 37ಜನ ಬೇರೆ ವ್ಯಕ್ತಿಗಳಿಗೆ ಸ್ವಂತ ಸಂಬAಧಿಗಳಿಗೆ ಉದ್ದೇಶಪೂರ್ವಕವಾಗಿ ಪರಿಹಾರದ ಹಣವನ್ನು ನಮೂದು ಮಾಡಿರುವುದು ತಿಳಿದು ಬಂದಿದು 2020-21 ಮತ್ತು 2022=23 ಸಾಲಿನಲ್ಲಿ ರೈತರಿಗೆ ಸೇರಬೇಕಾದ ಬೆಳೆ ಪರಿಹಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ
ಇದೇ ಪ್ರಕರಣದಲ್ಲೆ ಸಂಭAಧಿಸಿದAತೆ ಬೆಳೆ ಪರಿಹಾರದ ಮೊತ್ತ ಪಾವತಿ ಕುರಿತು ಫಲಾನುಭವಿಗಳ ವಿವರ ಪರೀಶಿಲಿಸಿ ಕ್ರಮ ವಹಿಸಬೇಕಿದ್ದ ಚಳ್ಳಕೆರೆಯ ಆಗಿನ ತಹಶೀಲ್ದಾರ್ ಆಗಿದ್ದ ಎನ್.ರಘುಮೂರ್ತಿ, ಕಂಪ್ಯೂಟರ್ ಆಪರೇಟರ್ ಗ್ರಾಮಆಡಳಿತ ಅಧಿಕಾರಿಗಳು ಸೇರಿಂದತೆ ಒಟ್ಟು 6ಜನ ವಿರುದ್ದ ತಳಕು ಪೊಲೀಸ್ ಠಾಣೆಯಲ್ಲಿ ಒಟ್ಟು 20.49 ಲಕ್ಷ ರೂ.ಹಣವನ್ನು ದುರ್ಬಳಕೆ ಹಾಗೂ ಸರ್ಕಾರಕ್ಕೆ ಮೋಸ ಮಾಡಿರುವ ಬಗ್ಗೆ ದೂರು ಸಲ್ಲಿಕೆಯಾಗಿದ್ದು ಎಪ್‌ಐಆರ್ ದಾಖಲಾಗಿರುತ್ತದೆ.
ಬಾಕ್ಸ್ ಮಾಡಿ :
ಚಳ್ಳಕೆರೆ ತಾಲೂಕಿನಲ್ಲಿ ನಡೆದಿರುವಂತಹ ಬೆಳೆ ಪರಿಹಾರ ಲೋಪದ ಬಗ್ಗೆ ಪ್ರಕರಣದ ವಿಚಾರಣೆ ಮಾಡಿರುವ ಕರ್ನಾಟಕ ಉಚ್ಚ ನ್ಯಾಯಾಲಯ ತಹಶೀಲ್ದಾರ್ ಅವರ ಮೇಲೆ ಮಾಡಿರುವಂತಹ ಆರೋಪ ಸಮಂಜಸವಾಗಿಲ್ಲ ತಹಶೀಲ್ದಾರ್ ಅವರ ಅನುಮೋದನೆ ಇಲ್ಲದೆ ಪರಿಹಾರದ ಮೊತ್ತ ಪಾವತಿಯಾಗಿದೆ, ಡಿಜಿಟಲ್ ಸಿಗ್ನೇಚರ್ ಕಾರ್ಡ್ ಶಿರಸ್ತೆದಾರ್ ಬಳಸಿದ್ದು ಇದು ಶಿರಸ್ತೆದಾರ್ ಲೋಪವೇ ಹೊರತು ತಹಶೀಲ್ದಾರ್ ಲೋಪವಲ್ಲವೆಂದು ಘನ ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಿದೆ ಎನ್ನುತ್ತಾರೆ.
–ನಿಕಟ ಪೂರ್ವ ತಹಶೀಲ್ದಾರ್ ಎನ್.ರಘುಮೂರ್ತಿ