ರಾಮುದೊಡ್ಮನೆ ಚಳ್ಳಕೆರೆ
ಚಳ್ಳಕೆರೆ : ಇಲ್ಲಿಗೆ ಬರುವ ಪ್ರತಿಯೊಬ್ಬರು ಶಾಪ ಹಾಕದೆ ಮರು ವಾಪಸ್ ಹೋಗುವುದಿಲ್ಲ ಇಂತಹದೊAದು ಸ್ಥಳ ಯಾವುದು ಎಂದು ಯೋಚಿಸುತ್ತಿದ್ದೀರಾ
ಇದುವೆ ಚಳ್ಳಕೆರೆ ನಗರಸಭೆ ಇಲ್ಲಿನ ಅಧಿಕಾರಿಗಳು ಜಡ್ಡು ಗಟ್ಟಿದ್ದಾರೆ ಇಲ್ಲಿನ ಸಾರ್ವಜನಿಕರ ಕೆಲಸಗಳಂತು ಆ ದೇವರೆ ಬಲ್ಲ ಎಂದು ನೊಂದ ಸಾರ್ವಜನಿಕರ ಮಾತುಗಳೆ ಎಚ್ಚು
ಇನ್ನು ಕಳೆದ ತಿಂಗಳಷ್ಟೆ ನಗರಸಭೆ ಅಧ್ಯಕ್ಷರ ಅವಧಿ ಮುಗಿದ ಬಳಿಕ ಇನ್ನೂ ಇದರ ಹೊಣೆ ಹೊತ್ತ ಜಿಲ್ಲಾಧಿಕಾರಿ ಈ ನಗರಸಭೆಗೆ ಸುಳಿದಿಲ್ಲ ಎಂಬ ಸಾರ್ವಜನಿಕರ ಆರೋಪಗಳಿವೆ.
ಅಧಿಕಾರಿಗಳು ಮತ್ತು ಸಾರ್ವಜನಿಕರ ಮಧ್ಯೆ ಜಟಾಪಟಿ :
ಇನ್ನೂ ಈ ನಗರಸಭೆಯಲ್ಲಿ ಇ ಸ್ವತ್ತು ಪ್ರಕರಣಗಳಿಗೆ ಪ್ರತಿನಿತ್ಯವೂ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮಧ್ಯೆ ಪ್ರತಿನಿತ್ಯವೂ ವಾಗ್ವದ ನಡೆಯುತ್ತಿವೆ ಇವು ಯಾವುದಕ್ಕೂ ಕ್ಯಾರೆ ಎನ್ನದ ಪೌರಾಯುಕ್ತರು ತಮ್ಮಿಷ್ಟದಂತೆ ನಡೆದುಕೊಳ್ಳುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ, ಇನ್ನೂ ಪೌರಾಕಾರ್ಮಿಕಗೆ ಎರಡು ತಿಂಗಳು ಕಳೆದರು ವೇತನವಿಲ್ಲ, ಇನ್ನೂ ಸ್ವಚ್ಚತೆ ಎಂಬುದು ಮರಿಚೀಕೆಯಾಗಿದೆ.
ಜಾಣಕುರುಡುತನ ತೋರುವ ಸದಸ್ಯರು :
ಇನ್ನು ನಗರಸಭೆ ಸದಸ್ಯರು ಇದ್ದರು ಕೂಡ ಜಾಣ ಕುರುಡನ ತೋರುವ ಮೂಲಕ ಸ್ವತಃ ಕೆಲಸಗಳ ಜೊತೆಗೆ ಕೆಲವು ಸಂಬAಧಿಕರ ಕಡತಗಳಿಗೆ ಮಾತ್ರ ನಿಗಾವಹಿಸಿ ಕೆಲಸ ಮುಗಿಸಿಕೊಂಡು ಹೋಗವುದು ಬಿಟ್ಟರೆ, ನಗಸರಸಭೆ ಆಡಳಿತ ಬಗ್ಗೆ ಕಿಚ್ಚಿತ್ತು ಕಾಳಜಿ ಇಲ್ಲದೆ ಈಡೀ ನಗರಸಭೆ ಆಡಳಿತ ವೈಖರಿಗೆ ಯಾರು ಚಿಕಿತ್ಸೆ ನೀಡುವರೋ ಕಾದು ನೋಡಬೆಕಿದೆ. ಇನ್ನೂ ಇಲ್ಲಿನ ಅಧಿಕಾರಿಗಳು ಸಾರ್ವಜನಿಕರ ಕಡತಗಳನ್ನು ತಪ್ಪು ಮಾಡಿ ಮೂರು ತಿಂಗಳಾದರೂ ಸರಿಪಡಿಸಿದೆ ನಗರಸಭೆಗೆ ಅಲೆದಾಡಿಸುತ್ತಿದ್ದಾರೆ.
ಇನ್ನೂ ಇಲ್ಲಿನ ಸಮಸ್ಯೆಗಳು ಜಾಲ್ವಂತವಾಗಿದೆ ಈಡೀ ನಗರಸಭೆ ಅದಗೆಟ್ಟು ಹೊಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ ಇನ್ನೂ ನಗರಸಭೆ ಕಚೇರಿಗೆ ದಿನ ನಿತ್ಯವೂ ನಗರದ ನಾಗರೀಕರು ಆಸ್ತಿ ತೆರಿಗೆ. ಇ-ಖಾತೆ, ಮನೆ ಕಟ್ಟಲು ಪರವಾನಿಗೆ, ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ನಾಗರೀಕರು ಸಿಬ್ಬಂದಿಗಳ ಬಳಿ ಅಲೆದಾಡಿದರೂ ಕೆಲಸಗಳೇ ಆಗುತ್ತಿಲ್ಲ ಎಂಬ ಸಾರ್ವಜನಿಕ ವಲಯದಿಂದ ಆರೋಪಗಳು ಕೇಳಿ ಬರುತ್ತಿವೆ.
ಸುಖ ಸುಮನ್ನೆ ಕಡತ ವಿಳಂಬ ದೋರಣೆ :
ಇನ್ನೂ ನಗರದಲ್ಲಿ ನಿವೇಶನ ಹಾಗೂ ಆಸ್ತಿ ಮಾರಾಟ ಮಾಡ ಬೇಕಾದರೆ ಇ-ಸ್ವತ್ತು ಮಾಡಿಸಿಕೊಳ್ಳುವುದು ಅತ್ಯಾಗತ್ಯವಾಗಿದೆ ಕಾನೂನು ರೀತಿ ಇ-ಖಾತೆ ಮಾಡಿಸಿಕೊಳ್ಳ ಬೇಕಾದರೆ ಸ್ವತ್ತಿನ ಕಂದಾಯ ಕಟ್ಟುವುದು , ಅದರ ಪೀಜ್ ಕಟ್ಟುವುದು ಇದೆ ಆದರೆ ಇಲ್ಲಿ ಸುಮಾರು ಇ-ಸ್ವತ್ತು ಖಾತೆ ಮಾಡಿಸಿಕೊಳ್ಳಲು ಅಗತ್ಯ ದಾಖಲೆಗಳೊಂದಿಗೆ ಬಂದರೂ ಸಹ ತಿಂಗಳು ಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಜನರು ಕಚೇರಿಗೆ ಅಲೆದು ಹೈರಾಣಾಗಿದ್ದಾರೆ
ಮಧ್ಯವರ್ತಿಗಳ ಹಾವಳಿ :
ಮಧ್ಯವರ್ತಿಗಳು ಹಾಗೂ ಹಣವಿಲ್ಲದೆ ಈ ನಗರಸಭೆ ಕಚೇರಿಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂಬ ಸಾರ್ವಜನಿಕರ ಆರೋಪಗಳು ಕೇಳಿ ಬರುತ್ತಿವೆ. ಜನನ-ಮರಣ ಪ್ರಮಾಣ ಪತ್ರ, ಇ-ಆಸ್ತಿ ದಾಖಲೆ, ಖಾತೆ ಬದಲಾವಣೆ, ನೀರಿನ ಸಂಪರ್ಕ, ಸ್ವಚ್ಛತೆ, ಬೀದಿದೀಪ, ಮನೆ ಲೈಸನ್ಸ್, ಅಂಗಡಿ ಲೈಸನ್ಸ್, ತೆರಿಗೆ ಪಾವತಿ ಹೀಗೆ ಅನೇಕ ಕೆಲಸಗಳಿಗಾಗಿ ಸಾರ್ವಜನಿಕರು ನಗರಸಭೆಗೆ ದಿನ ನಿತ್ಯವೂ ಅಲೆಯುತ್ತಾರೆ.
ಸಕಾಲಕ್ಕೆ ಸರಿಯಾಗಿ ಸಾರ್ವಜನಿಕರಿಗೆ ಕೆಲಸ ಆಗದೆ ಜನರ ಸಮಸ್ಯೆಗಳನ್ನು ಬಗೆಹರಿಸಬೇಕಾದ ನಗರಸಭೆಯೇ ಸಮಸ್ಯೆಗಳ ತಾಣವಾದರೆ ಹೇಗೆ ಎಂಬುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.
ಸಾರ್ವಜನಿಕರಿಗೆ ಸಿಬ್ಬಂದಿಗಳಗೆ ವ್ಯತ್ಯಾಸವಿಲ್ಲ :