ಚಳ್ಳಕೆರೆ : ಗರ್ಭಿಣಿ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಆಟೋದಲ್ಲಿ ಕರೆದೊಯ್ದ ಘಟನೆ ನಡೆದ ಪರಿಣಾಮಿ ನಮ್ಮ ಚಳ್ಳಕೆರೆ ಟಿವಿ ವರದಿ ಬಿತ್ತರಿಸಿದ ಹಿನ್ನಲೆಯಲ್ಲಿ ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳು ತಂಡೊಪ ತಂಡವಾಗಿ ಸಾರ್ವಜನಿಕ ಆಸ್ವತ್ರೆಗೆ ದೌಡಾಯಿಸಿದ್ದಾರೆ.ಅದರಂತೆ ಮೊದಲಿಗೆ ಡಿಹೆಚ್‌ಓ ರಂಗನಾಥ್ ಆಸ್ವತ್ರೆಗೆ ಬೇಟಿ ನೀಡಿ ನಂತರ ಆಡಳಿತ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಪ್ರಸೂತಿ ತಜ್ಞರಾದ ಡಾ.ಶಮಾಪರಿರ್ವಿನ್ ರವರಿಗೆ ಆಡಲಿತಾತ್ಮಕ ಹಿತ ದೃಷ್ಠಿಯಿಂದ ನಾಯಕನಹಟ್ಟಿ ಆಸ್ವತ್ರೆಗೆ ವರ್ಗಾವಣಿ ಮಾಡಿ ಆದೇಶ ಹೊರಡಿಸಿದ್ದಾರೆ.ಇನ್ನೂ ಮಾಧ್ಯಮದೊಂದಿಗೆ ಮಾತನಾಡಿದ ಅವರು ತನಿಖೆ ನಂತರ ತಪ್ಪಿತಸ್ಥರಿಗೆ ಕ್ರಮ ಕೈಗೊಳ್ಳಲಾಗುವುದು ಈಗಾಗಲೆ ಕರ್ತವ್ಯದಲ್ಲಿದ ಹೆರಿಗೆ ವೈದ್ಯರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.ಇನ್ನೂ ಸಿಇಓ ದಿವಕಾರ್ ಬೇಟಿ ನೀಡಿ ತಾಯಿ ಮತ್ತು ಮಕ್ಕಳ ಆಸ್ವತ್ರೆಯ ಎಲ್ಲಾ ವಿಭಾದ ರೋಗಿಗಳನ್ನು ವಿಚಾರಿಸಿ ನಂತರ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಹೆರಿಗೆ ಮಾಡಿಸಲು ಹಣ ಕೇಳಿದ್ದರಿಂದ ಅವರಲ್ಲಿ ಹಣ ಇಲ್ಲದೆ ಇರುವ ಕಾರಣ ಅವರು ಆಟೋ ಮಾಡಿಕೊಂಡು ಜಿಲ್ಲಾಸ್ಪತ್ರೆಗೆ ಹೋಗುವಂತೆ ನಿರ್ಧಾರ ಕೈಕೊಂಡಿರಬಹುದು, ಆದರೆ ಬಡ ಜನರು ಸರಕಾರಿ ಆಸ್ವತ್ರೆ ನಂಬಿಕೊAಡು ಬರುತ್ತಾರೆ ಇಂತಹ ಗರ್ಭಿಣಿ ಮಹಿಳೆ ಸೋಮವಾರ ಆಸ್ಪತ್ರೆಗೆ ಎಷ್ಟು ಗಂಟೆಗೆ ಬಂದಿದ್ದರು, ಆ ತುರ್ತು ವಾಹನಕ್ಕೆ ಕರೆ ಮಾಡಿದಾಗ ವಿಳಂಬವಾಗಿರುವ ಬಗ್ಗೆ ಸಾರ್ವಜನಿಕ ಆಸ್ಪತ್ರೆಯಲ್ಲಿನ ಸಿ.ಸಿ ಕ್ಯಾಮರದ ದೃಶ್ಯಗಳೊಂದಿಗೆ ಸಂಪೂರ್ಣ ಮಾಹಿತಿ ನೀಡುವಂತೆ ಆಡಳಿತ ವೈದ್ಯಾಧಿಕಾರಿಗೆ ತಿಳಿಸಿದರು.ಇನ್ನೂ ಪ್ರಸೂತಿ ತಜ್ಞೆ ಡಾ.ಶಮಾಪರ್ವಿನ್ ಮಾದ್ಯಮಾದೊಂದಿಗೆ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಮಹಿಳೆಗೆ ಮಕ್ಕಳಾಗದೆ ಇರುವುದರಿಂದ ನಾನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದೆ ಆದರೆ ಸೋಮವಾರ ಖಾಸಗಿ ಆಸ್ಪತ್ರೆಗೆ ಬಂದಿದ್ದರು ತಪಾಸಣೆ ಮಾಡಿ ಹೇಳಿದೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಇಲ್ಲಿ ದಾಖಲಾಗಿ ಹಣಪಾವತಿ ಮಾಡಿ ಎಂದು ಹೇಳಿದೆ ಅವರು ಇಲ್ಲೇ ದಾಖಲಾಗುತ್ತೇವೆ ಎಂದು ಹೇಳಿದರೂ ಆದರೆ ಅವರು ಸಾರ್ವಜನಿಕ ಆಸ್ಪತ್ರೆಗೆ ಬಂದಿರುವುದು ಅಲ್ಲಿನ ಸಿಬ್ಬಂದಿಗಳು ಕರೆ ಮಾಡಿದಾಗ ಮಾಹಿತಿ ಗೊತ್ತಾಗಿದೆ ಎಂದು ಅಧಿಕಾರಿಗಳ ಮುಂದೆ ಸಮಾಜಾಯಿಷಿಕೊಂಡರು.
ತಾತ್ಕಲಿಕವಾಗಿ ವೈದ್ಯಾದಿಕಾರಿಗಳ ನೇಮಕ :
ಈ ಘಟನೆಗೆ ಸಂಬAಧಿಸಿದAತೆ ಪ್ರಸೂತಿ ತಜ್ಞರ ತನಿಖೆ ಮುಗಿಯುವತನಕ ತಾತ್ಕಾಲಿಕವಾಗಿ ನಾಯಕನಹಟ್ಟಿ ಆರೋಗ್ಯ ಕೇಂದ್ರಕ್ಕೆ ಪ್ರಸೂತಿ ತಜ್ಞೆ ವೈದ್ಯೆ ಶಮಾಪರ್ವೀನ್ ನೇಮಕ ಮಾಡಲಾಗಿದೆ, ಇಲ್ಲಿ ಕರ್ತವ್ಯ ನಿರ್ವಹಿಸುವ ಪ್ರಸೂತಿ ತಜ್ಞ ಡಾ.ನಾಗರಾಜು ಇವರನ್ನು ಸಾರ್ವಜನಿಕ ಆಸ್ಪತ್ರೆಗೆ ನಿಯೋಜನೆ ಮಾಡಿ ಆದೇಶ ಹೊರಡಿಸಿದ್ದಾರೆ.ಈ ಸಂದರ್ಭದಲ್ಲಿ ತಾಲೂಕು ಸಾರ್ವಜನಿಕ ಆಡಳಿತ ವೈದ್ಯಾಧಿಕಾರಿ ಡಾ.ವೆಂಕಟೇಶ್, ತಾಪಂ ಇಒ ಹೊನ್ನಯ್ಯ ಇದ್ದರು.ಕನ್ನಡಪರ ರಕ್ಷಣಾ ವೇಧಿಕೆಯ ಆರೋಪ. ನಾನೆ ನನ್ನ ಪತ್ನಿಯ ಹೆರಿಗೆ ಮಾಡಿಸಲು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಇಲ್ಲಿ ಆಗುವುದಿಲ್ಲ ಚಿತ್ರದುರ್ಗ ಅಥವಾ ಬಸವೇಶ್ವರ ಆಸ್ಪತ್ರಗೆ ಹೋಗಿ ಎಂದು ಹೇಳಿದ್ದರು ಕೊನೆಗೆ ನಾನು ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ಕರೆದುಕೊಂಡು ಹೋದೆ ಹಣವಿಲ್ಲದೆ ಹೆರಿಗೆ ಆಯ್ತು ಬಡವರು ಕೂಲಿ ಕಾರ್ಮಿಕರು ಸರಕಾರಿ ಆಸ್ಪತ್ರೆಗೆ ಬರುತ್ತಾರೆ ಆದರೆ ಇಲ್ಲಿ ಹೆರಿಗೆಗೆ ಇಷ್ಟೊಂದು ಹಣ ಕೊಡಲು ಸಾಧ್ಯನಾ ಕೂಡಲೆ ಇವರನ್ನು ಬೇರೆ ಕಡೆ ವರ್ಗವಾಣೆ ಒಳ್ಳೆಯ ವೈದ್ಯರನ್ನು ನೇಮಕ ಮಾಡದಿದ್ದರೆ ಹೋರಾಟ ಮಾಡುವುದಾಗಿ ಕನ್ನಡ ರಕ್ಷಣಾ ವೇಧಿಕೆಯ ಪ್ರವೀಣಿಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಟಿ, ಮಂಜುನಾಥ್ ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು.