ನಾಯಕನಹಟ್ಟಿ:: ಕೇಂದ್ರ ಸರ್ಕಾರದ ಪಿ ಎಂ ಕಿಸಾನ್ ಯೋಜನೆ ಅಡಿ ನೊಂದಾಯಿತ ಅರ್ಹ ರೈತರು ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದ್ದು ಹೊಸದಾಗಿ ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಕೃಷಿ ಅಧಿಕಾರಿ ಹೇಮಂತ್ ನಾಯ್ಕ ರೈತರಿಗೆ ಕರೆ ನೀಡಿದರೆ.
ಅವರು ಮಂಗಳವಾರ ಪಟ್ಟಣದ ಕೃಷಿ ಇಲಾಖೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಹೋಬಳಿಯ ರೈತರಿಗೆ ಅನೇಕ ಬಾರಿ ಮನವಿ ಮಾಡಿದ್ದರು ಸಹ ಕೆಲವು ರೈತರು ಇ-ಕೆವೈಸಿ ಮಾಡಿಸಿರುವುದಿಲ್ಲ ಅರ್ಹ ರೈತ ಪಲಾನುಭವಿಗಳು ವೆಬ್ ಸೈಟಿಗೆ ಭೇಟಿ ನೀಡಿ ಆಧಾರ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕು ಮೊಬೈಲ್ ಸಂಖ್ಯೆಗೆ ಬರುವ
ಓ ಟಿ ಪಿ ಅನುಮೋದಿಸಿ ಉಚಿತವಾಗಿ ಇ-ಕೆವೈಸಿ ಮಾಡಿಕೊಳ್ಳಬಹುದು.
ಆಧಾರ್ ಸಂಖ್ಯೆ ಮೊಬೈಲ್ ನಂಬರ್ ನೊಂದಣಿ ಯಾಗದ ಅಥವಾ ಓಟಿಪಿ ಸೃಜನೆಯಾಗದ ರೈತರು ಗ್ರಾಮ ಒನ್ ಸೇವಾ ಕೇಂದ್ರಕ್ಕೆ ಸಿ ಎಸ್ ಸಿ ಸೆಂಟರ್ಗೆ ಭೇಟಿ ನೀಡಿ ಬಯೋಮೆಟ್ರಿಕ್ ಉಪಕರಣದಲ್ಲಿ ಬೆರಳಚ್ಚು ನಮೂದಿಸಿ ಇ-ಕೆವೈಸಿ ಮಾಡಿಕೊಳ್ಳಬಹುದು ಹೋಬಳಿಯ ರೈತರು ಹೆಚ್ಚಿನ ಮಾಹಿತಿಗಾಗಿ ಪಟ್ಟಣದ ರೈತ ಸಂಪರ್ಕ ಕೇಂದ್ರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಕೃಷಿ ಅಧಿಕಾರಿ ಹೇಮಂತ್ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದರೆ