ಚಳ್ಳಕೆರೆ : ಕರುಳು ಕಿತ್ತು ಬರುವ ಕರುಣಾಮಯಿ ಘಟನೆ ನಿಮ್ಮ ಮುಂದೆ ಇಡಲಿದ್ದೆವೆ
ಒಬ್ಬತ್ತು ತಿಂಗಳು ತುಂಬಿದ ತುಂಬು ಗರ್ಭಿಣಿಯ ನೋವುವನ್ನು ಅರ್ಥ ಮಾಡಿಕೊಳ್ಳದ ಖಾಸಗಿ ಕ್ಲಿನಿಕ್‌ಗಳ ದಂಧೆಗೆ ಕಡಿವಾಣ ಹಾಕುವರು ಯಾರು
ಇಂತಹದೊAದು ಹೃದಯ ವಿದ್ರವಕ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದೆ
ತಾಲೂಕಿನ ಜಿ.ದೇವರಹಳ್ಳಿ ಗ್ರಾಮದ ಗರ್ಭಿಣಿ ಮಹಿಳೆ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಒಬ್ಬತ್ತು ತಿಂಗಳು ತುಂಬಿದ ತರುವಾಯ ಆಸ್ವತ್ರೆಗೆ ಬಂದರೆ ಖಾಸಗಿ ಆಸ್ವತ್ರೆಯ ದುಬಾರಿ ಶುಲ್ಕ ಕಟ್ಟಲಾಗದೆ ಮತ್ತೆ ತಾಲೂಕು ಸಾರ್ವಜನಿಕ ಆಸ್ವತ್ರೆಗೆ ಮರಳಿದ್ದಾರೆ.
ಆದರೆ ಸರಕಾರಿ ಆಸ್ವತ್ರೆಯಲ್ಲಿ ವೈದ್ಯರಿಲ್ಲದೆ ಕೇವಲ ನರ್ಸ್ಗಳು ತಪಾಸಣೆ ನಡೆಸಿ ನಂತರ ಇಲ್ಲಿ ಹಾಗುದಿಲ್ಲ ಚಿತ್ರದುರ್ಗ ಜಿಲ್ಲಾ ಆಸ್ವತ್ರೆಗೆ ಹೋಗಿ ಎಂದು ಹೇಳಿದ್ದಾರೆ ಇನ್ನೂ ಗರ್ಭಿಣಿ ಮಹಿಳೆಯನ್ನು ಆಂಬ್ಯೂಲೆನ್ಸ್ ವಾಹನದಲ್ಲಿ ಕಳಿಸದೆ ಸರಕಾರಿ ಬಸ್‌ಗೆ ಹೋಗಿ ಎಂದು ನಮಗೆ ಸೂಚಿಸಿದರು ಎಂದು ಗರ್ಭಿಣಿ ಮಹಿಳೆ ತಾಯಿ ಬೋರಮ್ಮ ಆರೊಪ ಮಾಡಿದ್ದಾರೆÀ.
ಇನ್ನೂ ಸಾರ್ವಜನಿಕ ಆಸ್ವತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವೆಂಕಟೇಶ್ ದೂರವಾಣಿ ಮೂಲಕ ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದ ಅವರು ನಮ್ಮ ಆಸ್ವತ್ರೆಯಲ್ಲಿ ಮೊದಲಿಗೆ ನರ್ಸ್ಗಳು ತಪಾಸಣೆ ನಡೆಸಿ ನಂತರ ಡಾಕ್ಟರ್ ಬಳಿ ತೊರಿಸಲು ಸೂಚಿಸಿದ್ದಾರೆ ಆದರೆ ಅವರು ಜಿಲ್ಲಾ ಆಸ್ವತ್ರೆಗೆ ತೆರಳುವುದಾಗಿ ತಿಳಿಸಿ ನಂತರ ಅಂಬ್ಯೂಲೆನ್ಸ್ಗೆ ಹೋಗಿ ಎಂದರು ಅವರು ಕೇಳದೆ ಅವರು ಸ್ವತಃ ಆಟೋದಲ್ಲಿ ತೆರಳಿದ್ದಾರೆ ಎನ್ನುತ್ಥಾರೆ.
ಇನ್ನೂ ಗರ್ಭಿಣಿ ಮಹಿಳೆ ತಾಯಿ ಬೋರಮ್ಮ ದೂರವಾಣಿ ಮೂಲಕ ಮಾತನಾಡಿದ ಅವರು ಸ್ವಾಮಿ ನಮ್ಮಂತ ಬಡ ಹೆಣ್ಣು ಮಕ್ಕಳಿಗೆ ಸರಕಾರ ಈರೀತಿ ಅನ್ಯಾಯ ಮಾಡಬಾರದರು ಕೇವಲ ದುಡ್ಡು ಇದ್ದರೆ ಮಾತ್ರ ಸರಕಾರಿ ಆಸ್ವತ್ರೆ ಎನ್ನುವಂತಾಗಿದೆ ಆರೋಪ ಮಾಡಿದ್ದಾರೆ.