ಚಳ್ಳಕೆರೆ : ರಾಜ್ಯದಲ್ಲಿ ಸಿಎಂ ಖುರ್ಚಿಗಾಗಿ ಕಳೆದ ಮೂರು ದಿನಗಳಿಂದ ನಡೆಯುವ ಲಾಭಿ ಕೊನೆಗೆ ದೆಹಲಿ ಅಂಗಳದಲ್ಲಿ ಮುಕ್ತಾಯವಾಗುವಂತಿದೆ ಇನ್ನೂ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಹು ಮತಗಳಿಂದ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು
ಹಲವು ಉದ್ದೆಗಳಿಗೆ ಭರ್ಜರಿಯಾಗಿ ಲಾಬಿ ನಡೆಯುತ್ತಿದೆ ಅದರಂತೆ ರಾಜ್ಯದ ವಿವಿಧ ಭಾಗದ ಹಲವು ಶಾಸಕರುಗಳು ತಮ್ಮ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ.
ಅದರಂತೆ ಮಧ್ಯ ಕರ್ನಾಟಕ ಭಾಗದ ಕಲ್ಲಿನ ಕೊಟೆಯಲ್ಲಿ ಕಳೆದ 2013ರಿಂದ ಸತತವಾಗಿ ಗೆಲುವು ಸಾಧಿಸಿ ಗೆದು ಬೀಗಿದ ಆಯಿಲ್ ಸಿಟಿಯ ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನಿಗಧಿಯಾಗುವ ಎಲ್ಲಾ ಲಕ್ಷ÷್ಣಗಳು ಗೋಚರಿಸುತ್ತಿವೆ ಅದರಂತೆ
ಇನ್ನೂ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಶಾಸಕರು ಕಳೆದ ಮೂರು ದಿನಗಳಿಂದ ಸಚಿವಸ್ಥಾನ ಗಿಟ್ಟಿಸಿಕೊಳ್ಳಬೇಕು ಎಂದು ಹಲವು ವರಿಷ್ಠರಿಗೆ ತಮ್ಮ ಪಕ್ಷ ಸಂಘಟನೆಯ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಕಾಂಗ್ರೇಸ್ ಸ್ಥಾನಗಳನ್ನು ತಂದು ಕೊಟ್ಟಿರುವ ಬಗ್ಗೆ ಮನವರಿಕೆ ಮಾಡುತ್ತಾ ಸಚಿವ ಸ್ಥಾನ ನೀಡಲೇಬೇಕು ಎಂದು ಪಟ್ಟು ಇಡಿದ್ದಿದ್ದಾರೆ.

ಅದರಂತೆ ಇನ್ನೂ ಕಲ್ಲಿನ ಕೋಟೆಯ ಆರು ಶಾಸಕರಲ್ಲಿ ಬಿಜೆಪಿ ಶಾಸಕ ಎಂ.ಚAದ್ರಪ್ಪರವರನ್ನು ಹೊರತು ಪಡಿಸಿದರೆ ಉಳಿದ ಐದು ಶಾಸಕರು ಕಾಂಗ್ರೇಸ್ ಪಕ್ಷದಲ್ಲೆ ಗೆಲವು ಸಾಧಿಸಿದ ಅಗ್ರ ಗಣ್ಯರಾಗಿದ್ದಾರೆ.
ಇನ್ನೂ ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ ಎನ್.ವೈ .ಗೋಪಾಲಕೃಷ್ಣ ರವರು ಐದು ಬಾರಿ ಶಾಸಕರಾಗಿ ಹೊರ ಹೊಮ್ಮಿದ್ದರು ಕಳೆದ 2018ರ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಗೆದ್ದು ಶಾಸಕರಾಗಿ ನಂತರ 2023ಕ್ಕೆ ಕಾಂಗ್ರೆಸ್ ಗೆ ವಲಸೆ ಬಂದವರು ಹಾಗಿದ್ದಾರೆ ಇನ್ನೂ ಇವರ ಹಿರಿತನಕ್ಕೆ ಸಭಾಧ್ಯಕ್ಷ ಸ್ಥಾನ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ, ಇನ್ನೂ ಹಿರಿಯೂರು ವಿಧಾನ ಸಭಾ ಕ್ಷೇತ್ರದ ನೂತನ ಶಾಸಕ ಡಿ.ಸುಧಾಕರ್ ರವರು ಕಳೆದ ಚುನಾವಣೆಯಲ್ಲಿ ಸೋಲುಂಡು ಮತ್ತೆ ಗೆಲುವಿನ ನಗೆ ಬೀರಿದ್ದಾರೆ ಇನ್ನೂ ಕಳೆದ ಬಿಜೆಪಿ ಸರಾಕಾರ ಇದ್ದ ಸಂಧರ್ಭದಲ್ಲಿ ಸಚಿವ ಸ್ಥಾನ ಕೂಡ ಗಿಟ್ಟಿಸಿಕೊಂಡಿದ್ದಾರೆ, ಈಗೇ ಹಲವು ಏರುಯಪೇರುಗಳ ಮಧ್ಯೆ ಇವರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇಲ್ಲವಾಗಿದೆ, ಅದರಂತೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಾ ಕೋಟೆಯಾಗಿತ್ತು ಇಂತಹ ಕೋಟೆಗೆ ಲಗ್ಗೆ ಇಟ್ಟ ಕೆಸಿ.ವೀರೇಂದ್ರ ಪಪ್ಪಿ ಕಾಂಗ್ರೇಸ್ ಪಕ್ಷದಿಂದ ಗೆಲುವು ಸಾಧಿಸಿ ಯುವ ಹಾಗೂ ನೂತನ ಶಾಸಕರಾಗಿದ್ದಾರೆ ಇನ್ನೂ ಇವರ ಭವಿಷ್ಯ ಇರುವ ಕಾರಣ ಅಷ್ಟಾಗಿ ಸಚಿವ ಸ್ಥಾನ ಸಿಗುವ ಯಾವ ಲಕ್ಷಣಗಳು ಗೋಚರಿಸುವುದಿಲ್ಲ,
ಇನ್ನೂ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಗೋವಿಂದಪ್ಪ ರವರು ಇವರು ಕೂಡ ಸಚಿವ ರೇಸ್ ನಲ್ಲಿ ಇದ್ದಾರೆ ಆದರೆ ಇವರು ಕೂಡ ಕಳೆದ ಬಾರಿ ಸೊಲುಂಡು ಈಗ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ್ದಿದ್ದಾರೆ ಆದ್ದರಿಂದ ಇವರ ಪಕ್ಷ ಸಂಘಟನೆ ನಂಟು ಕೂಡ ಇದೆ ಏನೆ ಹಾದರೂ ವರಿಷ್ಠರ ತಿರ್ಮಾನವೇ ಅಂತಿಮ ಆದರೆ ಇವೆಲ್ಲಕ್ಕೂ ಮಿಗಿಲಾಗಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕಳೆದ ಹತ್ತು ವರ್ಷಗಳಿಂದ ಇಡೀ ಜಿಲ್ಲೆ ಕೆಸರಿ ಪಾಳಯದ ಕೈ ವಶದಲ್ಲಿ ಇದ್ದ ಸಂಧರ್ಭದಲ್ಲಿ ಏಕಾಂಗಿಯಾಗಿ ಹೋರಾಟ ಮಾಡಿ ಜಿಲ್ಲೆಯ ವಿರೋಧ ಪಕ್ಷದ ನಾಯಕನಾಗಿ ಪಕ್ಷ ಸಂಘಟನೆಗೆ ಹೆಚ್ಚು ಶ್ರಮಿಸಿದ ಹಾಗೂ 2023ಕ್ಕೆ ಜಿಲ್ಲೆಯಲ್ಲಿ ಸುಮಾರು 5 ಸ್ಥಾನ ಬರಲು ಇವರ ಶ್ರಮಕೂಡ ತುಂಬಾ ಇದೆ ಆದ್ದರಿಂದ ಈ ಎಲ್ಲಾ ಲಕ್ಷಣಗಳು ಗೋಚರಿಸುವುದರಿಂದ ಬಹುತೇಖ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಗೆ ಮಂತ್ರಿಗಿರಿ ಪಟ್ಟ ಸಿಗುವ ಭರವಸೆ ಮತದಾರರಲ್ಲಿ ಮೂಡಿದೆ.

Namma Challakere Local News
error: Content is protected !!