ಚಳ್ಳಕೆರೆ : ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ಎಂದರೇ ಇಡೀ ದೇಶದಲ್ಲಿ ಅಗ್ರಮಾನ್ಯವಾದ ಸ್ಥಾನಮಾನ ಇದೆ ಅದರಂತೆ ಈ ಕ್ಷೇತ್ರದಲ್ಲಿ ಪ್ರತಿನಿಧಿಸಿದ ಪ್ರತಿಯೊಬ್ಬರೂ ಕೂಡ ಗೆಲುವಿನ ನಗೆ ಬೀರಿದ್ದಾರೆ.
ಈಡೀ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ನಾಲ್ಕು ಜನ ಶಾಸಕರನ್ನು ಕೊಟ್ಟ ತಾಯಿ ಕ್ಷೇತ್ರ ಚಳ್ಳಕೆರೆ
ಕಲ್ಲಿನ ಕೋಟೆಯ ಮೇಲೆ ಕೆಂಪು ಬಾವುಟ ಹಾರಿಸಲು ಸಜ್ಜಾದ ಆಯಿಲ್ ಸಿಟಿಯ ರಾಜಾಕೀಯ ಚದುರಂಗದ ಆಟದಲ್ಲಿ ಗೆಲವು ಸಾಧಿಸಿ ಮಹಾನೀಯರು
ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಈದೇ ಕ್ಷೆತ್ರದ ಕಡಬನಕಟ್ಟೆ ಗ್ರಾಮದವರು, ಇನ್ನೂ ಚಳ್ಳಕೆರೆ ನಗರದ ಮೂಲ ನಿವಾಸಿಯಾದ ಕಲ್ಲಿನ ಕೋಟೆಯ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಹಾಗೂ ಹಿರಿಯೂರು ಕ್ಷೇತ್ರದ ಅದಿಪತ್ಯ ಹೊಂದಿದ ಡಿ.ಸುಧಾಕರ್ ಕೂಡ ನಮ್ಮ ಚಳ್ಳಕೆರೆಯ ಮಗ ಎನ್ನಲಾಗಿದೆ
ಅದರಂತೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಶಾಸಕ ಎಂ.ಚAದ್ರಪ್ಪ ಹೊಲ್ಕೆಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಎರಡು ಬಾರಿ ಗೆದು ಬೀಗಿದ್ದಾರೆ.
ಅದರಂತೆ ಕಲ್ಲಿನ ಕೋಟೆಯ ಅದಿಪತ್ಯಕ್ಕೆ ಆಯಿಲ್ ಸಿಟಿಯ ಕುವರರು ಪಾರುಪತ್ಯ ವಹಿಸಿರುವುದು ಚಳ್ಳಕೆರೆ ಕ್ಷೆತ್ರದ ಹೆಮ್ಮೆಯಾಗಿದೆ ಎಂದು ತಾಯಿ ಕ್ಷೇತ್ರದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.