ಚಳ್ಳಕೆರೆ : ಮೂರು ಬಾರಿ ಅಧಿಕಾರ ಗದ್ದುಗೆ ಹಿಡಿದ ಹಾಲಿ ಶಾಸಕ ಟಿ.ರಘುಮೂರ್ತಿ ಈ ಭಾರಿಯೂ ಕೂಡ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಜಯ ಗಳಿಸಿದ್ದಾರೆ.
ಹೌದು ನಿಜಕ್ಕೂ ಅಚ್ಚರಿಯನ್ನಬಹುದು ಇಷ್ಟೋಂದು ಬಹುಮತಗಳಿಂದ ಗೆಲುವು ಸಾಧಿಸುತ್ತಾರೆ ಎಂಬುದು ಯಾರೂ ಕೂಡ ಊಹಿಸಿರಲಿಲ್ಲ ರಘುಮೂರ್ತಿಗೆ ಕೈ ಕಾರ್ಯಕರ್ತರು ದೂರ ಉಳಿದಿದ್ದಾರೆ ಈ ಭಾರಿ ಯೋಚನೆ ಮಾಡಬೇಕು ಎನ್ನುವ ಮಾತುಗಳು ಕೇಳಿಬರುತ್ತಿದ್ದವು ಆದರೆ ನಿಜವಾದ ಕೆಲಸಗಾರನಿಗೆ ಯಾವ ಅಡೆತಡೆ ಇಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣಸಿಗುತಿದೆ.

ಅದರಂತೆ ಈಡೀ ಕ್ಷೇತ್ರದ ಎಲ್ಲಾ ಸಮುದಾಯಗಳ ಸರ್ವ ಜನಾಂಗದ ವಿಶ್ವಾಸದ ಮೇಲೆ ನಡೆಯುವ ರಘುಮೂರ್ತಿ ಈಡೀ ಕ್ಷೇತ್ರದ ಇತಿಹಾಸದಲ್ಲೆ ಮೊದಲ ಬಾರಿಗೆ ಹ್ಯಾಟ್ರಿಕ್ ಬಾರಿಸುವ ಮೂಲಕ ಕ್ಷೇತ್ರದ ಜನರ ಮನ ಗೆದ್ದ ಶಾಸಕ ಎಂಬು ಬಿರುದಿಗೆ ಬಾಜನರಾಗಿದ್ದಾರೆ.
ಅದರಂತೆ ಕಳೆದ 2013ರಿಂದ 2018, ಹಾಗೂ 2023 ರಲ್ಲಿ ಮೂರು ಬಾರಿ ಸತತವಾಗಿ ಗೆಲ್ಲುವು ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಇನ್ನೂ ಪೈಪೋಟಿಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹಾಗೂ ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಪಕ್ಷೇತರ ಅಭ್ಯರ್ಥಿ ಕೆಟಿ.ಕುಮಾರಸ್ವಾಮಿ ಪೈಪೋಟಿ ನೀಡಿದರು ಕೂಡ ಸತತವಾಗಿ ಮೂರು ಬಾರಿ ಗೆಲುವಿನ ನಗೆ ಬೀರಿದ್ದಾರೆ.

ಇನ್ನೂ ಕ್ಷೇತ್ರದಲ್ಲಿ ಉತ್ತಮ ಆಡಳಿತ್ಮಾತಕ ಆಡಳಿತ ನೀಡುವ ಮೂಲಕ ಮಾದರಿ ತಾಲೂಕು ಕೇಂದ್ರಕ್ಕೆ ಶ್ರಮಿಸಿದ್ದಾರೆ. ಕ್ಷೇತ್ರದಲ್ಲಿ ಯಾವದೇ ಕೋಮು ಗಲಬೆಯಾಗದಂತೆ ನೋಡಿಕೊಂಡ ಶಾಸಕರು, ರಾಜಾಕೀಯ ದ್ವೇಷ ಇಲ್ಲದೆ ಆಡಳಿತ ನಡೆಸಿದ್ದಾರೆ,
ಅದರಂತೆ 2023ಕ್ಕೆ ಹ್ಯಾಟ್ರಿಕ್ ಗೆಲುವು ಸಾಧಿಸಿದ ಕೈ ಅಭ್ಯರ್ಥಿ ಟಿ.ರಘುಮೂರ್ತಿ 3ನೇ ಸಲ ಚಳ್ಳಕೆರೆಯಿಂದ ಗೆಲುವು ಸಾಧಿಸಿ ಟಿ.ರಘುಮೂರ್ತಿ 16127 ಮತಗಳ ಅಂತರದಿAದ ಗೆಲುವು ಸಾದಿಸಿದ್ದಾರೆ.
ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಟಿ.ರಘುಮೂರ್ತಿ ಪಡೆದ ಮತಗಳು 67363, ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಪಡೆದ ಮತಗಳು 51236, ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಪಡೆದ ಮತಗಳು 28928, ಬಿಜೆಪಿ ಅಭ್ಯರ್ಥಿ ಅನಿಲ್‌ಕುಮಾರ್ 22732 ಪಡೆದಿದ್ದಾರೆ.

Namma Challakere Local News
error: Content is protected !!