ಚಳ್ಳಕೆರೆ : ನಾನು ಅಧಿಕಾರ ಅವಧಿಯಲ್ಲಿ ಇದ್ದು ಜನರ ಸೇವೆಯನ್ನು ಇನಷ್ಟು ಉತ್ಕೃಷ್ಟವಾಗಿ ಸೇವೆ ಮಾಡಲು ರಾಜಿನಾಮೆ ನೀಡಿ ಬಂದಿದ್ದೆನೆ ಎಂದು ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಹೇಳಿದರು.
ಅವರು ಕ್ಷೇತ್ರದಲ್ಲಿ ಮನೆ ಮನೆಗೆ ಮತಯಾಚನೆ ನಡೆಸಿ ಮಾತನಾಡಿದರು ಇನ್ನೂ ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಬೇಕಿರುವುದು ಸಾಕಷ್ಟಿದೆ ಆದರೆ ಕೆಲವರು ಎಲ್ಲಾ ಮುಗಿದಿದೆ ಎಂದು ಬೊಂಬೆ ಹೊಡೆಯುತ್ತಾರೆ. ಆದರೆ ನಗರದಲ್ಲಿ ಯುಜಿಡಿ ಇಲ್ಲ, ವಸತಿ ನಿವೇಶದ ಹಕ್ಕು ಪತ್ರ ನೀಡಿಲ್ಲ, ಸೂರು ಇಲ್ಲದವರಿಗೆ ಸೂರು ಕಲ್ಪಿಸಿಲ್ಲ, ಈಗೇ ಜಾಲ್ವಂತ ಸಮಸ್ಯೆಗಳು ಕ್ಷೇತ್ರದಲ್ಲಿ ತಲೆದೂಡಿವೆ ಎಂದರು.
ಈಡೀ ರಾಜ್ಯದಲ್ಲಿ ಚುನಾಚಣೆ ಕಾವು ಭರ್ಜರಿಯಾಗಿ ರಂಗೇರಿದೆ
ಅದರAತೆ ವಿಜ್ಞಾನ ನಗರಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕೇಸರಿ ಪಾಳಯದ ಕಲಿಗಳು ಕಾಂಗ್ರೇಸ್ ಭದ್ರಾಕೋಟೆಯನ್ನು ಚಿದ್ರಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ
ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಈಡೀ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಮತಬೇಟೆ ನಡೆಸಿದರು.
ಡಬಲ ಇಂಜಿನ್ ಸರಕಾರ ಜಾರಿಗೆ ತಂದ ಹಲವು ಯೋಜನೆಗಳನ್ನು ಕ್ಷೇತ್ರದಲ್ಲಿ ಮತದಾರರಿಗೆ ಮನವರಿಕೆ ಮಾಡುತ್ತಾ ಮತಪ್ರಚಾರ ನಡೆಸಿದರು.