ಚಳ್ಳಕೆರೆ : ಈಡೀ ಕ್ಷೇತ್ರದಲ್ಲಿ ಮಾಡಬೇಕಾದ ಹಲವು ಕೆಲಸಗಳು ಸ್ಥಗಿತವಾಗಿದೆ, ಕೇವಲ ಡಾಂಭಿಕತೆಗೆ ಮಾತ್ರ ಈ ಹಿಂದೆ ಆಳ್ವಿಕೆ ಮಾಡಿದ ಶಾಸಕರು ಮಾಡಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ವಾಗ್ದಾಲಿ ನಡೆಸಿದರು.
ಅವರು ಕ್ಷೇತ್ರದ ತುರುವನೂರ ಹೋಬಳಿಯ ಹಲವು ಹಳ್ಳಿಗೆ ಮತಬೇಟೆ ನಡೆಸಿ ಮಾತನಾಡಿದರು. ನಮ್ಮ ಕ್ಷೇತ್ರ ಇಷ್ಟು ದಿನ ಅನ್ಯರ ಪಾಲಾಗಿದೆ ಆದ್ದರಿಂದ 2023ಕ್ಕೆ ನಿಮ್ಮ ಮಗನನ್ನು ಗೆಲ್ಲಿಸಿ ವಿಧಾನ ಸೌಧಕ್ಕೆ ಕಳಿಸಿ ನಿಮ್ಮ ಸೇವೆಗೆ ಬದ್ದನಾಗಿರುವೆ ಸ್ಥಳೀತ ಅಭ್ಯರ್ಥಿಗೆ ಮತನೀಡಿ ನಿಮ್ಮ ಕ್ಷೇತ್ರ ಅಭಿವೃದ್ದಿ ಕಾಣಿ ಎಂದರು.
ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, 2023ರ ಚುನಾವಣೆ ಧರ್ಮ, ಸತ್ಯದ ಚುನಾವಣೆಗ ಯಾಗುವುದರಲ್ಲಿ ಎರಡು ಮಾತಿಲ್ಲ ರಾಜಾಕೀಯ ಎಂದರೆ ದುಡ್ಡಿದ್ದರೆ ಮಾತ್ರ ಎಂಬ ಮಾತು ಸುಳ್ಳಾಗಬೇಕು, ದುಡ್ಡಿ ಇಲ್ಲದಿದ್ದರು ಅಧಿಕಾರ ಹಿಡಿಯಬಹುವುದು ಎಂಬುದು ಚಳ್ಳಕೆರೆ ಕ್ಷೇತ್ರದಲ್ಲಿ ಹಾಸುಹೊಕ್ಕಾಗಿಬೇಕು, ನೈತಿಕದ ಚುನಾವಣೆಗೆ ಮತದಾರರು ಬೆಂಬಲ ಸೂಚಿಸಬೇಕು ನಿಮ್ಮ ಕ್ಷೇತ್ರ ಅಭಿವೃದ್ದಿ ಕಾಣಲು ಇಂತಹ ಸ್ಥಳೀಯ ಸಂಬAಧಗಳನ್ನು ಜೊತೆಗಿಟ್ಟುಕೊಂಡು ಬಂದ ವ್ಯಕ್ತಿಗೆ ನಿಮ್ಮ ಮತ ನೀಡಬೇಕು ಎಂದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣ ಕಣ ಭರ್ಜರಿಯಾಗಿ ರಂಗೇರಿದೆ
ಅದರಂತೆ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಈಡೀ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಮನೆ ಮನೆಗೆ ತೆರಳಿ ಮತಬೇಟೆ ನಡೆಸುತ್ತಿದ್ದಾರೆ.
ಅದರಂತೆ ಇಂದು ತುರುವನೂರು ಹೋಬಳಿಯ ಉಪ್ಪಾರಹಟ್ಟಿ,ದೊಡ್ಡಗಟ್ಟ, ಮ್ಯಸರಹಟ್ಟಿ, ಕಡಬನಕಟ್ಟೆ, ಬೋಗರಹಟ್ಟಿ, ಅವಹೇಳನಹಟ್ಟಿ ಈಗೇ ಹಲವು ಗ್ರಾಮಗಳಿಗೆ ತೆರಳಿದ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ, ಆಡಳಿತ ಪಕ್ಷದ ಕೈ ಶಾಸಕ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಮಾಡದೆ ಶಾಸಕರು ಮಾತ್ರ ಅಭಿವೃದ್ದಿ ಹಾಗಿದ್ದಾರೆ ಎಂದು ಮತದಾರರ ಓಲೈಕೆಯಲ್ಲಿ ನಿರತರಾಗಿದ್ದಾರೆ.
ಇನ್ನೂ ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ ಹಾಗು ಶಿವಪುತ್ರಪ್ಪ ಇದತರರ ಈಡೀ ದಿನ ಸಾಥ್ ನೀಡಿದರು.

About The Author

Namma Challakere Local News
error: Content is protected !!