ಚಳ್ಳಕೆರೆ : ಕ್ಷೇತ್ರಕ್ಕೆ ಬಂದ ಅನ್ಯ ಪಕ್ಷದ ಅಭ್ಯರ್ಥಿಗಳು ಯಾವುದೇ ಅಸ್ತç ಬಳಸಿದರು ಚಳ್ಳಕೆರೆ ಜನ ಪ್ರಬುದ್ದರಿದ್ದಾರೆ ಅದರನ್ನು ಅಷ್ಟು ಸುಲಭವಾಗಿ ಲೆಕ್ಕಾ ಹಾಕಿದರು ಮನೆಗೆ ಹೋಗಬೆಕಾಗುತ್ತದೆ ಎಂದು ಹಾಲಿ ಶಾಸಕ ಟಿ.ರಘುಮೂರ್ತಿ ಹೇಳಿದರು
ಅವರು ನಗರದ ವಕೀಲರ ಭವನದಲ್ಲಿ ವಕೀಲರೊಟ್ಟಿಗೆ ಸಭೆ ನಡೆಸಿ ನಿಮ್ಮ ಬೆಂಬಲ ನಮಗೆ ನೀಡಬೇಕು ಎಂದು ಕೋರಿದರು.
ಇನ್ನೂ ಕಳೆದ 75 ವರ್ಷಗಳ ಇತಿಹಾಸ ಇರುವ ಕಾಂಗ್ರೇಸ್ ಪಕ್ಷಕ್ಕೆ ನಿಮ್ಮ ಬೆಂಬಲ ಅಗತ್ಯವಾಗಿ ಬೇಕು ಆದ್ದರಿಂದ ನೀವು ಅನ್ಯ ಪಕ್ಷದವರ ಶಾಸಕರು ಗಳು ಈ ಹಿಂದೆ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಎಂಬುದು ಎಲ್ಲಾರು ಮನಗಂಡಿದ್ದಾರೆ ಇದರಿಂದ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿ ಎಂದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣ ಕಣ ಭರ್ಜರಿಯಾಗಿ ರಂಗೇರಿದೆ
ಅದರಂತೆ ಕೈ ಅಭ್ಯರ್ಥಿ, ಹಾಲಿ ಶಾಸಕ ಟಿ.ರಘುಮೂರ್ತಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮಾಡುವ ಮೂಲಕ ಮೂರನೇ ಬಾರಿಗೆ ಗೆಲುವು ನಿಶ್ಚಿತ ಎಂಬ ಸಂದೇಶ ಮೂಲಕ ಮತದಾರರ ಒಲೈಕೆಯಲ್ಲಿ ನಿರತರಾಗಿದ್ದಾರೆ.
ಅದರಂತೆ ಇಂದು ಚಳ್ಳಕೆರೆ ಕ್ಷೇತ್ರದ ವಕೀಲರ ಭವನದಲ್ಲಿ ತಾಲೂಕಿನ ಎಲ್ಲಾ ವಕೀಲರನ್ನು ತಮ್ಮ ಪರವಾಗಿ ಬೆಂಬಲಿಸಬೇಕು ಎಂದು ಮತಯಾಚನೆ ನಡೆಸಿದರು.