ಚಳ್ಳಕೆರೆ : ಈಡೀ ಕ್ಷೇತ್ರದಲ್ಲಿ ಬದಲಾವಣೆ ಬಯಸಿ ಮತದಾರರ ನಮ್ಮ ಜೆಡಿಎಸ್ ಪಕ್ಷಕ್ಕೆ ಸಾಗರೋಪದಿಯಲ್ಲಿ ಸೇರ್ಪಡೆ ಯಾಗುತ್ತಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದರು.
ಅವರು ಕ್ಷೇತ್ರದ ಸಿದ್ದೆಶನ ದುರ್ಗ ಈಗೆ ಹಲವು ಗ್ರಾಮ ಗಳಿಗೆ ತೆರಳಿ ಮತಬೇಟೆ ನಡೆಸಿ ಮಾತನಾಡಿದರು
ರಾಜ್ಯದ 2023ರ ವಿಧಾನಸಭಾ ಚುನಾವಣೆ ಕಣ ಭರ್ಜರಿಯಾಗಿ ರಂಗೇರಿದೆ
ಅದರಂತೆ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುವ ಮೂಲಕ ಮತದಾರರ ಒಲೈಕೆಯಲ್ಲಿ ನಿರತರಾಗಿದ್ದಾರೆ.
ಇನ್ನೂ ರವೀಶ್ ಕುಮಾರ್ ಗ್ರಾಮಗಳಿಗೆ ತೆರಳುತ್ತಿದ್ದಂತೆ ಹೂವಿನ ಸುರಿಮಳೆ ಸುರಿಸುವ ಮೂಲಕ ಅದ್ದೂರಿ ಸ್ವಾಗತ ಕೋರುತ್ತಿದ್ದಾರೆ.
ಇನ್ನೂ ಯಾದವ ಸಮುದಾಯದ ಮಾಜಿ ಜಿಪಂ ಸದಸ್ಯ ರಂಗಣ್ಣ ಈಡೀ ಕ್ಷೇತ್ರದಲ್ಲಿ ಅಭ್ಯರ್ಥಿ ಎಂ.ರವೀಶ್ ಜೊತೆ ಮಿಂಚಿನ ಸಂಚಾರ ನಡೆಸಿ ಎದುರಾಳಿಗಳ ಎದೆಯಲ್ಲಿ ನಡುಕ ಉಂಟುಮಾಡಿದ್ದಾರೆ