ಚಿತ್ರದುರ್ಗ: ಪಿಲ್ಲಹಳ್ಳಿ ಗ್ರಾಮದ ಮಾದಿಗರ ಜನಾಂಗದ ಕಾಲೋನಿಯಲ್ಲಿ ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ರವರ ನೇತೃತ್ವದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಆರ್ ಅನಿಲ್ ಕುಮಾರ್ ಪರ ಚುನಾವಣಾ ಸಭೆ ನಡೆಯಿತು.
ಸಭೆಯಲ್ಲಿ ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ “ಇದು ಮಾದಿಗರ ಚುನಾವಣೆ, ಅಭ್ಯರ್ಥಿ ಅನಿಲ್ ಕುಮಾರ್ ರವರು ಗೆದ್ದರೆ ಮಾದಿಗರ ಜನಾಂಗ ಗೆದ್ದ ಹಾಗೆ.. ನಮ್ಮ ಪಕ್ಷ ಗೆದ್ದಲ್ಲಿ, ಮಾದಿಗರ ಜನಾಂಗಕ್ಕೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯವನ್ನು ನೀಡುವಲ್ಲಿ ನಾವು ಶ್ರಮ ವಹಿಸುತ್ತೇವೆ ಎಂದು ಹೇಳಿದರು.
ಸಭೆಯಲ್ಲಿ ಬಿಜೆಪಿ ಮುಖಂಡ ಅಕ್ಷಯ್ ರೈ ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.