ನಾಯಕನಹಟ್ಟಿ:: ಕಾಂಗ್ರೆಸ್ ಪಕ್ಷ ತನ್ನದೇ ವ್ಯಕ್ತಿತ್ವವನ್ನು ಹೊಂದಿದೆ ಎಂದು ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ.

ಅವರು ಶುಕ್ರವಾರ ತಿಮ್ಮಪ್ಪಯ್ಯನಹಳ್ಳಿ ಮಲ್ಲೂರಹಳ್ಳಿ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಹಳ್ಳಿಗಳಲ್ಲಿ ಭರ್ಜರಿ ಮತ ಬೇಟೆ ನಡೆಸಿ ಮಾತನಾಡಿದ್ದಾರೆ. ನನ್ನ ಮಾತು ಕಮ್ಮಿ ಕೆಲಸ ಜಾಸ್ತಿ ಅಭಿವೃದ್ಧಿಪಡಿಸುವುದೇ ನನ್ನ ಮೊದಲ ಗುರಿ ನಾನು ಮೊಳಕಾಲ್ಮೂರು ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕನಾದರು ಉತ್ತಮವಾಗಿ ಕೆಲಸ ಮಾಡಿದ್ದೇನೆ.
ಈ ಬಾರಿ ಮೊಳಕಾಲ್ಮುರು ಕ್ಷೇತ್ರದ ಜನತೆ ಆಶೀರ್ವಾದ ಮಾಡಿದರೆ ಈ ಭಾಗದ ಜಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ.

2023 ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಪ್ರತಿ ಮನೆಯ ಹೆಣ್ಣು ಮಗಳಿಗೆ 2000 ರೂಪಾಯಿಗಳು 200 ವಿನಿಟ್ಟು ವಿದ್ಯುತ್ತು. ಡಿಗ್ರಿ ಪದವೀಧರರಿಗೆ 3000 ರೂಪಾಯಿಗಳು ಡಿಪ್ಲೋಮೋ ಪದವೀಧರರಿಗೆ 1500 ರೂಪಾಯಿಗಳು ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿ ಕೊಡುವಂಥ ಕೆಲಸವನ್ನು ಕಾಂಗ್ರೆಸ್ ಪಕ್ಷ ಯೋಜನೆಯನ್ನು ಜಾರಿಗೆ ತಂದಿದೆ ಮೊಳಕಾಲ್ಮೂರು ಕ್ಷೇತ್ರದ ಜನದ ಋಣ ನನ್ನ ಮೇಲಿದೆ ನಿಮ್ಮ ಋಣ ತೀರಿಸಲು ಅವಕಾಶ ಕೊಡಿ ಎಂದು ಮತದಾರರಲ್ಲಿ ಮತಯಾಚನೆ ಮಾಡಿದರು.
ಇದೇ ವೇಳೆ ಕಾಂಗ್ರೆಸ್ ಮುಖಂಡ ಡಾ. ಬಿ ಯೋಗೇಶ್ ಬಾಬು ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎನ್ ವೈ ಗೋಪಾಲಕೃಷ್ಣರವರು ಮೊಣಕಾಲ್ಮೂರು ಕ್ಷೇತ್ರದಲ್ಲಿ ಶಾಸಕರಾಗುವುದು ಖಚಿತ ಅದರಿಂದ ಕಾಂಗ್ರೆಸ್ ಪಕ್ಷವು ಈಗಾಗಲೇ ಪ್ರತಿ ಮಹಿಳೆಗೂ ಉಚಿತವಾಗಿ ಬಸ್ ಪಾಸ್ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದೆ ಆದ್ದರಿಂದ ಎನ್ ವೈ ಗೋಪಾಲಕೃಷ್ಣ ರವರನ್ನು ಪ್ರಚಂಡ ಬಹುಮತಗಳಿಂದ ಗೆಲ್ಲಿಸಿ ಕ್ಷೇತ್ರವನ್ನ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಮತದಾರರು ಈ ಬಾರಿ ಅವಕಾಶ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಎನ್ ವೈ ಎಚ್ ಸುಜಯ್ ಡಾ. ಬಿ ಯೋಗೇಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ಬಾಲರಾಜ್, ವಕೀಲ ಅಶ್ವಥ್ ನಾಯಕ, ಎನ್ ಉಮಾಪತಿ, ಚೌಳಕೆರೆ ಸಿ ಬಿ ಮೋಹನ್ ಕುಮಾರ್, ಭೀಮನಕೆರೆ ರಮೇಶ್ ಬಾಬು, ಬಂಡೆ ಕಪಿಲೆ ಓಬಣ್ಣ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ, ಜಿ ಬಿ ಮುದಿಯಪ್ಪ, ಕುದಾಪುರ ಕೆ ಜಿ ಪ್ರಕಾಶ್, ವರವು ಕಾಟಯ್ಯ, ತಳಕು ಮತ್ತು ನಾಯಕನಹಟ್ಟಿ ಯುವ ಕಾಂಗ್ರೆಸ್ ಅಧ್ಯಕ್ಷ ಹರೀಶ್, ವರವು ಶಂಕರ್ ಮೂರ್ತಿ, ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಿ ಕಾಟಯ್ಯ, ಜೆಸಿಬಿ ಮಲ್ಲಿಕಾರ್ಜುನ್, ಮ್ಯಾಸರಹಟ್ಟಿ ಮಲ್ಲಿಕಾರ್ಜುನ್, ಗುಂತಕೋಲಮ್ಮನಹಳ್ಳಿ ಮಲ್ಲಿಕಾರ್ಜುನ್, ಎತ್ತಿನಹಟ್ಟಿ ಓಬಣ್ಣ, ತಿಪ್ಪೇಸ್ವಾಮಿ, ಇನ್ನು ಮುಂತಾದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಇದ್ದರು

About The Author

Namma Challakere Local News
error: Content is protected !!