ಚಳ್ಳಕೆರೆ : ಈಡೀ ರಾಜ್ಯದ ಜನತೆ 2023ರ ವಿಧಾನ ಸಭಾ ಚುನಾವಣೆಯ ಕಾತುರದಲ್ಲಿ ಇದ್ದರೆ
ವಿದ್ಯಾರ್ಥಿಗಳ ಮಾತ್ರ ನಮ್ಮ ಸಮಸ್ಯೆ ಪರಿಹರಿಸಿ ಎಂದು ಪ್ರತಿಭಟನೆಗಳು ಮನವಿಗಳು ನೀಡುವ ಮೂಲಕ ಸರಕಾರಿ ಕಛೇರಿಗಳತ್ತ ಅಂತ ದಾಪುಗಾಲು ಹಾಕುತ್ತಿದ್ದಾರೆ
ಹೌದು ನಿಜಕ್ಕೂ ಶೋಚನೀಯ ಹಾಳುವ ಸರಕಾರಗಳು ಮತಯಾಚನೆಯಲ್ಲಿ ತೊಡಗಿದರೆ ಅಧಿಕಾರಿಗಳು ಮಾತ್ರ ತಮಗಿಚ್ಚೆ ಹಾಗೇ ಅಧಿಕಾರ ನಡೆಸುತ್ತಿದ್ದಾರೆ ಎಂಬುದಕ್ಕೆ ಈ ವಿದ್ಯಾರ್ಥಿಗಳು ನಡೆಸುವ ಮೌನದ ಪ್ರತಿಭಟನೆಯೇ ಸಾಕ್ಷಿಯಾಗಿದೆ
ಚಳ್ಳಕೆರೆ ನಗರದ ದೇವರಾಜ್ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿಗಳು ಕಳೆದ ಮೂರು ತಿಂಗಳಿAದ ವಿದ್ಯಾರ್ಥಿ ನಿಲಯ ಪಾಲಕರ ಬೇಜಾವ್ದಾರಿ ತನದಿಂದ ಸರಿಯಾದ ಊಟವಿಲ್ಲದೆ ಪರದಾಡುವಂತಾಗಿದೆ.
ಇನ್ನೂ ವಿದ್ಯಾರ್ಥಿ ನಿಲಯದಲ್ಲಿ ಸರಿಯಾದ ಊಟದ ಮೆನುವಿನ ಪ್ರಕಾರ ಊಟ ನೀಡದೆ, ಸರಿಯಾದ ಕ್ಲಿನಿಗ್ ಇಲ್ಲದೆ ಉಡಾಫೆ ಉತ್ತರ ನೀಡುತ್ತಾರೆ ಇನ್ನೂ ಸರಿಯಾದ ರೀತಿಯಲ್ಲಿ ಊಟ ಕೊಡಿ ಎಂಬ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡುವ ಅಧಿಕಾರಿಗಳ ವಿರುದ್ದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಸಿಎಂ ಹಾಸ್ಟೆಲ್ ನಲ್ಲಿ 130 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ಹಾಸ್ಟೆಲ್ನಲ್ಲಿ ಸರಿಯಾದ ಊಟದ ವ್ಯವಸ್ಥೆಯಿಲ್ಲ. ಅವ್ಯವಸ್ಥೆ ಬಗ್ಗೆ ತಾಲೂಕು ಕಛೇರಿಗೆ ದಾವಿಸಿ ಮನವಿ ಸಲ್ಲಿದರು.
ಈ ವೇಳೆ ಹಾಸ್ಟೆಲ್ ವಿದ್ಯಾರ್ಥಿಗಳಾದ ಪುನೀತ್, ವಿರೇಂದ್ರ, ನವೀನ್, ಹರೀಶ್, ತರುಣಕುಮಾರ್, ಲಿಖಿತ, ಸೇರಿದಂತೆ ಮುಂತಾದವರು ಇತರರಿದ್ದರು.