ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕ್ಷೇತ್ರದಲ್ಲಿ ೨೦೨೩ರ ವಿಧಾನಸಭಾ ಚುನಾವಣೆಯ ಎಲೆಕ್ಷನ್ ವಾರ್ ಭರ್ಜರಿಯಾಗಿ ನಡೆಯುತ್ತಿದೆ
ಅದರಂತೆ ಕಳೆದ ಎರಡು ಬಾರಿ ಕ್ಷೇತ್ರದಲ್ಲಿ ಅಧಿಕಾರದ ಗದ್ದುಗೆ ಎರಿದ ಹಾಲಿ ಶಾಸಕ ಟಿ.ರಘುಮೂರ್ತಿ ರವರು ಈಗಾಗಲೇ ಕ್ಷೇತ್ರದಲ್ಲಿ ಬೀಡು ಬಿಟ್ಟು ೨೦೨೩ಕ್ಕೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿಗಾಗಿ ಭರ್ಜರಿಯಾಗಿ ಮತಬೇಟೆ ನಡೆಸುತ್ತಿದ್ದಾರೆ
ಅದರಂತೆ ಇಂದು ಡಿ.ಉಪ್ಪಾರಹಟ್ಟಿ, ಕೆಂಚವೀರನಹಳ್ಳಿ, ದೊಡ್ಡೆರಿ, ಭರಮಸಾಗರ, ಬುಡ್ನಹಟ್ಟಿ ಈಗೇ ಹಲವು ಗ್ರಾಮಗಳಿಲ್ಲಿ ಮತಬೇಟೆ ನಡೆಸಿದರು.
ಇನ್ನೂ ರಘುಮೂರ್ತಿ ಹೊದಕಡೆಗಳಲ್ಲ ಗ್ರಾಮದಲ್ಲಿ ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಕೋರಿದರೆ ಇನ್ನೂ ಮಹಿಳೆಯರು ಆರತಿ ಬೆಳಗುವ ಮೂಲಕ ಆಹ್ವಾನ ನೀಡಿದ್ದಾರೆ,
ಹೂವು ಮಾಲೆಹಾಕಿ ಹೂವಿನ ಮಳೆ ಸುರಿಸುವ ಮೂಲಕ ಕಾರ್ಯಕರ್ತರು ಹಾಲಿ ಶಾಸಕನಿಗೆ ಸಾಥ್ ನೀಡಿದ್ದಾರೆ
ಇನ್ನೂ ಮತಬೇಟೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಕಳೆದ ಹತ್ತು ವರ್ಷಗಳ ಕ್ಷೇತ್ರದ ಅಭಿವೃದ್ಧಿಗೆ ಮತದಾರರು ಋಣ ತೀರಿಸಲು ಮತ್ತೊಮ್ಮೆ ಬಂದಿದ್ದೆನೆ, ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಅಪಾರ ಕಾರ್ಯಕರ್ತರ ಮುಖಂಡರು ಬೆಂಬಲ ನೀಡುತ್ತಿದ್ದಾರೆ, ಅದರಂತೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ನೀಡು ವ ಭರಸವೆಯಂತೆ ಸರಕಾರ ಅಧಿಕಾರಕ್ಕೆ ಬಂದ ತಕ್ಷಣದ ಕುಟುಂಬದ ಯಜಮಾನಿಗೆ ಹೆಸರಿಗೆ ೨ ಸಾವಿರ ರೂ ಖಾತೆಗೆ ಜಮೆ, ೨೦೦ ಯುನಿಟ್ ವಿದ್ಯುತ್ ಉಚಿತ ಸೇರಿದಂತೆ ಭರಸವೆಯ ಗ್ಯಾರೆಂಟ್ ಕಾರ್ಡ್ಗಳನ್ನು ಈಗಾಗಲೆ ಮನೆಗಳಿಗೆ ತಲುಪಿಸಲಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದ್ದರೂ ಸಹ ಇನ್ನು ಸಾಕಷ್ಟು ಅಭಿವೃದ್ಧಿ ಮಾಡುವ ಕನಸು ಇದೆ ಮೂರನೇ ಬಾರಿಗೆ ಗೆದ್ದು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು.
ಶಿಕ್ಷಣ, ಸಾರಿಗೆ, ರಸ್ತೆ, ಆರೋಗ್ಯ. ನಿರುದ್ಯೋಗ, ಸೇರಿದಂತೆ ವಿವಿಧ ಜನಪರ ಯೋಜನೆಗಳಿಗೆ ಮೊದಲ ಆಧ್ಯತೆ ನೀಡುವ ಮೂಲಕ ಎಲ್ಲಾ ವರ್ತದ ತಳ ಸಮುದಾಯ, ಕಟ್ಟಕಡೆ ಅರ್ಹ ಕುಟುಂಬಗಳಿಗೆ ಸರಕಾರಿ ಸೌಲಭ್ಯಗಳಿಂದ ತಲುಪಿಸುವ ಮೂಲಕ ಜನಸೇವೆ ಮಾಡಲಾಗುವುದು ಆದ್ದರಿಂದ ಜನರ ತಿರ್ಮಾನ ಮೇ೧೦ರಂದು ಮತನೀಡುವ ಮೂಲಕ ಬೆಂಬಲ ಕೋರಿದರು.

ಈ ಸಂದರ್ಭದಲ್ಲಿ ಎಐಸಿಸಿ ವೀಕ್ಷಕರದ ಸಂಜಯ್‌ದತ್, ಮಾಜಿ ಸಂಸದರು ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಂ ಚಂದ್ರಪ್ಪ, ಅಸಂಘಟಿತ ಕಾರ್ಮಿಕ ಘಟಕದ ರಾಜ್ಯ ಅಧ್ಯಕ್ಷರಾದ ಜಿಎಸ್ ಮಂಜುನಾಥ್, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರವಿಕುಮಾರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿಪಿ ಪ್ರಕಾಶ್ ಮೂರ್ತಿ, ಜಿಲ್ಲಾ ಕಿಸಾನ್ ಸೆಲ್ ಅಧ್ಯಕ್ಷರಾದ ನಾಗರಾಜ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷರಾದ ಶಿವಕುಮಾರ್‌ಸ್ವಾಮಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಎಚ್.ಆಂಜನೇಯ, ಪ್ರಚಾರ ಸಮಿತಿ ಉಪಾಧ್ಯಕ್ಷರಾದ ಮಂಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್, ಮತ್ತು ಚೌಳೂರ್ ಪ್ರಕಾಶ್, ನಗರಸಭಾ ಅಧ್ಯಕ್ಷರಾದ ಸುಮಕ್ಕ ಅಂಜಿನಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ, ನಗರಸಭಾ ಸದಸ್ಯರಾದ ವಿರೂಪಾಕ್ಷ ರಮೇಶಗೌಡ, ತಾಲೂಕ್ ಪಂಚಾಯತಿ ಮಾಜಿ ಸದಸ್ಯರಾದ ಗಿರಿಯಾಜ್ಜ, ಚೇತನ್ ಕುಮಾರ್ ಕುಮ್ಮಿ, ನಯಾಜ್, ಕಾಂಗ್ರೆಸ್ ಪಕ್ಷದ ಮಂಚೂಣಿ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!