ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಿಂದ ಐಕ್ಯೂಎಸಿ, ಎನ್.ಎಸ್.ಎಸ್. ಘಟಕ -01 ಮತ್ತು 02 ಹಾಗೂ ರಾಜ್ಯಶಾಸ್ತç ವಿಭಾಗದ ವತಿಯಿಂದ ದಿನಾಂಕ:20.04.2023 ರಂದು ವಿದ್ಯಾರ್ಥಿಗಳು ಮತದಾನ ಜಾಗೃತಿ ಅಭಿಯಾನ ಜಾಥಾದಲ್ಲಿ ಪಾಲ್ಗೊಂಡಿದ್ದರು. ಆರಂಭದಲ್ಲಿ ಉಪ ವಿಭಾಗಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳೂ ಆದ ಆರ್. ಚಂದ್ರಯ್ಯನವರು ಮತದಾನ ಜಾಗೃತಿ ಅಭಿಯಾನ ಜಾಥಾಕ್ಕೆ ಚಾಲನೆ ನೀಡಿದರು.
ಕಾಲೇಜಿನಿಂದ ಆರಂಭವಾದ ಜಾಥಾದಲ್ಲಿ ವಿದ್ಯಾರ್ಥಿಗಳು ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ಮತದಾನ ನಮ್ಮ ಹಕ್ಕು ಎಲ್ಲರೂ ತಪ್ಪದೇ ಮತದಾನ ಮಾಡಿ, ಪ್ರಾಮಾಣಿಕವಾಗಿ ಮತ ಚಲಾಯಿಸಿ, ಪ್ರಜಾಪ್ರಭುತ್ವ ಉಳಿಸಿ, ಯಾವುದೇ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಿ, ಸದೃಢ ಪ್ರಜಾಪ್ರಭುತ್ವಕ್ಕಾಗಿ ಮತ ಚಲಾಯಿಸಿ, ಚುನಾವಣೆಯಲ್ಲಿ ಎಲ್ಲರೂ ಮತ ಚಲಾಯಿಸಿ ಪ್ರಜಾಪ್ರಭುತ್ವ ಉಳಿಸಿ, ನಮ್ಮ ಮತವನ್ನು ಮಾರಿಕೊಳ್ಳದೆ ಪ್ರಾಮಾಣಿಕವಾಗಿ ಮತ ಚಲಾಯಿಸೋಣ, ಪ್ರಾಮಾಣಿಕವಾಗಿ ಮತ ಚಲಾಯಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಪ್ರಾಮಾಣಿಕವಾಗಿ ಮತದಾನ ಮಾಡೋಣ ಪ್ರಜಾಪ್ರಭುತ್ವ ಉಳಿಸೋಣ ಹೀಗೆ ಅನೇಕ ಘೋಷಣೆಗಳನ್ನು ಕೂಗುತ್ತಾ ನಗರದ ಧರ್ಮಶಾಲಾ ರಸ್ತೆ, ದೊಡ್ಡಪೇಟೆ, ಬಾಲಕಿಯರ ಪದವಿ ಪೂರ್ವ ಕಾಲೇಜು ಮುಂಭಾಗ, ನಗರಸಭೆ ಹಾಗೂ ಬಿ.ಡಿ. ರಸ್ತೆ ಮೂಲಕ ಕಾಲೇಜಿಗೆ ಮರಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲ್. ಈಶ್ವರಪ್ಪ, ಐಕ್ಯೂಎಸಿ ಸಂಚಾಲಕರಾದ ಎನ್. ಚಲುವರಾಜು, ಎನ್.ಎಸ್.ಎಸ್. ಅಧಿಕಾರಿಗಳಾದ ಜಿ.ಎಸ್.ನಾಗರಾಜ, ರಾಜ್ಯಶಾಸ್ತç ವಿಭಾಗದ ಉಪನ್ಯಾಸಕರಾದ ಎಂ. ರಮೇಶ್, ಪಿ. ವಿಜಯಕುಮಾರ್, ಡಾ. ಸಿ. ಸುಧಾರಾಣಿ, ಪರಮೇಶ್ವರಪ್ಪ, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಶಾಂತ್, ಅಧೀಕ್ಷಕರಾದ ಟಿ. ರಾಮಾಬೋವಿ, ಶಿವಕುಮಾರ್, ಗಿರೀಶ್ ಇತರರು ಜಾಥಾದಲ್ಲಿ ಭಾಗವಹಿಸಿದ್ದರು.