ಚಳ್ಳಕೆರೆ : ಚುನಾವಣೆ ಸಮಯದಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಲು ಚುನಾವಣೆ ಆಯೋಗ ರಾಜ್ಯಾಧ್ಯಾಂತ ಕಟ್ಟುನಿಟ್ಟಿನ ಕ್ರಮ ವಹಿಸಿದರು ಇದನ್ನು ಲೆಕ್ಕಿಸದೆ ಅಕ್ರಮ ಮಧ್ಯ ಸಾಗಟ ಮಾಡುವ ದಂಧೆ ಕೋರರು ಸಿಕ್ಕಿಹಾಕಿಕೊಂಡಿರುವ ಘಟನೆ ಚಳ್ಳಕೆರೆ ತಾಲೂಕಿನ ದೊಡ್ಡ ಬಾದಿಹಳ್ಳಿ ಸಮೀಪದ ಚೆಕ್ ಪೋಸ್ಟ್ ಬಳಿ ಪೊಲೀಸ್ ಅತಿಥಿ ಯಾಗಿದ್ದಾರೆ.
ಹೌದು ಚುನಾವಣೆಗೆ ಮಧ್ಯೆ ಶೇಖರಿಸಲು ಸರಬರಾಜು ಮಾಡುವ ಅಕ್ರಮಮಧ್ಯೆ ಇಂದು ಅಬಕಾರಿ ಪೊಲೀಸ್ ರ ವಶದಲ್ಲಿದೆ.
ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ಜಿಲ್ಲೆ ಚಿತ್ರದುರ್ಗ ರವರ ಮಾರ್ಗದರ್ಶನದಲ್ಲಿ ಚಳ್ಳಕೆರೆ ವಲಯದ ಅಬಕಾರಿ ನಿರೀಕ್ಷಕರು ಮತ್ತು ಅಬಕಾರಿ ಉಪ ನಿರೀಕ್ಷಕರು 1 & 2 ಹಾಗು ಸಿಬ್ಬಂದಿಯವರೊಂದಿಗೆ 2023ನೇ ಸಾಲಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಆಂಧ್ರದ ಗಡಿ ಭಾಗದಲ್ಲಿರುವ ದೊಡ್ಡಬಾದಿಹಳ್ಳಿ ಚೆಕ್ ಪೋಸ್ಟ್ ನಲ್ಲಿ ರಸ್ತೆ ಕಾವಲು ವಾಹನ ತಪಾಸಣೆ ಮಾಡುತ್ತಿರುವ ಸಮಯದಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯ ಮಾರಾಟ & ಸಂಗ್ರಹ ಮಾಡುವ ಉದ್ದೇಶದಿಂದ ಮದ್ಯ ಸಾಗಾಣಿಕೆ ಮಾಡುತ್ತಿದ್ದು ಕಂಡು ಬಂದಿದ್ದರಿಂದ ಚಳ್ಳಕೆರೆ ವಲಯ ವ್ಯಾಪ್ತಿಯಲ್ಲಿ ಒಟ್ಟು ಮೂರು ಘೋರ ಪ್ರಕರಣಗಳನ್ನು ದಾಖಲಿಸಿ ಮೂರು ದ್ವಿಚಕ್ರ ವಾಹನಗಳು ಮತ್ತು 33.570 ಲೀಟರ್ ಮದ್ಯವನ್ನು ಜಫ್ತುಮಾಡಲಾಯಿತು
ಇವುಗಳ ಅಂದಾಜು ಮೌಲ್ಯ 1,95,418 ರೂಗಳಾಗಿರುತ್ತವೆ ಸದರಿ ಕಾರ್ಯಾಚರಣೆಯಲ್ಲಿ ಸಿ ನಾಗರಾಜು ಅಬಕಾರಿ ನಿರೀಕ್ಷಕರ ನೇತೃತ್ವದಲ್ಲಿ. ಅಬಕಾರಿ ಉಪ ನಿರೀಕ್ಷಕರುಗಳಾದ.ಟಿ ರಂಗಸ್ವಾಮಿ,ಡಿ.ಟಿ ತಿಪ್ಪಯ್ಯ ಹಾಗು ಸಿಬ್ಬಂದಿಗಳಾದ ಅಬಕಾರಿ ಪೇದೆ ಶಾಂತಣ್ಣ, ನಾಗರಾಜ್ , ಸೋಮಶೇಖರ. ವಾಹನ ಚಾಲಕ ನಾಗರಾಜ ತೊಳಮಟ್ಟಿ ಇದ್ದರು.