ಚಳ್ಳಕೆರೆ : ಬಿಜೆಪಿ ಡಬಲ್ ಇಂಜಿನ್ ಸರಕಾರ ಇದ್ದರೂ ಕಾಂಗ್ರೇಸ್ ಶಾಸಕರ ಕ್ಷೇತ್ರಕ್ಕೆ ಅನುದಾನ ನೀಡದೆ ವಂಚಿಸಿದ್ದಾರೆ ಇನ್ನೂ ನಮ್ಮ ಕಾಂಗ್ರೇಸ್ ಸರಕಾರದ ಆಡಳಿತದಲ್ಲಿ ಇದ್ದ ಸಂಧರ್ಭದಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ದಿ ಮಾಡಿದ್ದೆನೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಇಂದಿರಾ ನಗರದ ವಾರ್ಡ್ ನಂ.20 ಮತ್ತು ವಾರ್ಡ್ ನಂ.23ರಲ್ಲಿ ಚುನಾವಣಾ ಪ್ರಚಾರ ನಡೆಸಿ, ಚಳ್ಳಕೆರೆ ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ನಿಮ್ಮ ಋಣ ತಿರಿಸಲು ಮತ್ತೊಂದು ಬಾರಿ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಿ ನನ್ನ ಗೆಲುವಿಗೆ ಸಹಕಾರಿಸಿ ಎಂದು ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಟಿ.ರಘುಮೂರ್ತಿ ಎಡಬಿಡದೆ ಮತದಾರರ ಒಲೈಕೆಯಲ್ಲಿ ತಲ್ಲಿನರಾಗಿದ್ದಾರೆ.
ಇನ್ನೂ ಶಾಸಕರಿಗೆ ಸಾಥ್ ನೀಡುವ ನಗರಸಭೆ ಸದಸ್ಯರು ಹಾಗೂ ಜಿಪಂ. ಮಾಜಿ ಸದಸ್ಯರು ಹಾಗೂ ಕಾರ್ಯಕರ್ತರು ಮುಖಂಡರು ಇಡೀ ದಿನವೆಲ್ಲಾ ಶಾಸಕರ ಜೊತೆಯಲ್ಲಿ ಮತಯಾಚನೆ ಮಾಡುವುದು ಎಲ್ಲೆಡೆ ಕಂಡು ಬರುತ್ತಿದೆ.
ಇನ್ನೂ ವಾರ್ಡ್ನ ಅಭಿಮಾನಿಗಳು ಶಾಸಕ ಟಿ.ರಘುಮೂರ್ತಿಗೆ ಹೂವು ಮಾಲೆ ಹಾಕಿ ಅದ್ದೂರಿಯಾಗಿ ಸ್ವಾಗತ ನೀಡಿ ಅಭೂತಪೂರ್ವ ಜನ ಬೆಂಬಲ ವ್ಯಕ್ತಪಡಿಸಿದರು.
ಈದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಚುನಾಯಿತ ಪ್ರತಿನಿಧಿಗಳು, ಮುಂಚೂಣಿ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾರ್ಯಕರ್ತರು, ಮಹಿಳಾ ಘಟಕದ ಪದಾಧಿಕಾರಿಗಳು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ ರಘುಮೂರ್ತಿ ರವರಿಗೆ ಮತ ನೀಡುವಂತೆ ಮನವಿ ಮಾಡಿದರು.

About The Author

Namma Challakere Local News
error: Content is protected !!