ಚಳ್ಳಕೆರೆ : ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಇಂದು ಪಕ್ಷೇತರ ಅಭ್ಯರ್ಥಿಯಾಗಿ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಕೆ.ಟಿ.ಕುಮಾರಸ್ವಾಮಿ ಇಂದು ಸರಳವಾಗಿ ಅಂಬೇಡ್ಕರ್ ಜಯಂತಿಗೆ ಶುಭಾಷಯ ಕೋರಿದ್ದಾರೆ.
ಅದರಂತೆ ಅವರು ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ನೂತನ ಕಛೇರಿಯಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಅಂಬೇಡ್ಕರ್ ವೃತ್ತದಲ್ಲಿ ತನ್ನ ಸಹಾಸ್ರ ಬೆಂಬಲಿಗರೊAದಿಗೆ ಮೆರವಣಿಗೆಯ ಮೂಲಕ ಬಂದು ಅಂಬೇಡ್ಕರ್ ಪುತ್ಥಳಿಗೆ ಹೂವು ಮಾಲೆ ಹಾಕಿ ಸರಳವಾಗಿ ಶುಭಾಷಯ ಕೋರಿದರು.
ಇನ್ನೂ ತಮ್ಮ ಕಛೇರಿಯಲ್ಲಿ ಮಾತನಾಡಿದ ಅವರು, ಹಲವು ನೋವುಗಳನುಂಡು, ರಾಜಾಕೀಯವಾಗಿ, ಶೈಕ್ಷಣಿಕವಾಗಿ ಪ್ರಬುಧ್ದನಾಗಿ ಈಡೀ ದೇಶವೇ ಒಪ್ಪುವಂತ ಸಂವಿಧಾನ ರಚಿಸಿ ಇಂದು ನಮ್ಮ ಹೆಗಲಿಗೆ ಹಾಕಿ ಹೊಗಿದ್ದಾರೆ ಇದನ್ನು ಮುನ್ನಡೆಸಿಕೊಂಡು ಹೊಗುವ ಹೊಣೆಗಾರಿಕೆ ನಮ್ಮದಾಗಿದೆ, ಜಾತಿಯಲ್ಲಿ ಹುಟ್ಟಿದ ವ್ಯಕ್ತಿ ತಮ್ಮದೇ ಆದ ವೃತ್ತಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಇದೇ ಸಂಧರ್ಭದಲ್ಲಿ ಬಂಡೆರAಗಪ್ಪ, ಶಿವಪುತ್ರಪ್ಪ, ದೇವರಾಜ್, ಅರುಣ್ ನಾಯಕ, ಯಕುಬ್ ಆಲಿ, ವಿಜಯೇಂದ್ರ ಅಣ್ಣ.. ಬಂಡೆ ರಂಗಪ್ಪ.ಯಾಕುಬ್ ಆಲಿ, ಉಮೇಶ ಬ್ಯಾನರ್ಜಿ, ಪಾಪಣ್ಣಲಾಯ್ಯರ್, ಗೊಂಚಿಕಾರ್‌ಪಾಪಣ್ಣ, ಅರುಣ್‌ನಾಯಕ ಪ್ರಶಾಂತ್ ಪಚ್ಚಿ, ತಿಪ್ಪೇಸ್ವಾಮಿ, ಶಶಿದರ್, ಜಗದೀಶ್, ಆಚಾರ್ಯ, ಗಾಡಿತಿಪ್ಪೇಸ್ವಾಮಿ, ಮಂಜಣ್ಣ, ಮಾಡನಾಯನಹಳ್ಳಿ ದೇವರಾಜ್., ಹೊಸಬೇಡರ ಹಟ್ಟಿ ತಿಪ್ಪೇಸ್ವಾಮಿ, ಹಾಗೂ ಪ್ರಮುಖ ಮುಖಂಡರು ಇದ್ದರು….