ಚಳ್ಳಕೆರೆ : ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ರವರ 116ನೇ ಜಯಂತಿಯನ್ನು ಜನಪ್ರತಿನಿಧಿಗಳು ಅಧಿಕಾರಿಗಳೊಟ್ಟಿಗೆ ಸೇರದೆ ಸರಳವಾಗಿ ಬಾಬು ಜಗಜೀವನ್ ರಾಮ್ ರವರ ಪ್ರತಿಮೆಗೆ ಹೂವು ಮಾಲೆ ಹಾಕಿ ಶುಭಾಷಯ ಕೋರಿದರು.
ಇನ್ನೂ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿ ಇರುವ ಕಾರಣ ಹಸಿರು ಕ್ರಾಂತಿಯ ಹರಿಕಾರನಿಗೆ ಕ್ಷೇತ್ರದ ಜನಪ್ರತಿನಿಧಿಗಳು ಹೂವು ಮಾಲೆ ಹಾಕಿ ಸರಳವಾಗಿ ಜಯಂತಿಯ ಶುಭಾಷಯಗಳನ್ನು ತಿಳಿಸಿದರು.
ಇನ್ನೂ ಸ್ಥಳೀಯ ಶಾಸಕ ಟಿ.ರಘುಮೂರ್ತಿ, ಹಾಗೂ ಕಾಂಗ್ರೇಸ್ ಮುಖಂಡರು ಕಾರ್ಯಕರ್ತರು, ಅತೀ ಕಡಿಮೆ ಜನ ಸಂಖ್ಯೆಯಲ್ಲಿ ಹೂವು ಮಾಲೆ ಹಾಕಿದರು
ಅದೇ ರೀತಿಯಲ್ಲಿ ಪಕ್ಷೇತರ ಅಭ್ಯರ್ಥಿಯಾದ ಕೆ.ಟಿ.ಕುಮಾರಸ್ವಾಮಿ ರವರು ಹಾಗೂ ಕೆಲವು ಮುಖಂಡರು ಬಾಬು ಜಗಜೀವನ್ ರಾಮ್ ವೃತ್ತದಲ್ಲಿ ಪುತ್ಥಳಿಗೆ ಹೂವು ಮಾಲೆ ಅರ್ಪರ್ಸಿದರು.
ನಂತರ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮುಖಂಡರು ಒಬ್ಬರಾದ ಮೇಲೆ ಒಬ್ಬರಂತೆ ಸ್ಥಳದಲ್ಲಿ ಯಾರು ಕೂಡ ಇರದೆ ಹೂವು ಮಾಲೆ ಅರ್ಪಿಸಿ ಶುಭಾಷಯ ಕೋರಿದ್ದಾರೆ.