ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದಲ್ಲಿ ಬುಧವಾರ ನಡೆದ ಮೂವತ್ಮೂರನೆ ವರ್ಷದ ನಾಲ್ಕನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸರಳವಾಗಿ ಜರುಗಿತು ಇಂದು ಕಾರ್ಯಕ್ರಮದಲ್ಲಿ ಒಟ್ಟು 4 ಜೋಡಿಗಳ ವಿವಾಹ ನೆರವೇರಿತು.
ಇನ್ನೂ ಇದರ ಸಾನ್ನಿಧ್ಯ ಶ್ರೀ ಬಸವಪ್ರಭು ಸ್ವಾಮಿಗಳು ವಹಿಸಿಕೊಂಡು ಮಾತನಾಡಿದ ಶ್ರೀಗಳು, ಶ್ರೀಮಂತರು ಕೋಟಿಗಟ್ಟಲೆ ಹಣ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡುತ್ತಾರೆ. ಆದರೂ ಕೆಲವೊಮ್ಮೆ ಇಂಥ ಮದುವೆಗಳು ಬಾಡಿ ಹೋಗುತ್ತವೆ. ಕಾರಣ ಸಂಪತ್ತು ಇರುವ ಕಡೆ ಪ್ರೇಮ ಇರುವುದಿಲ್ಲ. ಯುವಜನತೆ ಮಧ್ಯೆ ಒಂದಿಷ್ಟು ಪ್ರೀತಿ-ವಿಶ್ವಾಸದ ಕೊರತೆ ಇದೆ. ಅದನ್ನು ಯುವಕರು ಅರ್ಥ ಮಾಡಿಕೊಂಡು ಸಾಗಬೇಕು. ಮನೆಯಲ್ಲಿ ಗಂಡ-ಹೆAಡಿರ ಮಧ್ಯೆ ಹೊಂದಾಣಿಕೆ ಮುಖ್ಯವಾಗುತ್ತದೆ. ಇಬ್ಬರ ಮಧ್ಯೆ ಅನುಮಾನಕ್ಕೆ ಆಸ್ಪದವಾಗಬಾರದು. ಪರಸ್ಪರ ನಂಬಿಕೆಯಿAದ ಬದುಕಬೇಕೆಂದು ನುಡಿದರು.
ಕಾರ್ಯಕ್ರಮ ಸಮ್ಮುಖ ವಹಿಸಿದ್ದ ಜೇವರ್ಗಿ ತಾ. ಕುಕನೂರಿನ ಶ್ರೀ ಪ್ರಭುಲಿಂಗ ದೇವರು, ಚಿಕ್ಕುಂತಿಯ ಶ್ರೀ ಬೋರೇಶ ಗುರೂಜಿ ಆಶ್ರಮದ ಶ್ರೀ ಶಿವಮೂರ್ತಿ ಸ್ವಾಮಿಗಳು, ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಬಸವ ಮುರುಘೇಂದ್ರ ಸ್ವಾಮಿಗಳು ಭಾಗವಹಿಸಿದ್ದರು.
ತೋಟಪ್ಪ ಉತ್ತಂಗಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಬಸವಲಿಂಗದೇವರು ಸ್ವಾಗತಿಸಿದರು. ಪ್ರಕಾಶ ದೇವರು ನಿರೂಪಿಸಿದರು.

ಮಾತನಾಡಿ, ಅಂಗಪ್ರವೇಶ, ರಂಗಪ್ರವೇಶ, ಸಂಗಪ್ರವೇಶ ಮತ್ತು ಲಿಂಗಪ್ರವೇಶ ಇವು ಮನುಷ್ಯನ ಬದುಕಿನ ಅಂಗಗಳು. ಮುರುಘಾ ಪರಂಪರೆ ಬಹಳ ದೊಡ್ಡದು ಎಂದು ಹೇಳಿದರು.
ಚಿಕ್ಕುಂತಿಯ ಶ್ರೀ ಬೋರೇಶ ಗುರೂಜಿ ಆಶ್ರಮದ ಶ್ರೀ ಶಿವಮೂರ್ತಿ ಸ್ವಾಮಿಗಳು ಮಾತನಾಡಿ, ಶ್ರೀಮಠದಲ್ಲಿ ಅನ್ನದಾಸೋಹ, ಜ್ಞಾನದಾಸೋಹ ನಿರಂತರವಾಗಿ ನಡೆಯುತ್ತಿದೆ. ಇಲ್ಲಿ ಉಚಿತವಾಗಿ ಕಲ್ಯಾಣ ಮಹೋತ್ಸವ ಕಳೆದ ಮೂವತ್ಮೂರು ವರ್ಷಗಳಿಂದ ಪ್ರತಿ ತಿಂಗಳು ನಡೆಯುತ್ತಿದೆ. ವಿವಾಹದ ನಂತರ ಸಹಬಾಳ್ವೆ ಬಹಳ ಮುಖ್ಯ. ಸಂಸಾರದಲ್ಲಿ ಏನೇ ಕಷ್ಟ ಬಂದರು ಹೊಂದಾಣಿಕೆಯಿAದ ಜೀವನ ಸಾಗಿಸಬೇಕೆಂದು ಹೇಳಿದರು.
ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಬಸವ ಮುರುಘೇಂದ್ರ ಸ್ವಾಮಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ 4 ಜೋಡಿಗಳ ವಿವಾಹ ನೆರವೇರಿತು.
ತೋಟಪ್ಪ ಉತ್ತಂಗಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಬಸವಲಿಂಗದೇವರು ಸ್ವಾಗತಿಸಿದರು. ಪ್ರಕಾಶ ದೇವರು ನಿರೂಪಿಸಿದರು.

About The Author

Namma Challakere Local News
error: Content is protected !!