ಚಿತ್ರದುರ್ಗದ : ಎಸ್.ಜೆ.ಎಂ. ಕಲಾ & ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ “ಅಂತರಾಷ್ಟಿçÃಯ ಮಹಿಳಾ ದಿನಾಚರಣೆ” ಕಾರ್ಯಕ್ರಮವನ್ನು ಆಚರಿಸಿದರು
ಇದರ ಅಧ್ಯಕ್ಷತೆಯನ್ನು ಡಾ.ಎಲ್.ಈಶ್ವರಪ್ಪನವರು ವಹಿಸಿಕೊಂಡು ಮಹಿಳೆ ಸದೃಢಳಾದರೆ ದೇಶವು ಸದೃಢವಾಗುತ್ತದೆ. ದೃಢ ನಿರ್ಧಾರಗಳನ್ನು ತೆಗೆದುಕೊಂಡಾಗ ಅಭಿವೃದ್ಧಿ ಸಾಧ್ಯ, ಅಬಲೆಯರಾದ ಮಹಿಳೆಯರನ್ನು ಸಬಲರನ್ನಾಗಿ ಮಾಡಬೇಕಾದರೆ ಶಿಕ್ಷಣವು ಅಗತ್ಯ ಎಂದು ತಿಳಿಸಿದರು.
ಮಹಿಳೆಯು ಅಭಿವೃದ್ಧಿಯಾಗಲು ಮಹಿಳೆಗೆ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಅವಕಾಶಗಳನ್ನು ನೀಡಬೇಕು. ಮ+ಇಳೆ ಎಂದರೆ ‘ಮ’ ಎಂದರೆ ಮಾತೆ, ‘ಇಳೆ’ ಎಂದರೆ ಭೂಮಿ, ಹಾಗಾಗಿ ಮಹಿಳೆಯನ್ನು ಭೂಮಿ ತಾಯಿಗೆ ಹೋಲಿಸಲಾಗಿದೆ. ಮಹಿಳೆಗೆ ಅವಕಾಶ ನೀಡಿದರೆ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಮಹಾದೇವಿ ಎಂ. ಮರಕಟ್ಟಿಯವರು ಮಾತನಾಡಿ ಮಹಿಳಾ ದಿನಾಚರಣೆ ಕೇವಲ ಮಾರ್ಚ್ 08 ಕ್ಕೆ ಮಾತ್ರ ಸೀಮಿತವಾಗದೇ ವರ್ಷ ಪೂರ್ತಿ ಆಚರಣೆ ಮಾಡಿದರೆ ಮಾತ್ರ ಅದಕ್ಕೆ ಪೂರ್ಣ ಅರ್ಥ ಸಿಗುತ್ತದೆ. ನಿರ್ಭಯ ನಿಧಿ ಫೋಕ್ಸೋ ಕಾಯಿದೆ ಮುಂತಾದ ವಿಷಯಗಳ ಬಗ್ಗೆ ಅರ್ಥಪೂರ್ಣ ಮಾಹಿತಿಯನ್ನು ತಿಳಿಸಿದರು.
ಮಹಿಳಾ ಸಬಲೀಕರಣದ ಸಂಚಾಲಕರಾದ ಶ್ರೀಮತಿ ಶ್ವೇತ ಬಿ.ವೈ. ಇವರು ಮಹಿಳೆಯು “ನೋವನುಂಗಿ ನಗುವ ಚೆಲ್ಲುವ ಆಕೆಗೊಂದು ನಮನ” ವಿಷಯವನ್ನು ಕುರಿತು ಅರ್ಥಪೂರ್ಣವಾಗಿ ಮಾತನಾಡಿದರು.
ರಮ್ಯ ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಸ್ವಾಗತಿಸಿದರು. ಉಷಾ ಎಸ್. ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ನಿರೂಪಣೆ. ತೇಜಸ್ವಿನಿ ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಅತಿಥಿಗಳ ಕಿರು ಪರಿಚಯ, ಕವನ ಪ್ರಥಮ ಬಿ.ಎ. ವಂದನಾರ್ಪಣೆ.
ಈ ಕಾರ್ಯಕ್ರಮದಲ್ಲಿ ಟಿ.ಎಸ್. ಗಿರೀಶ್, ಎಂ. ರಮೇಶ್, ಹೆಚ್. ಶಿವಕುಮಾರ್, ವಸಂತಕುಮಾರಿ, ನಂದಿನಿ, ಮಧು, ಎನ್. ಲೋಕೇಶ್, ಗುರು ರಾಘವೇಂದ್ರ ಹಾಗೂ ಬೋಧಕ, ಬೋಧಕೇತರ ವರ್ಗದವರು ಭಾಗವಹಿಸಿದ್ದರು.