ಚಳ್ಳಕೆರೆ : ಇಂದು ಬೆಂಗಳೂರು ಕೆಪಿಸಿಸಿ ಕೈ ಪಾಳಯದ ಕಛೇರಿಯಲ್ಲಿ ಅಚ್ಚರಿಯ ಘಟಾನವಾಳಿಗಳು ದಾಖಲಾಗಿರುವುದು ಕಾಣಬಹುದು.
ಅದರಂತೆ ಬಿಜೆಪಿ ಪಕ್ಷದ ಶಾಸಕರಾದ ಎನ್.ವೈ.ಗೋಪಾಲಕೃಷ್ಣ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೇಸ್ ಬಾವುಟ ಹಿಡಿಯಲು ಕೆಪಿಸಿಸಿ ಕಛೇರಿಗೆ ದಾವಿಸಿದ್ದಾರೆ ಇನ್ನೂ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೇಸ್ ಟಿಕೆಟ್‌ಗಾಗಿ ಡಾ.ಬಿ.ಯೋಗೇಶ್ ಬಾಬು ಗೇ ಟಿಕೆಟ್ ನೀಡಬೇಕು ಎಂದು ಯೋಗೇಶ್ ಬಾಬು ಆಪ್ತರು ಮುಖಂಡರು ಬಾಬುರವರ ಪೋಟೊ ಹಿಡಿದು ಕೆಪಿಸಿಸಿ ಕಚೇರಿ ಮುಂದೆ ಘೋಷಣೆ ಕೂಗುವ ದೃಶ್ಯ ಒಂದೆಡೆಯಾದರೆ
ಅದೇ ಕೆಪಿಸಿಸಿ ಕೇಚೇರಿಯಲ್ಲಿ ಕೆಪಿಸಿಸಿ ಅಧಕ್ಷ ಡಿಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಎನ್.ವೈ ಜೀರವರನ್ನು ಕಾಂಗ್ರೇಸ್ ಪಕ್ಷಕ್ಕೆ ಭರಮಾಡಿಕೊಂಡಿದ್ದಾರೆ
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೇಸ್ ಟಿಕೆಟ್ ಮಾತ್ರ ಕಗ್ಗಂಟು ಹಾಗಿದೆ.
ಒಟ್ಟಾರೆ ಆಂದ್ರದ ಗಡಿಯನ್ನು ಹಂಚಿಕೊAಡಿರುವ ರೇಷ್ಮೆ ನಗರಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ರಾಜಾಕೀಯ ಆಟವೇ ಬೇರೆ
ಇಲ್ಲಿ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜೀಗಿಯುದು ಮಾಮೂಲು ಹಾಗಿದೆ
ಅದರಂತೆ ಇಲ್ಲಿನ ಮತದಾರರಿಗೆ ಯಾವ ಪಕ್ಷಕ್ಕೆ ಮಣೆ ಹಾಕಬೇಕು ಯಾವ ಅಭ್ಯರ್ಥಿಗೆ ಮತ ನೀಡಬೇಕು ಎಂಬುದು ಮಾತ್ರ ಗೊಂದಲವಾಗಿದೆ
ಇನ್ನೂ ಮುಖಂಡರದು ಕಾರ್ಯಕರ್ತರ ಪಾಡಂತು ಹೇಳತೀರದು ಒಮ್ಮೆ ಬಿಜೆಯಿಂದ ಕಾಂಗ್ರೇಸ್ ಹಾರುವ ಆಕಾಂಕ್ಷಿಗಳ ಜೊತೆ ನಿಲ್ಲಬೇಕಾ ಇಲ್ಲ ಕಾಂಗ್ರೇಸ್ ನಿಂದ ಬಿಜೆಗೆ ಜಂಪ್ ಹಾಗುವ ಪಕ್ಷಾಂತರ ಅಭ್ಯರ್ಥಿ ಪರ ನಿಲ್ಲಬೇಕು ಎಂಬುದು ಗೋಚರಿಸದೆ ನಡು ರಸ್ತೆಯಲ್ಲೆ ನಿಲ್ಲುವ ಅನಿವಾರ್ಯತೆ ಇಲ್ಲಿನ ಗಡಿ ಭಾಗದ ಮುಖಂಡರಿಗೆ ಬಂದೊದಗಿದೆ
ಅದರಂತೆ ಇಲ್ಲಿನ ರಾಜಾಕೀಯ ಚಿತ್ರಣವೇ ಬೇರೆ ಇನ್ನೂ ಒಂದೇ ಸಮಯದಲ್ಲಿ ಕ್ಷೇತ್ರದ ಆಕಾಂಕ್ಷಿಗಳು ಕೆಪಿಸಿಸಿ ಕದ ತಟ್ಟಿರುವ ಘಟನೆಗಳು ಮಾತ್ರ ಕೆಪಿಸಿಸಿ ವರಿಷ್ಠರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇನ್ನೂ ಇಲ್ಲಿನ ಕಾಂಗ್ರೇಸ್ ಟಿಕೆಟ್ ಕಗ್ಗಂಟು ನಲ್ಲಿ ವರಿಷ್ಠರ ನಿಲುವು ಕಾದನೋಡಬೇಕಿದೆ