ಚಳ್ಳಕೆರೆ : ರಾಜ್ಯದ ವಿಧಾನಸಭಾ ಚುನಾವಣೆ ಮಧ್ಯ ಕರ್ನಾಟಕ ಭಾಗದಲ್ಲಿ ಉರಿ ಬಿಸಿಲಿನಂತೆ ರಂಗೆರುತ್ತಿದೆ ಇನ್ನೂ ಈ ಬಾಗದ ಹಲವು ಪಕ್ಷದ ನಾಯಕರುಗಳು ಕ್ಷೇತ್ರದ ಒಳಗಿನವ ಹೊರಗಿನವ ಎಂಬ ಅಜೆಂಡದ ಮೂಲಕ ತಮ್ಮ ತಮ್ಮ ಪಕ್ಷಗಳಲ್ಲಿ ಟಿಕೆಟ್ಗಾಗಿ ಕಸರತ್ತು ನಡೆಸುತ್ತಿದ್ದಾರೆ.
ಅಂತೆಯೇ ಕಲ್ಲಿನ ಕೋಟೆಯ ಕಲಿಗಳು ಉರಿ ಬಿಸಿಲಿಗೆ ಕಾದಿರುವ ರಣ ಬಿಸಿಲಿನಂತೆ ಆಕಾಂಕ್ಷಿಗಳು ಬಿಸಿಲು ಲೆಕ್ಕಿಸದೆ ಮತದಾರರ ಓಲೈಕೆ ಹಾಗೂ ಪಕ್ಷದ ವರಿಷ್ಠರ ಓಲೈಕೆ ಭರ್ಜರಿಯಾಗಿ ಮಾಡುತ್ತಿದ್ದಾರೆ.
ಮಧ್ಯ ಕರ್ನಾಟಕದ ಕೋಟೆನಾಡಿನಲ್ಲಿ ರಾಜಾಕೀಯ ಕಲಿಗಳ ಬಗ್ಗೆ ಈಡೀ ರಾಜ್ಯವೇ ತಿರುಗಿ ನೋಡುವಂತ ರಾಜಾಕೀಯ ಬೆಳವಣಿಗೆಗಳು ಇಲ್ಲಿ ಕಾಣಸಿಗುತ್ತಿವೆ ಎಂಬುವುದರಲ್ಲಿ ಅಚ್ಚರಿಯಿಲ್ಲ.
ಕೋಟೆ ನಾಡಿನಲ್ಲಿ ಕಳೆದ 2018ರಲ್ಲಿ ಏಕೈಕ ಪಕ್ಷವಾಗಿ ಕಾಂಗ್ರೇಸ್ ಪಕ್ಷದ ವಶದಲ್ಲಿದ್ದ ಆಯಿಲ್ ಸಿಟಿಯಲ್ಲಿ ಚುನಾವಣೆ ದಿನ ದಿನಂದ ದಿನಕ್ಕೆ ರಂಗೇರುತ್ತಿದೆ ಆದರಂತೆ ಕಳೆದ ಬಾರಿ ಸುಮಾರು 72,874 ಮತಗಳಿಂದ ಆಯಿಲ್ ಸಿಟಿಯ ಚುಕ್ಕಾಣಿ ಹಿಡಿದ ಹಾಲಿ ಶಾಸಕ ಟಿ.ರಘುಮೂರ್ತಿಗೆ ಕಾಂಗ್ರೇಸ್ ಪಕ್ಷದಿಂದ ಬಹುತೇಕ ಟಿಕೆಟ್ ಪಿಕ್ಸ್ ಹಾಗಿದೆ
ಕಾಂಗ್ರೇಸ್ಗೆ ಪೈಪೋಟಿ ನೀಡಿ ಅತೀ ಕಡಿಮೆ 59,335 ಮತಗಳ ಅಂತರದಲ್ಲಿ ಸೋಲನುಂಡ ಎಂ. ರವೀಶ್ಕುಮಾರ್ಗೂ ಜೆಡಿಎಸ್ ಪಕ್ಷದಿಂದ ಟಿಕೆಟ್ ನಿಗಧಿಯಾಗಿದೆ
ಇನ್ನೂ ಬಿಜೆಪಿ ಪಕ್ಷದಲ್ಲಿ ಮಾತ್ರ 2023ರ ಚುನಾವಣೆ ಹೊಸ್ತಿಲಲ್ಲಿ ಸುಮಾರು ಅರ್ಧಡಜನ್ಗೂ ಅಧಿಕ ಆಕಾಂಕ್ಷಿಗಳು ಹೊರ ಹೊಮ್ಮಿದ್ದರು ಆದರೆ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವ ಕಾರಣ ಕೇವಲ ಮೂರು ಜನ ಆಕಾಂಕ್ಷಿಗಳು ಮಾತ್ರ ಮುನ್ನೆಲೆಗೆ ಬಂದಿದ್ದಾರೆ ಅದರಂತೆ ಸರಕಾರದ ಅಧಿಕಾರಿಯಾಗಿ ಸ್ವಯಂ ನಿವೃತ್ತಿ ನೀಡಿ ಕಣಕ್ಕಿಳಿದ ಆರ್.ಅನಿಲ್ ಕುಮಾರ್ ಹಾಗೂ ಚಳ್ಳಕೆರೆ ತಾಲೂಕಿನಲ್ಲಿ ಕಳೆದ ಎರಡು ವರ್ಷ ಸೇವೆ ಸಲ್ಲಿಸಿ ಇದೇ ಕ್ಷೇತ್ರದಲ್ಲಿ ಕಣಕ್ಕಿಳಿಯಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ತಹಶೀಲ್ದಾರ್ ಎನ್.ರಘುಮೂರ್ತಿ ಆಕಾಂಕ್ಷಿಯಾಗಿದ್ದಾರೆ.
ಇನ್ನೂ ಸ್ಥಳಿಯನಾದ ನಾನು ಇಲ್ಲಿ ಹುಟ್ಟಿ ಬೆಳೆದು ಮಗ ನಾನು ನನಗೆ ಬಿಜೆಪಿ ಹೈ ಕಮಾಂಡ್ ಟಿಕೆಟ್ ನೀಡುವ ಭರವಸೆ ನೀಡಿದೆ ಎಂದು ಮತ ಪ್ರಚಾರದಲ್ಲಿ ತೊಡಗಿದ ಎಂ.ಎಸ್.ಜಯರಾA ಬಿಜೆಪಿ ಪಕ್ಷದ ಟಿಕೆಟ್ ರೇಸ್ನಲ್ಲಿ ಇದ್ದಾರೆ
ಅದರಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಳೆದ ದಿನಗಳಿಂದ ತಿಪ್ಪೆಸ್ವಾಮಿ ಪುತ್ರ ಕೆ.ಟಿ.ಕುಮಾರಸ್ವಾಮಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಕೆಲ ಮುಖಂಡರು ಒತ್ತಾಯವಿದೆ.
ಒಟ್ಟಾರೆ ಆಯಿಲ್ ಸಿಟಿಯಲ್ಲಿ ವಲಸಿಗರಿಗೆ ಮಣೆ ಹಾಕುವ ಮುಖಂಡರು ಒಂದು ಗುಂಪು ಆದರೆ ಅದೇ ಸ್ಥಳೀಯ ಪರ ನಿಂತ ಮುಖಂಡರು ಗುಂಪು ಇನ್ನೋಂದೆಡೆ ಒಟ್ಟಾರೆ ಸ್ಥಳೀಯ ಹಾಗೂ ವಲಸಿಗ ಎಂಬ ಮಾತು ಮಾತ್ರ ಕ್ಷೇತ್ರದಲ್ಲಿ ಮುನ್ನೆಲೆಗೆ ಬಂದಿರುವುದು ಸತ್ಯವಾಗಿದೆ.
ಒಟ್ಟಾರೆ ಆಯಿಲ್ ಸಿಟಿಯಲ್ಲಿ ಟಿಕೆಟ್ಗಾಗಿ ನೆಕ್ ನೆಕ್ ಪೈಟ್ ಬಿಳುವುದು ಮಾತ್ರ ನಿಜವಾಗಿದೆ. ಆದರೆ ಕಳೆದ ಹಲವು ಚುನಾವಣೆಗಳಲ್ಲಿ ಬಿಜೆಪಿ ಪಕ್ಷ ಮುನ್ನೆಲೆಗೆ ಇದ್ದರೂ ಕೂಡ ಈ ಬಾರಿ ಅಭ್ಯರ್ಥಿ ನಿಗಧಿಯಾಗದೆ ಇರವು ಕಾರಣ ಕ್ಷೇತ್ರ ಮಾತ್ರ ಬಿಜೆಪಿ ಪಾಳಯದಲ್ಲಿ ಬೂದಿ ಮುಚ್ಚಿದ ಕೆಂಡದAತೆ ಇದೆ ಎಂಬುದು ಮಾತ್ರ ಸತ್ಯವಾಗಿದೆ.
ಒಟ್ಟಾರೆ ಕ್ಷೇತ್ರದ ಒಳಗಿನವ ಹಾಗೂ ಹೊರಗಿನ ಎಂಬ ಮಾತು ಮಾತ್ರ ತೆರೆಮರೆಯಲ್ಲಿ ಭಾರೀ ಚರ್ಚೆಗೆ ಗ್ರಸವಾಗಿದೆ ಒಟ್ಟಾರೆ ಬಿಜೆಪಿ ವರಿಷ್ಠರ ನಿಲುವು ಮಾತ್ರ ಕಾದು ನೋಡಬೇಕಿದೆ.
ಆಯಿಲ್ ಸಿಟಿ ಕ್ಷೇತ್ರದಲ್ಲಿ ಟಿಕೆಟ್ ನಂತರ ಮಾತ್ರ ಬಿಜೆಪಿಯಲ್ಲಿ ವಿರೋಧ ಅಲೆ ಎದ್ದೆಳುವ ಸಾಧ್ಯತೆಗಳು ಇವೆ ಇವೆಲ್ಲ ಅಂಶಗಳನ್ನು ವರಿಷ್ಠರು ಯಾವ ಲೆಕ್ಕಾಚಾರದಂತೆ ತೂಗಿ ಅಳೆಯುವರೋ ಕಾದು ನೋಡಬೇಕಿದೆ.