ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಇಂದು ತಾಲೂಕಿನ ಟಿ.ಎನ್.ಕೋಟೆ ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಚಳ್ಳಕೆರೆ ತಾಲೂಕಿನ ಟಿ.ಎನ್.ಕೋಟೆ ಗ್ರಾಮದಲ್ಲಿ ಶಾರದಾ ಕಾಲೋನಿಯಲ್ಲಿ ಸುಮಾರು 12. ಲಕ್ಷ ರೂ.ಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾದ ಅಂಗನವಾಡಿ ಕಟ್ಟಡದ ಉದ್ಘಾಟನೆ. ಹಾಗೂ ಮೇಲುಕೋಟೆಯಲ್ಲಿ ಸುಮಾರು 10. ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾದ ವಾಲ್ಮೀಕಿ ಭವನದ ಉದ್ಘಾಟನೆ. ನಂತರ ಸುಮಾರು 5. ಲಕ್ಷ ರೂ.ಗಳ ವೆಚ್ಚದಲ್ಲಿ ನೂತನ ಶ್ರೀದೇವಿ ದೇವಸ್ಥಾನದ ಉದ್ಘಾಟನೆ. ತದ ನಂತರ ಸುಮಾರು 1.80 ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆ ಮಾಡಿದರು.
ನಂತರ ನೂತನ ಭಗತ್ ಸಿಂಗ್ ಸಮುದಾಯ ಭವನದ ಉದ್ಘಾಟನೆ. ಆದಾದ ನಂತರ ಸುಮಾರು 10.ಲಕ್ಷ ರೂ.ಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾದ ಬಾಬು ಜಗಜೀವನ್ ರಾಮ್ ಭವನದ ಉದ್ಘಾಟನೆ. ಸುಮಾರು 2.ಕೋಟಿ ರೂ.ಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾದ ಪಿಯು ಕಾಲೇಜ್ ಕಟ್ಟಡದ ಉದ್ಘಾಟನೆ., ಗ್ರಾಮದಲ್ಲಿ ಸಿ.ಸಿ. ರಸ್ತೆ ಕಾಮಗಾರಿ ಉದ್ಘಾಟನೆ ನೆರೆವೆರಿಸಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ಮತ್ತು ಪರಶುರಾಂಪುರ ಕಾಂಗ್ರೆಸ್ ಅಧ್ಯಕ್ಷರುಗಳಾದ ವೀರಭದ್ರಯ್ಯ, ಶಶಿಧರ ,ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪದ್ಮ ಬಸವರಾಜ್, ಉಪಾಧ್ಯಕ್ಷರಾದ ಓಬಕ್ಕ ಹನುಮಂತರಾಯ, ಸದಸ್ಯರುಗಳಾದ ಚಂದ್ರಣ್ಣ, ಓಬಳೇಶ್, ಶ್ರೀನಿವಾಸ, ನರಸಿಂಹಮೂರ್ತಿ, ಹನುಮಂತರಾಯ, ರಾಜೇಶ್, ಓಂಕಾರ್ ಮೂರ್ತಿ, ಮಲ್ಲಿಕಾರ್ಜುನ, ರಾಜಣ್ಣ, ಓಬಕ್ಕ, ತಿಪ್ಪಕ್ಕ, ಅನಿತಮ್ಮ, ಶೃತಿ, ಮುಖಂಡರುಗಳಾದ ಕೇಶವಣ್ಣ, ನಾಗೇಂದ್ರಪ್ಪ, ವೀರೇಶ್, ಪ್ರಕಾಶ್, ಶಿವಕುಮಾರಸ್ವಾಮಿ, ಗುಜ್ಜಾರಪ್ಪ, ಕಿರಣ್, ತಿಪ್ಪೇಸ್ವಾಮಿ, ಜಯಣ್ಣ, ನವೀನ್, ಓಂಕಾರಮ್ಮ, ದೇವೇಂದ್ರಪ್ಪ, ರಂಗಸ್ವಾಮಿ, ಜಗಳೂರು ಸ್ವಾಮಿ, ದೇವಣ್ಣ, ಬಸವರಾಜ, ಹನುಮಂತಪ್ಪ, ಮುಖಂಡರು, ಕಾರ್ಯಕರ್ತರು, ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.