ಚಳ್ಳಕೆರೆ : ನಗರದ ಹೊರವಲಯದ ಶ್ರೀಜಗಲೂರಜ್ಜ ಪಾಪನಾಯಕ ಸೇವಾ ಮಂದಿರ ಬಳಿ ರಾಮಕೃಷ್ಣ ಸೇವಾ ಕೇಂದ್ರ. ಸುಧಾಮೂರ್ತಿ ಇವರ ಸಹಕಾರದೊಂದಿಗೆ ಆಯೋಜಿಸಿದ್ದ ಉಚಿತ ಮೇವು ವಿತರಣಾ ಕೇಂದ್ರದವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿ ಮಾತನಾಡಿದರು.
ಬುಡಕಟ್ಟು ಸಮುದಾಯಗಳನ್ನು ಹಾಸು ಹೊದ್ದ ಚಳ್ಳಕೆರೆ ಬಯಲು ಸೀಮೆಯಲ್ಲಿ ಜಾನುವಾರುಗಳ ಸಾಕಣಿಕೆಗೆ ದೊಡ್ಡ ಸವಲಾಗಿದೆ ಆದರೆ ಇಂತಹ ಸಂಘ ಸಂಸ್ಥೆಗಳಿAದ ಜಾನುವಾರುಗಳನ್ನು ಮಾರುವ ರೈತರು ಇಂತಹ ಮೇವುಕೇಂದ್ರಲ್ಲಿ ಪಾಲನೆ ಪೋಷಣೆ ಮಾಡುವಂತೆ ರೈತರಿಗೆ ಶಾಸಕ ಟಿ.ರಘುಮೂರ್ತಿ ಕಿವಿಮಾತು ಹೇಳಿದರು.
ತಾಲ್ಲೂಕಿನಲ್ಲಿ ಬೇಸಿಗೆ ಕಾಲದಲ್ಲಿ ದೇವರ ರಾಸುಗಳಿಗೆ ಮೇವಿನ ಕೊರತೆಯಿರುವುದರಿಂದ ಶ್ರೀ ರಾಮಕೃಷ್ಣ ಸೇವಾಶ್ರಮ ಉಚಿತ ಮೇವು ನೀಡುತ್ತಿರುವುದು ಸಂತಸ ತಂದಿದೆ…ದೇವರ ಎತ್ತುಗಳನ್ನು ಪೋಷಣೆ ಮಾಡಿ ಅವುಗಳಿಂದಲೇ ವಿಶೇಷ, ವಿಶಿಷ್ಟ ಆಚರಣೆಗಳನ್ನು ಮಾಡಿಕೊಂಡು ಬಂದಿರುವAತ ಇತಿಹಾಸವಿದೆ ಎಂದು ಹೇಳಿದರು.
ಪಾವಗಡದ ರಾಮಕೃಷ್ಣ ಸೇವಾ ಆಶ್ರಮದ ಜಪನಂದಸ್ವಾಮಿ ಮಾತನಾಡಿದ ಪಶು ದೇಶದ ಆಸ್ತಿ, ತಾಲ್ಲೂಕಿನಲ್ಲಿ ಹಸುಗಳನ್ನು ಪೂಜೆ ಮಾಡುತ್ತಾರೆ, ಇಂತಹ ದೇವರ ಸಮಾನವಾದ ಜಾನುವಾರುಗಳಿಗೆ ಬೇಸಿಗೆ ಆರಂಭವಾಗಿರುವುದರಿAದ ಮೇವಿನ ಕೊರತೆಯಾಗದಂತೆ ಮೇವು ಒದಗಿಸಲಾಗುವುದು ಎಂದು ತಿಳಿಸಿದರು.
ಈದೇ ಸಂಧರ್ಭದಲ್ಲಿ ಕುರಡಿಹಳ್ಳಿ ಭಾವಜಿ ಆಶ್ರಮದ ಶಿವಸಾದು ಸ್ವಾಮಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ. ರಾಘವೇಂದ್ರ, ಸದಸ್ಯಮಲ್ಲಿಕಾರ್ಜುನ, ಸಮಾಜ ಸೇವಕ ಹೆಚ್. ಎಸ್. ಸೈಯದ್, ನನ್ನಿವಾಳ ಗ್ರಾಪಂ ಸದಸ್ಯ ಚಿನ್ನಯ್ಯ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರೇವಣ್ಣ, ಇತರರಿದ್ದರು.