ಚಳ್ಳಕೆರೆ : ನಗರದ ಎಸ್.ಆರ್.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಬೆಳಗಾಂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡೀನ್ ಮತ್ತು ಪ್ರಾಧ್ಯಾಪಕ ಡಾ.ಸಿ.ಎಂ.ತ್ಯಾಗರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿ ಮನುಕುಲ ಇರುವುದು ವಿಜ್ಞಾನಿಗಳಿಂದ. ವೈದ್ಯಕೀಯಕ್ಕೆ ಸಾವಿಲ್ಲ ಎಂದು ಈ ಸಂಧರ್ಭದಲ್ಲಿ ಲೂಹಿ ಫ್ಯಾಶ್ಚರ್, ಥಾಮಸ್ ಅಲ್ವ ಎಡಿಸನ್ ಮುಂತಾದ ವಿಜ್ಞಾನಿಗಳ ಸಾಧನೆ ಮತ್ತು ಸಂಶೋಧನೆ ಬಗ್ಗೆ ತಿಳಿಸಿದರು. ಆಧುನಿಕತೆಗೆ ಹತ್ತಿರ ಇರುವುದು ವಿಜ್ಞಾನ ಹಾಗಾಗಿ ವಿದ್ಯಾರ್ಥಿಗಳು ಆಸಕ್ತಿ ಕಲಿಕೆಯ ಮೂಲಕ ತಮ್ಮ ವಿದ್ಯಾರ್ಜನೆಯನ್ನು ಹೆಚ್ಚಿಸಿಕೊಂಡು ಸ್ವಾವಲಂಬಿಯಾಗಿ ಜೀವಿಸಬೇಕು ಎಂದು ತಿಳಿಸಿದರು. ಜಪಾನ್ ದೇಶವು ಮೊಟ್ಟ ಮೊದಲು ತನ್ನ ಆತ್ಮ ರಕ್ಷಣೆಗಾಗಿ ಕರಾಟೆ ಕ್ರೀಡೆಯನ್ನು ಪ್ರಪಂಚಕ್ಕೆ ಪರಿಚಯಿಸಿತು.
ವಾಣಿಜ್ಯ ಶಾಸ್ತçವು ಸಂಪತ್ತಿನ ಶಾಸ್ತçವಾಗಿದೆ. ವಿದ್ಯಾರ್ಥಿಗಳು ಹಣದ ಗುರಿಯೊಂದಿಗೆ ಅಧ್ಯಯನ ಮಾಡದೇ ವಿದ್ಯಾರ್ಜನೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಹಣ ಸಂಪಾದಿಸಿ ಎಂದು ವಾಣಿಜ್ಯ ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಂವಾದನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್.ಆರ್.ಎಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸುಜಾತ ಲಿಂಗರೆಡ್ಡಿ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್, ಟಿ.ವಿ ಮತ್ತು ದುಶ್ಚಟಗಳಿಂದ ದೂರವಿರಬೇಕೆಂದು ಕಿವಿಮಾತನ್ನು ನುಡಿದರು. ನಮ್ಮಗಳ ಆಯ್ಕೆ ಮತ್ತು ಗುರಿ ಸರಿಯಾಗಿರಬೇಕು ಆಗ ಮಾತ್ರ ನಾವು ಏನನ್ನಾದರು ಸಾಧಿಸಬಹುದು ಹಾಗಾಗಿ ಸಮಯವನ್ನು ಹಾಳು ಮಾಡದೇ ತಮ್ಮ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ತಿಳಿಸಿದರು.
ನಿವೃತ್ತ ಜಂಟಿ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಹಾಗೂ ಚಳ್ಳಕೆರೆ ತಾಲ್ಲೂಕಿನ ಎಸ್.ಆರ್.ಎಸ್ ಕಾಲೇಜಿನ ನೂತನ ಆಡಳಿತಾಧಿಕಾರಿ ಪಿ.ಎನ್.ಕೃಷ್ಣಪ್ರಸಾದ್ ಮಾತನಾಡಿ ವಿಜ್ಞಾನ ವಿಭಾಗದ ಜೊತೆಯಲ್ಲಿ ವಾಣಿಜ್ಯ ವಿಭಾಗವನ್ನು ಅಭಿವೃದ್ಧಿ ಪಡಿಸುವುದಕ್ಕೆ ಶ್ರಮಿಸುತ್ತೇನೆಂದು ತಿಳಿಸದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಚಿತ್ರದುರ್ಗ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಕರ ಸಂಘದ ಜಿಲ್ಲಾಧ್ಯಕ್ಷರಾದ ಎಸ್.ಲಕ್ಷö್ಮಣ ಮಾತನಾಡಿ ಎಸ್.ಆರ್.ಎಸ್ ವಿದ್ಯಾಸಂಸ್ಥೆಯು ಬಯಲುಸೀಮೆಯ ಜ್ಞಾನ ಗಂಗೆಯಾಗಿದೆ. ಜಿಲ್ಲೆಯಲ್ಲಿ ಬಡ ಮಧ್ಯಮ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡುವುದಕ್ಕೆ ಸಂಸ್ಥೆಯು ಸಹಕಾರಿಯಾಗಿದೆ. ಸಂಸ್ಥೆಯ ವತಿಯಿಂದ ಹಲವಾರು ಪ್ರತಿಭಾ ಪುರಸ್ಕಾರಗಳನ್ನು ಪ್ರತಿ ವರ್ಷ ಹಮ್ಮಿಕೊಂಡು ಬಂದಿರುವುದು ಸಂತೋಷದ ಸಂಗತಿಯಾಗಿದೆ. ಡಾ.ತ್ಯಾಗರಾಜ್ ರವರು ನನ್ನ ಸ್ನಾತಕೋತ್ತರ ಪದವಿಯ ಸಂಗಡಿಗರು ಅವರು ದೇಶ ಮತ್ತು ವಿದೇಶಗಳ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯ ರಿಜಿಸ್ಟರ್ ಮತ್ತು ಹಲವಾರು ಉನ್ನತ ಹುದ್ದೆ ಅಲಂಕರಿಸಿರುವುದು ತುಂಬಾ ಸಂತೋಷವನ್ನುAಟು ಮಾಡಿದೆ.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಸತ್ಯನಾರಾಯಣ್, ಎಂ.ರವೀಶ್ ಕನ್ನಡ ಉಪನ್ಯಾಸಕರಾದ ಶಿವಾನಂದ್, ಕೆ.ಎನ್.ವಸಂತ್‌ಕುಮಾರ್, ಉಪನ್ಯಾಸಕರುಗಳಾದ ಜಬೀಉಲ್ಲಾ, ಹೆಚ್.ಶ್ರೀನಿವಾಸ್, ಸಾಹಿತಿ ಬೆಳಗಟ್ಟ ನಾಗರಾಜ್, ಗೋಪಾಲ್, ಕೃಷ್ಣಮೂರ್ತಿ , ಪ್ರದೀಪ್, ಮೋಹನ್, ಹಾಗೂ ಇತರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.