ಚಳ್ಳಕೆರೆ : ರಾಜ್ಯ ಸರಕಾರಿ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಜನ ಸಾಮಾನ್ಯರಿಗೆ ತೀವ್ರತರವಾದ ತೊಂದರೆಯಾಗಿದೆ. ನೌಕರರ ಏಳನೇ ವೇತನ ಆಯೋಗ ಜಾರಿ ಹಾಗೂ ಎನ್‌ಪಿಎಸ್ ರದ್ದು ಒಪಿಎಸ್ ಜಾರಿ ಮಾಡಬೇಕು ಎಂಬುದು ಕೂಗಾಗಿಯೇ ಉಳಿದಿದೆ ಆದ್ದರಿಂದ ಮುಷ್ಕರ ಅನಿವಾರ್ಯವಾಗಿದೆ ಎನ್ನಲಾಗಿದೆ.
ಇನ್ನೂ ಚಳ್ಳಕೆರೆ ತಾಲೂಕಿನ 37 ಇಲಾಖೆಯಲ್ಲಿ ಸುಮಾರು 6543 ಸರಕಾರಿ ನೌಕರರು ಹಿಂದೂ ಗೈರು ಹಾಜಾರಾತಿಯ ಮೂಲಕ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.
ಅದರAತೆ ತುರ್ತಾ ಸೇವೆಗಳಾದ ಆಸ್ವತ್ರೆ ಹಾಗೂ ಪೊಲೀಸ್ ಈಗೇ ಕೆಲವೊಂದು ಇಲಾಖೆಗಳು ಮಾತ್ರ ಅಗತ್ಯ ಸೇವೆ ನೀಡಿದರು.
ಇನ್ನೂ ಶಿಕ್ಷಣ ಕ್ಷೇತ್ರದಲ್ಲಿ ಸಂಪೂಣರ್ವಾಗಿ ಸು.1000ನೌಕರರು ಮುಷ್ಕರದಲ್ಲಿ ಬಾಗಿಯಾಗಿರುವುದು ಕಂಡು ಬಂದಿದೆ ಇನ್ನೂ ಆರೋಗ್ಯ ಸಿಬ್ಬಂದಿ ಸೇವೆಯಲ್ಲಿ ಸು.1200 ನೌಕರರು ಅಗತ್ಯ ಸೇವೆಯಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಸೇವೆ ನೀಡಿದರೆ ಉಳಿದ ನೌಕರರು ಗೈರು ಹಾಜರಾತಿಯಲ್ಲಿ ಇದ್ದರು,.
ಇನ್ನೂ ಆಯಿಲ್ ಸಿಟಿ ಆಂದ್ರದ ಗಡಿಯನ್ನು ಹಂಚಿಕೊAಡು ದಿನೊಂದಕ್ಕೆ ಸಾವಿರಾರು ರೋಗಿಗಳು ಆಸ್ವತ್ರೆಗೆ ಬಂದು ಹೋಗುತ್ತಾರೆ ಆದರೆ ಇಂದು ಮುಷ್ಕರÀ ಹಿನ್ನಲೆಯಲ್ಲಿ ರೋಗಿಗಳು ದೂರದ, ಊರುಗಳಿಂದ ಬಂದು ಖಾಸಗಿ ಆಸ್ವತ್ರೆಗೆ ದುಬಾರಿ ಹಣ ನೀಡದೆ ಸಾರ್ವಜನಿಕ ಆಸ್ವತ್ರೆ ಸೇವೆಗೆ ಕಾಯುತ್ತಿರುವುದು ಕಂಡು ಬಂದಿದೆ.
ಇನ್ನೂ ಆಸ್ವತ್ರೆಯ ಆವರಣದಲ್ಲಿ ಚಿಕಿತ್ಸೆಗೆ ಬಂದಿದ್ದ ಮಹಿಳೆ ಮಗಳಿಗೆ ಜ್ವರ ಬಂದಿದೆ ಸ್ವಾಮಿ ಆದರೆ ವೈದ್ಯರ ಇಲ್ಲದೆ ಚಿಕಿತ್ಸೆ ಇಲ್ಲವಾಗಿದೆ. ಸರಕಾರ ಈ ಅತೀ ತುರ್ತಾಗಿ ಸರಕಾರಿ ನೌಕರರ ಬೇಡಿಕೆ ಈಡೇರಿಸಬೇಕಿದೆ ಅವರಿಂದ ನಮಗೆ ಸೇವೆ ಸಿಗಲಿದೆ ಎಂದಿದ್ದಾರೆ.
ತಾಲೂಕು ಕಚೇರಿಗೆ, ತಾಲೂಕು ಪಂಚಾಯತ್, ಉಪ ನೋಂದಾಣಾಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಸರಕಾರಿ ಕಚೇರಿಗಳಲ್ಲಿ ಜನ ಜಂಗುಳಿAದ ಕೂಡಿರುತ್ತಿದ್ದ ಸರಕಾರಿ ನೌಕಕರು 7ನೇ ವೇತನ ಆಯೋಗ ಜಾರಿಗೊಳಿಸುವಂತೆ ಕರ್ತವ್ಯಕ್ಕೆ ಗೈರು ಹಾಜರಿಯಾಗಿ ಸರಕಾರಿ ಕಚೇರಿಗಳು ರಜೆ ಇರುವುದರಿಂದ ಕಚೇರಿಗಳು ಬಿಕೋ ಎನ್ನುತ್ತಿದ್ದವು.
ಬಾಕ್ಸ್ ಮಾಡಿ :
ರಾಜ್ಯ ಸರಕಾರ ಕೆಲವೇ ಗಂಟೆಗಳಲ್ಲಿ ನಿರ್ಣಯನ್ನು ಸರಕಾರಿ ನೌಕರರ ಏಳನೇ ವೇತನ ಜಾರಿ ಹಾಗೂ ಎನ್‌ಪಿಎಸ್ ವರದಿಗೆ ವಿಶೇಷ ಅಧ್ಯಯನ ತಂಡ ರಚನೆಗೆ ಶೀಪಾರಸ್ಸು ಮಾಡಿದ್ದರಿಂದ ಈಡೀ ರಾಜ್ಯಾದ್ಯಾಂತ ಹಮ್ಮಿಕೊಂಡ ರಾಜ್ಯ ಸರಕಾರಿ ನೌಕರರ ಮುಷ್ಕರ ಕೈ ಬಿಡಲಾಗಿ ಎಂದಿನAತೆ ಕರ್ತವ್ಯಕ್ಕೆ ಹಾಜಾರಾದರು.

About The Author

Namma Challakere Local News
error: Content is protected !!