ಗ್ಯಾಸ್ ಸಿಲಿಂಡರ್ ಸ್ಪೋಟ : ಪ್ರಾಣಪಾಯದಿಂದ ಪಾರದ ಕುಟುಂಬ
ಚಳ್ಳಕೆರೆ : ಗ್ಯಾಸ್ ಸಿಲಿಂಡರ್ ಸ್ಪೋಟ ಪ್ರಾಣಪಾಯದಿಂದ ಪಾರದ ಕುಟುಂಬ
ಹೌದು ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗೊಲ್ಲರಹಟ್ಟಿಯಲ್ಲಿ ಮಂಗಳವಾರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಅಕ್ಕಪಕ್ಕದ ಮೂರು ಮನೆಗಳು ಹಾಗೂ ಅಂಗಡಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ಸಿಲಿಡಂಟರ್ ಸ್ಪೋಟಕ್ಕೆ ಮೂರು ಮನೆಯಲ್ಲಿ ಬೆಂಕಿ ಅವರಿಸಿಕೊಂಡು ಮನೆಯಲ್ಲಿದ್ದ ದವಸ ಧಾನ್ಯಗಳು ಬಟ್ಟೆ ಬರೆಗಳು ಹಾಗೂ ಅಂಗಡಿಯ ವಸ್ತುಗಳು ಸಂಪೂರ್ಣವಾಗಿ ಸುಟ್ಟಿದ್ದು ಅಪಾರ ನಷ್ಟವಾಗಿದೆ.
ಇನ್ನೂ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು ಹೆಚ್ಚಿನ ಅನಾಹುತ ತಪ್ಪಿದೆ,
ಯಲಗಟ್ಟೆ ಗೊಲ್ಲರಹಟ್ಟಿಯ ಈರಣ್ಣ, ಚಂದ್ರಣ್ಣ ಹಾಗೂ ಈರಣ್ಣ ಎಂಬುವರ ಮನೆಗಳಿಗೆ ಹಾನಿಯಾಗಿದೆ, ಸಿಲಿಂಡರ್ ಸ್ಫೋಟಕ್ಕೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ, ಬೆಂಕಿ ಕಾಣಿಸಿಕೊಡ ತಕ್ಷಣವೇ ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿದ್ದು ಅಗ್ನಿಶಾಮಕ ದಳದ ತಂಡ ಗ್ರಾಮಕ್ಕೆ ಬರುವ ಸಮಯಕ್ಕೆ ಮನೆಯ ಮೇಲ್ಚಾವಣಿ ಸಂಪೂರ್ಣವಾಗಿ ಸುಟ್ಟಿದ್ದು ಮನೆಯಲ್ಲಿ ಇದ್ದಂತಹ ವಸ್ತುಗಳೆಲ್ಲ ಸುಟ್ಟು ಬಸ್ಮವಾಗಿವೆ ಈ ಅಗ್ನಿ ಅನಾಹುತದಲ್ಲಿ ದುರಾದೃಷ್ಟವಶತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನಾ ಸ್ಥಳಕ್ಕೆ ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿಟಿ.ಶಶಿಧರ್ ಸ್ಥಳಕ್ಕೆ ಭೇಟಿ ನೀಡಿ ಅಗ್ನಿ ಅನಾಹುತದಲ್ಲಿ ಮನೆ ಕಳೆದುಕೊಂಡವರಿಗೆ ವೈಯಕ್ತಿಕ ಧನ ಸಹಾಯ ಮಾಡಿದ್ದಾರೆ ಹಾಗೂ ಭಾನುಸ್ಟುಡಿಯೋ ಮಾಲೀಕ ವೀರೇಶ್ ಸಹ ವೈಯಕ್ತಿಕ ಧನ ಸಹಾಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣಾ ಸಿಬ್ಬಂದಿ, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿಟಿ ಶಶಿಧರ್, ಭಾನುವೀರೇಶ್, ಕಾಂಗ್ರೆಸ್ ಮುಖಂಡ ವೀರೇಶ್, ವೆಂಕಟೇಶ್, ಸಿರಿಯಣ್ಣ, ವೀರಣ್ಣ ಸೇರಿದಂತೆ ಗ್ರಾಮಸ್ಥರು ಮುಖಂಡರು ಸ್ಥಳದಲ್ಲಿ ಇದ್ದರು.