ನಾಯಕನಹಟ್ಟಿ:: ಸಮೀಪದ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಪ್ರತಿವರ್ಷವೂ ಅನ್ನಸಂತರ್ಪಣೆ ಕಾರ್ಯವು ನಡೆಸುತ್ತಾ ಬಂದಿದ್ದಾರೆ ಎಂದು ಜಿಎಸ್ ತಿಪ್ಪೇಸ್ವಾಮಿ ಹೇಳಿದ್ದಾರೆ.
ಅವರು ಗುರುವಾರ ಗ್ರಾಮದಲ್ಲಿ ನಡೆಯುವ ಅನ್ನಪೂರ್ಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ ಪ್ರತಿವರ್ಷವೂ ಶಿವರಾತ್ರಿ ಆದ ನಂತರ ಗ್ರಾಮದಲ್ಲಿ ಗೌಡ್ರು ವಂಶಸ್ಥರಿಂದ ಅನ್ನ ಸಂತರ್ಪಣೆ ಕಾರ್ಯವು ಇಡೀ ಗ್ರಾಮಕ್ಕೆ ನಡೆಸುತ್ತಾ ಬಂದಿದ್ದಾರೆ ಎಂದರು.
ಇವಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ ತಿಪ್ಪೇಸ್ವಾಮಿ ಮಾತನಾಡಿ ಗ್ರಾಮದಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ಗ್ರಾಮದ ಆರಾಧ್ಯ ದೈವ ಶ್ರೀ ಶಂಕರ ಸ್ವಾಮಿಯ ಪೂಜಾ ಕಾರ್ಯಗಳು ನಡೆಯುತ್ತವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ ಎಸ್ ಮಂಜಣ್ಣ ,ಉಪಾಧ್ಯಕ್ಷ ಪಾಲಮ್ಮ ಜಿ ಬೋರಯ್ಯ, ಸದಸ್ಯರಾದ ಪ್ರೇಮಲತಾ ಟಿ ಶಂಕರ್ ಮೂರ್ತಿ, ಬಸಕ್ಕ ತಿಪ್ಪೇಸ್ವಾಮಿ, ರಾಧಮ್ಮ ಬೋಜರಾಜ್, ಎಂ ತಿಪ್ಪೇಸ್ವಾಮಿ, ಗ್ರಾಮಸ್ಥರಾದ ಜಿ ಆರ್ ಮಲ್ಲೇಶಪ್ಪ, ಜಿ ಎಸ್ ತಿಪ್ಪೇಸ್ವಾಮಿ ,ಜಿ ಆರ್ ಸೋಮಶೇಖರ್, ಗೌಡ್ರು ಮಂಜಣ್ಣ, ಎಸ್ ಜಿ ಮಂಜಣ್ಣ, ಡಿ ಎಸ್ ಮನೋಹರ, ಡಿ ಟಿ ತಿಪ್ಪೇಸ್ವಾಮಿ, ಡಿಎಸ್ಎಸ್ ಜಿಲ್ಲಾ ಸಂಚಾಲಕ ಜಿ ಬಿ ತಿಪ್ಪೇಸ್ವಾಮಿ, ಕೊಲ್ಲರಪ್ಪ, ಜಿ ಆರ್ ಮಲ್ಲೇಶಪ್ಪ , ಎಸ್ ಸದಾಶಿವಯ್ಯ, ಜಿ ಒ ಮಂಜಣ್ಣ, ಬಸವರಾಜ್, ಸೇರಿದಂತೆ ಮುಂತಾದವರಿದ್ದರು