ಚಳ್ಳಕೆರೆ ನಗರ ಪೊಲೀಸ್ ಠಾಣೆ ಆವರಣದಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅವರ ಸಂಘದ ವತಿಯಿಂದ ಗರ್ಭಿಣಿ ಮಹಿಳೆಯರಿಗೆ ಉಚಿತ ಆಟೋ ಸೇವೆಯನ್ನು ನೀಡುವ ಮಹತ್ವದ ಕಾರ್ಯಕ್ಕೆ ಠಾಣೆಯ ಪಿಎಸ್‌ಐ ಕೆ.ಸತೀಶ್ ನಾಯ್ಕ್ ಚಾಲನೆ ನೀಡಿದರು.
ಇನ್ನೂ ನಂತರ ಮಾತನಾಡಿದ ಅವರು ಡಾಕ್ಟರ್ ವಿಷ್ಣುವರ್ಧನ್ ರವರು ಒಬ್ಬ ಮೇರು ನಟ ಸಾಹಸ ಸಿಂಹ ವರದ ನಾಯಕ ಇನ್ನು ಹಲವಾರು ಬಿರುದುಗಳನ್ನು ಪಡೆದು ಕರ್ನಾಟಕದ ಹೆಮ್ಮೆಯ ಪುತ್ರನಾಗಿದ್ದಾನೆ ಇವರು ನಟಿಸಿರುವ ಎಲ್ಲಾ ಚಿತ್ರಗಳಲ್ಲಿ ಸಾಮಾಜಿಕ ನೈಪುಣ್ಯತೆ ಹೊಂದಿದ್ದು ಸಮಾಜಕ್ಕೆ ನೇರ ಸಂದೇಶವನ್ನು ಕೊಡುವುದರ ಮೂಲಕ ತಮ್ಮ ಚಾಪನ್ನು ಮೂಡಿಸಿದ್ದಾರೆ ಇವರ ಮೊದಲನೇ ಚಿತ್ರ ನಾಗರಹಾವು ಚಿತ್ರದಲ್ಲಿ ಒಂದೇ ಹಾಡಿನಲ್ಲಿ ಚಿತ್ರದುರ್ಗ ಕೋಟೆಯ ಇತಿಹಾಸವನ್ನು ಸೃಷ್ಟಿಸಿದ ಮಹಾನ್ ನಾಯಕ ಹಾಗೂ ಕೃಷ್ಣ ರುಕ್ಮಿಣಿ ಚಿತ್ರದಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಎತ್ತಿ ಹಿಡಿದು ಕರ್ನಾಟಕದ ಮೇಲು ನಟ ಎಂದು ಹೆಸರುವಾಸಿಯಾಗಿದ್ದಾರೆ ಎಂದರು.

ಇAತಹ ಮಹನೀಯ ಆದರ್ಶಗಳನ್ನು ನಾವು ನೀವೆಲ್ಲ ಪಾಲಿಸಿಕೊಂಡು ಬಂದಾಗ ಮಾತ್ರ ಕನ್ನಡ ನೆಲ ಜಲ ಸಂಸ್ಕೃತಿಯನ್ನು ಉಳಿಸಿದಂತಾಗುತ್ತದೆ, ಅಲ್ಲದೆ ಇಂದಿನ ದಿನಮಾನಗಳಲ್ಲಿ ಆಟೋ ಚಾಲಕರು ತಮ್ಮ ಸಮವಸ್ತ್ರ ಡ್ರೈವಿಂಗ್ ಲೈಸೆನ್ಸ್ ಇಟ್ಟುಕೊಳ್ಳಬೇಕು ಹಾಗೂ ದಿನೇ ದಿನೇ ನಗರ ಅಭಿವೃದ್ಧಿ ಆಗಿರುವುದರಿಂದ ಟ್ರಾಫಿಕ್ ಜಾಮ್ ಅನ್ನು ತಪ್ಪಿಸಲು ನೀವೆಲ್ಲ ಸಹಕಾರಿಯಾಗಬೇಕು ಎಂದರು
ಈ ವೇಳೆ ವಿಷ್ಣು ಸೇನೆ ಅಧ್ಯಕ್ಷ ರಾಘವೇಂದ್ರ, ರವಿ, ಕರಣ, ಬೆಟ್ಟಪ್ಪ, ಕೃಷ್ಣ, ಅಬ್ಜಲ್ ಪಾಷಾ, ಕೃಷ್ಣ ಉಪ್ಪಾರ, ರಂಜಿತ್ ಕುಮಾರ್ ರಾಮಾಚಾರಿ, ರಂಜಿತ್, ಬಸವರಾಜ್ ಮಧು ಪ್ರಕಾಶ್ ಇನ್ನು ಅನೇಕ ವಿಷ್ಣುಸೇನಾ ಆಟೋ ಚಾಲಕರು ಹಾಜರಿದ್ದರು

About The Author

Namma Challakere Local News
error: Content is protected !!