ಚಳ್ಳಕೆರೆ : ತಾಲೂಕಿಮ ಕಡಬನಕಟ್ಟೆ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವಕ್ಕೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು. ಸುತ್ತಮುತ್ತಲಿನ ಹಳ್ಳಿಯ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ರಥೋತ್ಸವ ನೇರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ ನನ್ನ ಹುಟ್ಟೂರು ಆಗಿರುವ ಕಡಬನಹಟ್ಟೆಯಲ್ಲಿ ಆಂಜನೇಯ ಸ್ವಾಮಿ ರಥೋತ್ಸವಕ್ಕೆ ಸಂತಸದಿAದ ಚಾಲನೆ ನೀಡಿದ್ದೇನೆ. ಆಂಜನೇಯ ಸ್ವಾಮಿಯ ಕೃಪೆ ಚಳ್ಳಕೆರೆ ಕ್ಷೇತ್ರದ ಜನರ ಮೇಲೆ ಸದಾ ಇರಲಿ. ದೇವರಲ್ಲಿ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ ಎಂದು ಜನತೆ ಪರವಾಗಿ ನಾನು ಪ್ರಾರ್ಥಿಸಿದ್ದೇನೆ ಎಂದರು.
ಹಿಂದೂ ಧರ್ಮದ ಪರಂಪರೆಯಲ್ಲಿ ಹಬ್ಬ ಹರಿದಿನಗಳ ಮೂಲಕ ಸಂಬAಧಗಳ ಗಟ್ಟಿಗೊಳ್ಳುತ್ತದೆ. ಎಲ್ಲಾರೂ ಕೂಡಿ ಸಂತಸದಿAದ ಕಾಲ ಕಳೆಯಲು ಹಬ್ಬಗಳು ಬೇಕು. ನಾವು ಒಂದಲ್ಲ ಒಂದು ರೀತಿಯ ಒತ್ತಡದ ಬದುಕಿನಲ್ಲಿ ಸಿಲುಕಿ ನಮ್ಮ ತಂದೆ, ತಾಯಿ, ಅಕ್ಕ, ತಂಗಿ, ಮಾವ ಅಳಿಯ ಹೀಗೆ ಅನೇಕ ಸಂಬAಧಗಳನ್ನು ನೆನಪಿಸುವುದು ಹಬ್ಬದ ವಿಶೇಷ ಅಂತ ಹೇಳಬಹುದು. ನಾನು ದೇವರ ಆಶೀರ್ವಾದದಿಂದ ಎರಡು ಬಾರಿ ಶಾಸಕನಾಗಿದ್ದು ದೇವರ ಕೃಪೆ ಸದಾ ನನ್ನ ಮೇಲೆ ಇರಲಿ. ನಾನು ಬಡವರ, ಶ್ರಮಿಕರ, ಹಿಂದುಳಿದವರ ಪರ ಕೆಲಸ ಮಾಡಲು ದೇವರು ಮತ್ತಷ್ಟು ಶಕ್ತಿ ನೀಡಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಜಿ.ಎಸ್. ಜಗದೀಶ, ಜಗದೀಶ , ಹನುಮಂತಪ್ಪ, ಬಿ ಎಲ್ ಗೋಪಾಲ, ದಿಲೀಪ್ ರೆಡ್ಡಿ , ಗ್ರಾಮ ಪಂಚಾಯತಿ ಸದಸ್ಯರಾದ ಶಿವಣ್ಣ ಬಾಬು, ರಂಗಪ್ಪ ರೆಡ್ಡಿ ,ಬೊಮ್ಮಯ್ಯ, ತಿಪ್ಪೇಸ್ವಾಮಿ, ಪ್ರಕಾಶ್ ರೆಡ್ಡಿ ,ಮಹೇಶ್ ರೆಡ್ಡಿ ಮತ್ತು ಸಾವಿರಾರು ಭಕ್ತರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!