ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ರಾಜಾಕೀಯ ಗರಿಗೆದರಿದ್ದು ಮೂರು ಪಕ್ಷಗಳಿಂದ ಭರ್ಜರಿಯಾಗಿ ತಾಲೀಮು ನಡೆಯುತ್ತಿದೆ.
ಇನ್ನೂ ಮೂರು ಪಕ್ಷಗಳಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮವು ಕೂಡ ಜೋರಾಗಿಯೇ ನಡೆಯುತ್ತಿದೆ. ಆದರಂತೆ ಹಾಲಿ ಶಾಸಕ ಟಿ.ರಘುಮೂರ್ತಿ ಈಡೀ ಕ್ಷೇತ್ರದಲ್ಲಿ ಪುಲ್‌ರೌಂಡ್ಸ್ ಹೊಡೆಯುವುದರ ಮೂಲಕ ಹಲವು ಖಾಸಗಿ ಕಾರ್ಯಕ್ರಮಗಳಲ್ಲಿ ಬಾಗಿಯಾಗಿ ಕಾಂಗ್ರೇಸ್ ಪಕ್ಷ ಬಲ ಪಡಿಸುತ್ತಿದ್ದಾರೆ. ಅದರಂತೆ ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೇಸ್ ಪಕ್ಷಕ್ಕೆ ಸೇರಿಕೊಂಡ ದೊಡ್ಡಣ್ಣನ ಅಳಿಯ ಕೆ.ಸಿ.ವೀರೇಂದ್ರ ಪಪ್ಪಿರವರು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದದಿಂದ ಕಣಕ್ಕೀಳಿಯುವ ಮೂಲಕ ತನ್ನದೆ ಆದ ವರ್ಚಸ್ಸು ಪಡೆದುಕೊಂಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಚಳ್ಳಕೆರೆ ಕ್ಷೇತ್ರದಲ್ಲಿ ತ್ರೀಕೋನ ಸ್ಪರ್ಧೆಗೆ ಸಜ್ಜಾಗುವ ಮೂರು ಪಕ್ಷಗಳು ಬಲಾ ಬಲ ತೋರಿಸುವ ಎಲ್ಲಾ ತಯಾರಿ ತೆರೆಮರೆಯಲ್ಲಿ ನಡೆಯುತ್ತಿತ್ತು, ಆದರೆ ಆಯಿಲ್ ಸಿಟಿಯಲ್ಲಿ ತಮ್ಮದೇ ಲಿಂಗಾಯಿತ ಹಾಗೂ ಸಹ ಸಮುದಾಗಳ ಮತ ಬ್ಯಾಂಕ್ ಹೊಂದಿರುವ ಕೆ.ಸಿ.ವೀರೇಂದ್ರ ಪಪ್ಪಿ, ಜೆಡಿಎಸ್ ಬಿಟ್ಟು ಕಾಂಗ್ರೇಸ್‌ಗೆ ಹೋಗಿರುವುದರಿಂದ ಕ್ಷೇತ್ರದಲ್ಲಿ ತಮ್ಮದೇ ಆದ ಓಟ್ ಬ್ಯಾಂಕ್ ಕಾಂಗ್ರೇಸ್ ಪಾಲಗಲಿವೆ ಎಂಬ ಆತಂಕ ಜೆಡಿಎಸ್‌ನಲ್ಲಿ ಮನೆ ಮಾಡಿದೆ, ಇನ್ನೂ ಇದಕ್ಕೆ ಹಿಂಬು ನೀಡುವಂತೆ ಕ್ಷೇತ್ರದಲ್ಲಿ ನೂತನವಾಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ವೀರಭದ್ರಯ್ಯ ಹಾಗೂ ಕಾಂಗ್ರೇಸ್ ಮುಖಂಡರು ಪಪ್ಪಿರವರಿಗೆ ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿರುವುದು ಬಾರೀ ಚರ್ಚೆಗೆ ಗ್ರಸವಾಗಿದೆ.
ಈ ಹಿನ್ನೆಲೆಯಲ್ಲಿ ಆಯಿಲ್ ಸಿಟಿಯಲ್ಲಿ ಜೆಡಿಎಸ್‌ಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆಯೇ ಎಂಬ ಮಾತುಗಳು ಜೋರಾಗಿವೆ, ಈಗೇ 2023ರ ರಾಜಾಕೀಯ ಕೊನೆ ಕ್ಷಣದÀಲ್ಲಿ ಭಾರೀ ಸಂಚಲನಕ್ಕೆ ಕಾರಣಿಭೂತವಾಗುವ ಎಲ್ಲಾ ಲಕ್ಷಣಗಳು ಕಾಣಸಿಗುತ್ತಾವೆ, ಆದರೆ ಕಳೆದ ಬಾರಿ ಚುನಾವಣೆಯಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡ ಎಂ.ರವೀಶ್ ಕುಮಾರ್ ಮಾತ್ರ ಈಡೀ ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸು ಗಳಿಸುವುದರ ಮೂಲಕ 2023ರ ಗೆಲುವಿನತ್ತ ಸಾಗುತ್ತಿದ್ದಾರೆ.
ಇನ್ನೂ ಬಿಜೆಪಿಯಲ್ಲಿ ಅರ್ಧ ಡಜನ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಯಾರಿಗೇ ಟಿಕೆಟ್ ಎಂಬುದು ಬಾರೀ ಕುತೂಹಲವಾಗಿದೆ ಆದರೆ ಕಣದಲ್ಲಿ ಆರು ಜನರ ಕಾರುಬಾರು ಜೋರಾಗಿದೆ ಈಗೇ ಬಿಜೆಪಿಯಲ್ಲಿ ಅಭ್ಯರ್ಥಿ ನಿಗಧಿಯಾಗದ್ದಿರು ತನ್ನ ವರ್ಚಸ್ಸು ಮಾತ್ರ ಹಿನ್ನಡೆಯಾಗಿಲ್ಲ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ, ಅದರಂತೆ ಚಿತ್ರದುರ್ಗ ಜಿಲ್ಲೆಗೆ ಫೆ.27ರಂದು ಆಗಮಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿನಿಧಿಸುವ ಮಹತ್ವದ ಸಭೆಯಲ್ಲಿ ಚಳ್ಳಕೆರೆ ಕ್ಷೇತ್ರದ ಅಭ್ಯರ್ಥಿಯು ಪಿಕ್ಸ್ ಹಾಗುವ ಎಲ್ಲಾ ಸೂಚನೆಗಳು ಕಾಣಸಿಗುತ್ತಿವೆ.
ಅದರಂತೆ ಆಯಿಲ್ ಸಿಟಿಯಲ್ಲಿ ಹಾಲಿ ಶಾಸಕರನ್ನು ಮಣಿಸಲು ಎರಡು ಪಕ್ಷಗಳ ರಣ ತಂತ್ರಗಾರಿಕೆ ಇಲ್ಲಿ ಉಪಯೋಗವಾಗಬಹುದಾ, ಎಂಬುದು ಮತದಾರರ ಮನದಾಳದ ಮಾತಾಗಿದೆ, ಇನ್ನೂ ಕಳೆದ ಹತ್ತು ವರ್ಷಗಳ ಸಾಧನೆಯನ್ನು ಹಾಲಿ ಶಾಸಕರು ಮತದಾರರ ಮುಂದೆ ಇಟ್ಟರೆ, ಬಿಜೆಪಿ ಹಾಗೂ ಜೆಡಿಎಸ್‌ಗೆ ಯಾವುದೇ ಅಸ್ತçಗಳು ಇಲ್ಲವಾಗಿವೆ ಆದರೆ ಕೇಂದ್ರ ಮತ್ತು ರಾಜ್ಯದ ಪ್ರಮುಖ ಅಸ್ತçಗಳು ಕ್ಷೇತ್ರದಲ್ಲಿ ಬಳಕೆಯಾಗುವುದಾ… ಆಯಿಲ್ ಸಿಟಿಯಲ್ಲಿ ಎಂಬುದು ಯಕ್ಷ ಪ್ರಶ್ನೇಯಾಗಿದೆ.