ಚಳ್ಳಕೆರೆ : ಹವಳಿ ಕ್ಷೇತ್ರಗಳ ಸಾರ್ವಜನಿಕರು ಗೋಳು ಕೇಳುವರ‍್ಯಾರು ಎಂಬುದು ಈ ಗಡಿ ಭಾಗದ ಗ್ರಾಮೀಣ ಭಾಗದ ಜನರನ್ನು ನೋಡಿದರೆ ತಿಳಿಯುತ್ತದೆ.
ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮತದಾರರ ಕ್ಷೇತ್ರವಾಗಿದೆ ಆದರೆ ಇಲ್ಲಿ ಆಡಳಿತ ಒಂದೆಡೆ, ಮತ ನೀಡುವುದು ಇನ್ನೋಂದೆಡೆ ಈಗೇ ಅಭಿವೃದ್ದಿ ಮಾತ್ರ ಕುಂಠಿತವಾಗಿದೆ.
ಇAತಹ ಸಂಕಷ್ಟದಲ್ಲಿ ಇರುವ ಹಲವು ಗ್ರಾಮಗಳನ್ನು ಕಾಣಬಹುದು ಅದರಂತೆ ಆಂದ್ರಪ್ರದೇಶದ ಗಡಿಯನ್ನು ಹಂಚಿಕೊAಡ ಗೌರಸಮುದ್ರದ ಗ್ರಾಮದ ಆರೋಗ್ಯ ಉಪಕೇಂದ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಾನ್ನಾಗಿ ಮೇಲ್ದರ್ಜೆಗೇರಿಸಿ ಮಹಿಳಾ ವೈದ್ಯರನ್ನು ನೇಮಿಸುವಂತೆ ಗ್ರಾಮದ ಸದಸ್ಯರು ವಕೀಲರಾದ ಶಿವಕುಮಾರ್ ಆಗ್ರಹಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗೌರಸಮುದ್ರ ಗ್ರಾಮ ಚಳ್ಳಕೆರೆ ತಾಲೂಕು ಕೇಂದ್ರದಿAದ ಸುಮಾರು 40 ಕೀ.ಮೀ ದೂರ ಇದ್ದರೆ ಬೇಡರೆಡ್ಡಿಹಳ್ಳಿ ಗ್ರಾಮ 12 ಕಿ.ಮೀ ದೂರವಿದ್ದು, ಗೌರಸಮುದ್ರ ಗ್ರಾಪಂ ವ್ಯಾಪ್ತಿಯಲ್ಲಿ 10 ಸಾವಿರ ಜನಸಂಖ್ಯೆ ಇದೆ, ಇನ್ನೂ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ವೈದ್ಯಕೀಯ ಸೌಲಭ್ಯ ಹೆಚ್ಚಿಸಬೇಕು, ಇದರಿಂದ ಆಂಧ್ರದ ಗಡಿ ಅಂಚಲ್ಲಿರುವ ಓಬಣ್ಣನಹಳ್ಳಿ, ಕೊತ್ತಾರಹಟ್ಟಿ, ತಿಮ್ಲಾಪುರ, ಮಲ್ಲಸಮುದ್ರ ದೇವರಹಳ್ಳಿ, ರುದ್ರಮ್ಮನಹಳ್ಳಿ, ಈಗೇ 15ಕ್ಕೂ ಹೆಚ್ಚು ಗ್ರಾಮಗಳ ಸಾರ್ವಜನಿಕರಿಗೆ ನೆರವಾಗಬಹುದು.
ಸಾರಿಗೆ ವ್ಯವಸ್ಥೆ ನೆಪಮಾತ್ರಕ್ಕೆ :
ಈ ವ್ಯಾಪ್ತಿಯ ಗ್ರಾಮಗಳ ಶಾಲಾ ಮಕ್ಕಳು, ರೈತರು, ವೃದ್ದರು, ಸಾರ್ವಜನಿಕರು ಇನ್ನೂ ಹಲವು ವರ್ಗದ ನೂರಾರು ಜನರು ಈ ಮಾರ್ಗವಾಗಿ ಶಾಲಾ ಕಾಲೇಜುಗಳಿಗೆ, ಆಸ್ವತ್ರೆಗಳಿಗೆ, ಇನ್ನೂ ಅನ್ಯ ಕಾರ್ಯಗಳತ್ತ ನಗರತ್ತ ಹೋಗುವ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆ ಕೇವಲ ನೆಪ ಮಾತ್ರಕ್ಕೆ ಇವೆ, ಇನ್ನೂ ಹೆರಿಗೆ ಹಾಗೂ ತುರ್ತು ಚಿಕಿತ್ಸೆಗೆ ಚಳ್ಳಕೆರೆ ಹಾಗೂ ಬೇಡರೆಡ್ಡಿಹಳ್ಳಿಗೆ ಹೊಗಬೇಕಾದ ಅನಿವಾರ್ಯತೆ ಇದ್ದು ತುರ್ತು ಚಿಕಿತ್ಸೆ ಸಂಧರ್ಭದಲ್ಲಿ ಸಾರಿಗೆ ವ್ಯವಸ್ತೆ ಇಲ್ಲದೆ ಸಾವು ಸಂಭವಿಸಿರುವ ಪ್ರಕರಣಗಳು ಇವೆ.
ಬಹುದೂರವಾದ ಆರೋಗ್ಯ ಕೇಂದ್ರ :
ಬೇಡರಡ್ಡಿಹಳ್ಳಿಯಲ್ಲಿ ಆರೋಗ್ಯ ಕೇಂದ್ರವಿದ್ದರೂ ಗೌರಸಮುದ್ರದಿಂದ ದೂರ (12 ಕಿಮೀ) ವಾಗಲಿದೆ. ಗೌರಸಮುದ್ರದ ಮಾರಮ್ಮ ದೇವಿಯ ದೇಗುಲಕ್ಕೆ ಬರುವವರೂ ತುರ್ತು ಚಿಕಿತ್ಸೆಗೆ ಬೇಡರಡ್ಡಿಹಳ್ಳಿಗೆ ತೆರಳಬೇಕು, ಈ ರಸ್ತೆಯಲ್ಲಿ ಗರ್ಭಿಣಿ, ಬಾಣಂತಿಯರು, ಮಕ್ಕಳು, ಹಿರಿಯರು ಸಂಚರಿಸುವAತಿಲ್ಲ. ಮೇಲಾಗಿ ಬಸ್ ಸೌಕರ್ಯದ ಕೊರತೆ ಇದೆ ಆದ್ದರಿಂದ ಗೌರಸಮುದ್ರದ ಉಪ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಜತೆ ಮಹಿಳಾ ವೈದ್ಯರ ನೇಮಕ ಮಾಡುವಂತೆ ಗೌರಸಮುದ್ರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.